fbpx
ಮನೋರಂಜನೆ

ನಿರೂಪಕಿ ಮಯೂರಿ ನಟನೆಯ ಕಾಟೇರಿ!

ನಿರೂಪಕಿ ಮಯೂರಿ ನಟನೆಯ ಕಾಟೇರಿ!

 

 

ಅದ್ದೂರಿ ಸಭೆಗಳು, ಹೆಸರಾಂತ ಕಂಪೆನಿಗಳ ಉತ್ಪನ್ನಗಳ ಲೋಕಾರ್ಪಣೆ ಸಮಾರಂಭಗಳು, ಸ್ಟಾರ್ ಹೋಟೆಲ್‌ಗಳಲ್ಲಿ ನಡೆಯುವ ಈವೆಂಟ್ ಗಳ ನಿರೂಪಕಿಯಾಗಿ ಹೆಸರು ಮಾಡಿರುವರು ಮಯೂರಿ ಶಾ. ಈಗ ಮಯೂರಿ ಕಾಟೇರಿ ಎನ್ನುವ ದೃಶ್ಯರೂಪಕವೊಂದರಲ್ಲಿ ನಟಿಸಿದ್ದಾರೆ.

 


ಚಿತ್ರಜಗತ್ತಿಗೆ ಎಂಟ್ರಿ ಕೊಡುವ ಮುನ್ನ ಸಾಕಷ್ಟು ಜನ ತಮ್ಮ ಪ್ರತಿಭೆಯನ್ನು ತೋರಿಸಲು ಕಿರುಚಿತ್ರವನ್ನು ಸಿದ್ದಪಡಿಸಿಕೊಂಡು ಅದನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಾರೆ. ಇದರಲ್ಲಿ ಒಂದಷ್ಟು ಕಲಾವಿದರು, ತಂತ್ರಜ್ಞರು ಯಶಸ್ವಿಯಾಗಿ ಬಣ್ಣದಲೋಕದಲ್ಲಿ ಬ್ಯುಸಿ ಇದ್ದಾರೆ. ಅದರಂತೆ ಕೆ.ಜಿ.ಎಫ್ ಕಡೆಯವರಾದ ರಾಜೇಶ್ ರಾಜನ್ ಎಂಟು ಲಕ್ಷ ಖರ್ಚು ಮಾಡಿ ಆರೂವರೆ ನಿಮಿಷದ ’ಕಾಟೇರಿ’ ಎನ್ನುವ ದೃಶ್ಯರೂಪಕಕ್ಕೆ ಕತೆ, ಚಿತ್ರಕತೆ, ನಿರ್ದೇಶನ ಜೊತೆಗೆ ನಿರ್ಮಾಣ ಮಾಡಿ ನಟಿಸಿದ್ದಾರೆ. ಪ್ರಸಕ್ತ ಜಗತ್ತಿನಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಬಲತ್ಕಾರ, ಕಿರುಕುಳಗಳು ಕೊನೆಯಾಗಬೇಕು.

 

ವನಿತೆಯನ್ನು ಕಾಡಿದರೆ ಏನಾಗುತ್ತದೆ ಎಂಬ ಎಚ್ಚರಿಕೆ, ಮಹಿಳೆ ಅಬಲೆ ಅಲ್ಲ ಆಕೆ ಸಬಲಳು ಎಂಬುದನ್ನು ಜನರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆಯಂತೆ. ಹಾಡನ್ನು ವೀಕ್ಷಿಸಿದ ನಿವೃತ್ತ ಪೋಲೀಸ್ ಆಯುಕ್ತ ಶಂಕರ್‌ಬಿದರಿ ಇಂತಹ ಪ್ರಯತ್ನ ಮಾಡಿರುವ ನಿರ್ಮಾಪಕರ ಧೈರ್ಯವನ್ನು ಮೆಚ್ಚಬೇಕಾಗಿದೆ ಎಂದು ಶ್ಲಾಘಿಸಿದರು.

ರೇಡಿಯೋ ಜಾಕಿ ಪ್ರದೀಪ್ ಅವರ ಸಕತ್ ಸ್ಟುಡಿಯೋದಲ್ಲಿ ಈಗಾಗಲೆ ವೆಬ್ ಸೀರೀಸ್ ಮೂಲಕ ಕಿರುಚಿತ್ರಗಳು ಪ್ರಸಾರವಾಗುತ್ತಿವೆ. ಅದರಂತೆ ಕಾಟೇರಿ ಹಾಡು ಇಂದಿನಿಂದ ಯುಟ್ಯೂಬ್‌ನಲ್ಲಿ ನೋಡಬಹುದಾಗಿದೆ. ಇದೇ ಸಖತ್ ಸ್ಟುಡಿಯೋ ಮೂಲಕ ಕಳೆದವಾರ ಪತ್ರಕರ್ತ ವಿಜಯಭರಮಸಾಗರ ಅವರ ನಿರ್ದೇಶನದ ಭಾರತಿಪುರ ಕ್ರಾಸ್ ಕಿರುಚಿತ್ರವು ಪ್ರಸಾರಗೊಂಡಿತ್ತು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top