fbpx
ಬಿಗ್ ಬಾಸ್

ಬಿಗ್’ಬಾಸ್ ಅನುಪಮಾಗೆ ಕಾಲಿವುಡ್ ನಿಂದ ಬಂದಿದೆ ಸಿನಿಮಾ ಆಫರ್!

ಬಿಗ್’ಬಾಸ್ ಅನುಪಮಾಗೆ ಕಾಲಿವುಡ್ ನಿಂದ ಬಂದಿದೆ ಸಿನಿಮಾ ಆಫರ್!

 

 

ಬಿಗ್ ಬಾಸ್ ಸೀಸನ್ 5 ಸ್ಪರ್ಧಿಗಾಗಿದ್ದ ಅಕ್ಕ ಧಾರಾವಾಹಿ ಖ್ಯಾತಿಯ ಅನುಪಮಾ ಗೌಡಗೆ ಬಿಗ್ ಬಾಸ್ ನಿಂದ ಹೊರಬಂದ ನಂತರ ಈಗ ಒಂದರ ಮೇಲೊಂದು ಸಿನಿಮಾ ಆಫರ್ ಗಳು ಬರುತ್ತಿವೆ. ಬಿಗ್ ಬಾಸ್ ಮನೆಯಲ್ಲಿರುವಾಗ ತಾನು ಸಿನಿಮಾ ಕ್ಷೇತ್ರವನ್ನು ತ್ಯೆಜಿಸುವುದರ ಬಗ್ಗೆ ಮಾತನಾಡಿದ್ದ ಅನುಪಮಾ ಸದ್ಯ ಎರಡು ಚಿತ್ರಗಳಿಗೆ ಸಹಿ ಮಾಡಿದ್ದರಂತೆ.

ಈಗಾಗಲೇ ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ನಿರ್ದೇಶಕ ದಯಾಳ್ ಪದ್ಮನಾಭನ್ ನಿರ್ದೇಶನದ ಹೊಸ ಸಿನಿಮಾವಾದ ‘ಆ ಕರಾಳ ರಾತ್ರಿ’ಗೆ ಅನುಪಮಾ ನಾಯಕಿ ಆಗಿದ್ದಾರೆ. ಆ ಚಿತ್ರ ಫೆಬ್ರವರಿ 19ರಂದು ಸೆಟ್ಟೇರಲಿದ್ದು ಚಿತ್ರಕ್ಕೆ ಸೂಪರ್ ಸ್ಟಾರ್ ಜೆಕೆ ಅಲಿಯಾಸ್ ಜಯರಾಂ ಕಾರ್ತಿಕ್ ಹೀರೋ. ಈಗಾಗಲೇ ಚಿತ್ರದ ಕತೆ ಕೇಳಿರುವ ಅನುಪಮಾ ತಮಗೆ ಸಿಕ್ಕಿರುವ ಪಾತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ’.

 

 

 

ಇನ್ನು ದಯಾಳ್ ಅವರ ಮತ್ತೊಂದು ಚಿತ್ರವಾದ ಪುಟ 109 ಎಂಬ ಚಿತ್ರ ಕೂಡ ಶೀಘ್ರದಲ್ಲೇ ಸೆಟ್ಟೇರಲಿದ್ದು. ಜೆಕೆ ಮತ್ತು ನವೀನ ಕೃಷ್ಣ ನಾಯಕರಾಗಿರುವ ಈ ಚಿತ್ರದಲ್ಲಿ ಬಿಗ್ ಬಾಸ್ ಸೀಸನ್ 5 ಸ್ಪರ್ಧಿಗಳಾಗಿದ್ದ ಅಷ್ಟೂ ಜನರನ್ನು ಕ್ಲೈಮ್ಯಾಕ್ಸ್ ನಲ್ಲಿ ತೋರಿಸುವ ಪ್ಲಾನ್ ದಯಾಳ್ ಅವರಿಗಿದೆ. ಇದು ಕಾರ್ಯರೂಪಕ್ಕೆ ಬಂದರೆ ಪುಟ 109 ಚಿತ್ರದಲೂ ಕೂಡ ಅನುಪಮಾ ಕಾಣಿಸಿಕೊಳ್ಳುವುದು ಕನ್ಫರ್ಮ್ ಆಗುತ್ತದೆ.

 

 

ಇವೆಲ್ಲವುಗಳ ನಡುವೆ ಈಗ ಬಂದಿರುವ ಮಾಹಿತಿಯೆಂದರೆ ನಟಿ ಅನುಪಮಾಗೆ ಕಾಲಿವುಡ್ ನಿಂದ ಸ್ಟಾರ್ ನಟನೊಬ್ಬನ ಚಿತ್ರದಲ್ಲಿ ನಟಿಸುವ ಆಫರ್ ಬಂದಿದೆಯಂತೆ. ಮಾತುಕತೆ ಹಂತದಲ್ಲಿರುವ ಈ ಚಿತ್ರ ಕನ್ಫರ್ಮ್ ಆದ್ರೆ ಸಿನಿಮಾ ಲೋಕವನ್ನು ತ್ಯಜಿಸುವ ಮಾತನಾಡಿದ್ದ ಅನುಪಮಾ ಇನ್ನಷ್ಟು ದಿನ ಸಿನಿಮಾಗಳಲ್ಲೇ ಬ್ಯುಸಿಯಾಗುವುದು ಕನ್ಫರ್ಮ್.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top