fbpx
ಸಿನಿಮಾ

ನಟಿ ಜಾಕಿ ಭಾವನಾ – ಆರತಕ್ಷತೆ ಸಂಭ್ರಮದ ಬಲು ಅಪರೂಪದ ಚಿತ್ರಗಳು

 

ಬಹುಭಾಷಾ ನಟಿ, ಮಲಯಾಳಂ ಬೆಡಗಿ ಭಾವನಾ ಮೆನನ್  ಕನ್ನಡ ಚಿತ್ರ ನಿರ್ಮಾಪಕ ಮತ್ತು ಭಾವನಾ ಅವರ ಬಹುಕಾಲದ ಗೆಳೆಯ ನವೀನ್  ದಾಂಪತ್ಯ ಜೀವನಕ್ಕೆ 22 ಜನವರಿಯಂದು ಕಾಲಿಟ್ಟಿದ್ದರು

ಬೆಳಗ್ಗೆ 10.30ರ ವೇಳೆಗೆ ಕೊಚ್ಚಿಯ ತ್ರಿಸೂರ್’ನಲ್ಲಿರುವ ಜವಹರ್’ಲಾಲ್ ಕನ್ವೆನ್ಷನ್ ಹಾಲ್ ನಲ್ಲಿ ಮದುವೆ ನಡೆದಿತ್ತು ಎರಡು ಕುಟುಂಬಗಳ ಸಂಬಂಧಿಕರು ಹಾಗೂ ಆಪ್ತರಷ್ಟೇ ಮದುವೆಯಲ್ಲಿ ಪಾಲ್ಗೊಂಡಿದ್ದರು . ಅಂದೇ ತ್ರಿಶೂರ್ ನಲ್ಲಿಯೇ ಅದ್ದೂರಿ ರೆಸೆಪ್ಷನ್ ಇಟ್ಟುಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಚಿತ್ರರಂಗದವರು, ವಿಐಪಿಗಳು, ಸೆಲೆಬ್ರಿಟಿಗಳು, ಪಾಲ್ಗೊಂಡಿದ್ದರು.

ಕೇರಳದಲ್ಲಿ ನಡೆದ ಆರತಕ್ಷತೆ

 

 

 

 

ಬೆಂಗಳೂರಲ್ಲಿ ನಡೆದ ಆರತಕ್ಷತೆ

 

 

 

 

 

 

 

 

 

ಭಾವನಾ ಕನ್ನಡ ಚಿತ್ರರಂಗಕ್ಕೂ ಪರಿಚಯವಿರುವುದರಿಂದ ಅಲ್ಲದೆ ಅವರು ಮದುವೆಯಾಗುತ್ತಿರುವುದು ಕರ್ನಾಟಕದವರನ್ನೇ ಆಗಿರುವುದರಿಂದ ಫೆಬ್ರವರಿ ನಾಲ್ಕರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಅದರಲ್ಲಿ ಕನ್ನಡ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು .

ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಜಾಕಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದ ಭಾವನಾ ನಂತರ ಬಂದ `ರೋಮಿಯೊ’, `ವಿಷ್ಣುವರ್ಧನ’ `ಬಚ್ಚನ್’ ‘ಟೋಪಿವಾಲ’ ‘ಮುಕುಂದ ಮುರಾರಿ’ ಚಿತ್ರಗಳಲ್ಲೂ ಅಭಿನಯಿಸಿದ್ದರು. ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಟಗರು ಚಿತ್ರದಲ್ಲೂ ಕೂಡ ಭಾವನಾ ನಟಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top