fbpx
ಸಿನಿಮಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ ಡೇ ಗೆ ನೆಚ್ಚಿನ ಮಡದಿ ವಿಜಯ ಲಕ್ಷ್ಮಿ ಅವರಿಂದ ಭರ್ಜರಿ ಗಿಫ್ಟ್

 

ದೇವರ ಹೆಸರಲ್ಲಿ ಉತ್ಸವ ಹಬ್ಬ ಮಾಡೋದು ವಾಡಿಕೆ ಆದರೆ ದೇವರ ರೀತಿಯಲ್ಲಿ ಮಾನವನಿಗೂ ಜಾತ್ರೆಯ ರೀತಿ ಹಬ್ಬ ಮಾಡಬೇಕು ಅಂದರೆ ಆತ ಕಲಾವಿದನಾಗಿರುತ್ತಾನೆ ಎಂತಲೇ ಅರ್ಥ. ಹೌದು ಅಂತಹ ಕಲಾವಿದರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್. ಸ್ಯಾಂಡಲ್ ವುಡ್ ನಲ್ಲಿ ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ದಚ್ಚು ಹುಟ್ಟು ಹಬ್ಬಕ್ಕಾಗಿ ಅವರ ಅಭಿಮಾನಿಗಳು ತಿಂಗಳಿಂದಲೇ ತಯಾರಿ ನಡೆಸಿಕೊಂಡು ಬಂದಿದ್ದಾರೆ.

 

 

ದೇವರ ಹಬ್ಬಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುವ ರೀತಿಯಲ್ಲಿ ಫೆಬ್ರವರಿ 16ರ ನಟ ದರ್ಶನ್ ಅವರ ಹುಟ್ಟುಹಬ್ಬದ ಸಿದ್ಧತೆ ಜೋರಾಗಿ ನಡೆಯುತ್ತಾ ಇದೆ. ಈ ಭಾರಿ ಡಿ ಉತ್ಸವ ಎಂಬ ಹೆಸರಿನಲ್ಲಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ಆಚರಣೆಯನ್ನು ಮಾಡುತ್ತಿರುವ ದರ್ಶನ್ ಅಭಿಮಾನಿಗಳು ಮುಂದಿನ ವರ್ಷದಿಂದ ಇದೇ ಹೆಸರಿನಲ್ಲಿ ಆಚರಿಸುತ್ತಾರಂತೆ. ಅಷ್ಟೇ ಅಲ್ಲದೇ ದರ್ಶನ್ ಹುಟ್ಟುಹಬ್ಬಕ್ಕೆಂದು ಅಧಿಕೃತ ಲೋಗೋವನ್ನು ಕೂಡ ಮಾಡಿಸಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡುವ ಸೂಚನೆಯನ್ನು ನೀಡಿದ್ದಾರೆ.

 

 

ಡಿ ಕಂಪನಿ ಸೇರಿದಂತೆ ದರ್ಶನ್ ಹೆಸರಿನಲ್ಲಿರುವ ಅನೇಕ ಅಭಿಮಾನಿ ಸಂಘಗಳು ಸೇರಿ ದರ್ಶನ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ನಡೆಸಲು ಮುಂದಾಗಿದ್ದು ಅದಕ್ಕಾಗಿ ರಾಜ್ಯದ ವಿವಿಧ ಭಾಗಗಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆಯಂತೆ. ಇನ್ನು ಹಿರೇಕೆರೂರಿನಲ್ಲಿ ದರ್ಶನ್ ಅಭಿಮಾನಿಗಳ ಸಂಘಟನೆಯಿಂದ ಕಬ್ಬಡಿ ಪಂದ್ಯಾವಳಿಯನ್ನ ಆಯೋಜಿಸಲಾಗಿದೆ..

ಈ ಭಾರಿಯ ಇಷ್ಟೊಂದು ವಿಶೇಷವಾಗಿ ದರ್ಶನ್ ಹುಟ್ಟುಹಬ್ಬವನ್ನು ಆಚರಿಸಲು ಕಾರಣವೆಂದರೆ ಅವರು ತಮ್ಮ ವೃತ್ತಿ ಬದುಕಿನಲ್ಲಿ 50 ಚಿತ್ರಗಳನ್ನು ಪೂರೈಸಿರುವುದು. ಹಾಗಾಗಿ 50ನೇ ಚಿತ್ರದ ಸಂಭ್ರಮ ಮತ್ತು ದರ್ಶನ್ ಹುಟ್ಟುಹಬ್ಬ ಎರಡು ಕೂಡ ಒಂದೇ ವೇದಿಕೆಯಲ್ಲಿ ಅದ್ಧೂರಿಯಾಗಿ ಮಾಡು ಪ್ಲಾನ್ ದರ್ಶನ್ ಅಭಿಮಾನಿಗಳದ್ದು.ಕುರುಕ್ಷೇತ್ರ ಸಿನಿಮಾದಲ್ಲಿನ ದರ್ಶನ್ ಅವರ ದುರ್ಯೋಧನನ ಲುಕ್ ಅನ್ನು ಸ್ಯಾಂಡ್ ಆರ್ಟ್’ನಲ್ಲಿ ಮಾಡಿಸಲಾಗಿದೆ. ಇದೇ ದಿನ ಕುರುಕ್ಷೇತ್ರ ಚಿತ್ರದ ಟೀಸರ್ ಕೂಡ ರಿಲೀಸ್ ಆಗುವ ಸಾಧ್ಯತೆ ಇದೆ.

 

ವಿಜಯ ಲಕ್ಷ್ಮಿ ಅವರಿಂದ ಭರ್ಜರಿ ಗಿಫ್ಟ್

 

ಹೀಗೆ ಅಭಿಮಾನಿಗಳು ತರತರದ ಗಿಫ್ಟ್ ಗಳನ್ನು ನೀಡುತ್ತಿದ್ದಾರೆ ಅಭಿಮಾನಿಗಳು ,ಇನ್ನು ದರ್ಶನ್ ಅವರ ಮನ ಮೆಚ್ಚಿದ ಮಡದಿ ವಿಜಯ ಲಕ್ಷ್ಮಿ ದರ್ಶನ್ ಹುಟ್ಟುಹಬ್ಬಕ್ಕೆ ವಿಶೇಷ ಬಹುಮಾನವನ್ನು ನೀಡಲು ಮುಂದಾಗಿದ್ದಾರೆ .

ವಿಜಯ ಲಕ್ಷ್ಮಿ ದರ್ಶನ್ ತಮ್ಮ ಎಡ ಗೈನ ಉಂಗುರದ ಬೆರಳಿನ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ , ಹಚ್ಚೆಯ ಕೆಳಗೆ ಒಂದು ಹಾರ್ಟ್ ಸಿಂಬಲ್ ಕೂಡ ಇದೆ ಇನ್ನು ಈ ಫೋಟೋ ಅಪ್ಲೋಡ್ ಮಾಡಿದ್ದೆ ತಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ .

 

 

ಈ ಫೋಟೋ ದಲ್ಲಿ ಬೆಕ್ಕಿನ ಮರಿಯೊಂದನ್ನು ಹಿಡಿದಿದ್ದು ಇದನ್ನು ದರ್ಶನ್ ಅವರಿಗೆ ಉಡುಗೊರೆ ಕೊಡುತ್ತಾರೋ ಇಲ್ಲವೋ ತಿಳಿದು ಬಂದಿಲ್ಲ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top