fbpx
ವಾಸ್ತು

ವಾಸ್ತು ಶಾಸ್ತ್ರದ ಪ್ರಕಾರ ಏಳು ಕುದುರೆಗಳು ಓಡುತ್ತಿರುವ ಚಿತ್ರ ಇಟ್ಟುಕೊಂಡ್ರೆ ಎಷ್ಟೆಲ್ಲ ಲಾಭ ಆಗುತ್ತೆ ಗೊತ್ತಾ ?

ವಾಸ್ತು ಶಾಸ್ತ್ರದ ಪ್ರಕಾರ ಏಳು ಕುದುರೆಗಳು ಓಡುತ್ತಿರುವ ಚಿತ್ರ ಇಟ್ಟುಕೊಂಡ್ರೆ ಎಷ್ಟೆಲ್ಲ ಲಾಭ ಆಗುತ್ತೆ ಗೊತ್ತಾ ?

ವ್ಯಾಪಾರದಲ್ಲಿ ಮತ್ತು ಉದ್ಯೋಗದಲ್ಲಿ ಸತತವಾಗಿ ಸೋಲನ್ನು ಕಾಣುತ್ತಿದ್ದರೆ, ಮನೆಯಲ್ಲಿ ಮತ್ತು ಮನಸ್ಸಿನಲ್ಲಿ ನೆಮ್ಮದಿ ಇರುವುದಿಲ್ಲ. ಆಗ ನಾವು ವಾಸ್ತುವಿನ ಕಡೆ ಮುಖ ಮಾಡುತ್ತೇವೆ, ಹಾಗೆ ಮಾಡದೇ ನಮಗೆ ಅದೃಷ್ಟ ಇರುವಾಗಲೇ ನಾವು ಎಚ್ಚರ ವಹಿಸಿದರೆ ಒಳ್ಳೆಯದು, ಎಂದು ವಾಸ್ತು ತಜ್ಞರು ಹೇಳುತ್ತಿದ್ದಾರೆ .

 

 

ಮನೆಯಲ್ಲಿ ಕುದುರೆ ಇರುವ ಫೋಟೋಗಳನ್ನು ಇಟ್ಟರೆ ಶ್ರೇಯಸ್ಸು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಮನೆಯ ಮತ್ತು ಮನಸ್ಸಿನಲ್ಲಿರುವ ಮನಸ್ಸುಗಳ ಒಳಿತಿಗೆ ಎಷ್ಟು ? ಕುದುರೆ ಇರುವ ಫೋಟೋಗಳನ್ನು ಇಟ್ಟುಕೊಳ್ಳಬೇಕು ? ಹೇಗಿರಬೇಕು ? ಆ ಫೋಟೋ ಎಲ್ಲಿರಬೇಕು ? ಅವು ಯಾವ ಕಡೆಗೆ ಮುಖ ಮಾಡಿರಬೇಕು ? ಯಾವ ಗೋಡೆಗೆ ಹಾಕಬೇಕು ? ಎಂಬುದನ್ನು ಈಗ ನಾವು ತಿಳಿದುಕೊಳ್ಳೋಣ………………
ಕುದುರೆಯ ಫೋಟೋಗಳು ಯಾವಾಗಲೂ ಸಂತಸದಿಂದ ಓಡುತ್ತಿರುವ ಹಾಗೆ ಇರುವಂತೆ ನೋಡಿ ತರಬೇಕು. ಎಲ್ಲಾ ಕುದುರೆಗಳು ಒಂದೇ ದಿಕ್ಕಿನತ್ತ ಓಡುವಂತಿರಬೇಕು. ಒಂದೊಂದು ಕುದುರೆಗಳು ಒಂದೊಂದು ದಿಕ್ಕಿಗೆ ಓಡುವಂತೆ ಇರಬಾರದು.

 

 

ಉತ್ತರ ದಿಕ್ಕಿನಲ್ಲಿ ಕುದುರೆ ಇರುವ ಫೋಟೋಗಳನ್ನು ಇಟ್ಟರೆ’ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಿ ಅಂದುಕೊಂಡ ಕೆಲಸ ಪೂರ್ತಿಯಾಗುತ್ತದೆ. ಹಾಗೆಯೇ ಆರ್ಥಿಕ ಸಮಸ್ಯೆಗಳು ಇದ್ದರೂ ಸಹ ಅದು ದೂರವಾಗುತ್ತದೆ.
ಮನೆಯಲ್ಲಿ ಅಥವಾ ವ್ಯಾಪಾರ ಮಾಡುವ ಜಾಗದಲ್ಲಿ ಕುದುರೆ ಇರುವ ಫೋಟೋಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ, ಸಕಾರಾತ್ಮಕ ಶಕ್ತಿ ಹೆಚ್ಚಾಗಿ ವ್ಯಾಪಾರದಲ್ಲಿ ಲಾಭವನ್ನು ಕಾಣಬಹುದಾಗಿದೆ. ಒಂದು ವೇಳೆ ಅದಕ್ಕೆ ಅವಕಾಶ ಇಲ್ಲದೇ ಇದ್ದಲ್ಲಿ ಪೂರ್ವ ಭಾಗದ ಗೋಡೆಯಲ್ಲಿ ಇಡಬಹುದು, ಕುದುರೆ ಇರುವ ಫೋಟೋಗಳನ್ನು ಬಾಗಿಲಿನ ಕಡೆ ಮುಖ ಮಾಡಿ ಇಟ್ಟರೆ ಮನೆಗೆ ಒಳ್ಳೆಯದು.
ಬೆನ್ನಿನ ಮೇಲೆ ಚಿನ್ನದ ಗಟ್ಟಿಯನ್ನು ಹೊತ್ತು ನಿಂತಿರುವ ಕಂಚಿನ ಜೋಡಿ ಕುದುರೆಗಳನ್ನು, ಕಚೇರಿ ಅಥವಾ ವ್ಯಾಪಾರ ಸ್ಥಳದಲ್ಲಿ ಇಟ್ಟುಕೊಳ್ಳುವುದು ಉತ್ತಮ. ಇವು ಯಶಸ್ಸು, ಖ್ಯಾತಿ, ಗೆಲುವು ಮತ್ತು ಗೌರವವನ್ನು ಪ್ರತಿನಿಧಿಸುತ್ತವೆ .

 

 

ನಾಣ್ಯಗಳ ರಾಶಿ ಮತ್ತು ನಿಧಿಯ ಮೇಲೆ ಕಾಲು ಊರಿ ನಿಂತಿರುವ ಕುದುರೆಯು ಅದೃಷ್ಟ, ಖ್ಯಾತಿ, ಸಂಪತ್ತು , ಸ್ಥಿರತೆ ಮತ್ತು ಸಂತೋಷವನ್ನು ಪ್ರತಿಬಿಂಬಿಸುತ್ತದೆ .
ಕಿಟಕಿ ಬಚ್ಚಲು ಅಥವಾ ಶೌಚಾಲಯಕ್ಕೆ ಮುಖ ಮಾಡುವಂತೆ ಈ ಫೋಟೋಗಳನ್ನು ಹಾಕಬೇಡಿ. ಓಡುತ್ತಿರುವ ಏಳು ಕುದುರೆಗಳಿರುವ ಫೋಟೋಗಳಿಗೆ ಹೆಚ್ಚಿನ ಮಹತ್ವವಿದೆ. ಇದು ಯಶಸ್ಸು ಮತ್ತು ಅಧಿಕಾರವನ್ನು ಸಂಕೇತಿಸುತ್ತದೆ.ಖಾಸಗಿ ಹಾಗೂ ವೃತ್ತಿ ಬದುಕಿನ ಯಶಸ್ಸಿಗೆ ಇದು ಪುಷ್ಟಿ ನೀಡುತ್ತದೆ.

 

 

ಇನ್ನು ವಾಸ್ತು ಶಾಸ್ತ್ರ ಹೇಳುತ್ತದೆ ಹಗ್ಗ ಅಥವಾ ಜೀನು ಇರುವ ಕುದುರೆ ಫೋಟೋಗಳನ್ನು ಇಟ್ಟರೆ ಒಳ್ಳೆಯದು. ಇದರಿಂದ ಅದೃಷ್ಟ ಕೂಡಿ ಬರುತ್ತದೆ.
ಎರಡು ಜೋಡಿ ಕುದುರೆ ಇರುವ ಫೋಟೋಗಳನ್ನು ಮಲಗುವ ಕೋಣೆಯಲ್ಲಿ ಇಟ್ಟುಕೊಂಡರೆ ದಂಪತಿಗಳ ನಡುವೆ ಕಲಹಗಳು ಇರುವುದಿಲ್ಲ. ಇದರಿಂದ ಸುಖವಾದ ಸಂಸಾರದೊಂದಿಗೆ ಬಾಳುತ್ತಾರೆ .ಮಲಗುವ ಕೋಣೆಯಲ್ಲಿ ಯಾವಾಗಲೂ ಒಂಟಿ ಕುದುರೆ ಫೋಟೋವನ್ನು ಇಡಬಾರದು ಜೋಡಿ ಇರುವ ಕುದುರೆ ಫೋಟೋಗಳನ್ನು ಇಟ್ಟುಕೊಂಡರೆ ಒಳ್ಳೆಯದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top