fbpx
ಸಿನಿಮಾ

ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ಅನುಷ್ಕಾ ಶೆಟ್ಟಿ. ಯಾರ ಜೊತೆ ಯಾವಾಗ ಮದುವೆ?

ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ಅನುಷ್ಕಾ ಶೆಟ್ಟಿ. ಯಾರ ಜೊತೆ ಯಾವಾಗ ಮದುವೆ?

 

ಈಗ ಅನುಷ್ಕಾ ಶೆಟ್ಟಿ ನಟನೆ ಮಾಡಿರುವ ‘ಭಾಗಮತಿ’ ಚಿತ್ರ ತೆರೆಕಂಡು ಯಶಸ್ವಿ ಪ್ರದರ್ಶನವಾಗುತ್ತಿದೆ. ಈ ಹಿಂದೆ ಬಾಹುಬಲಿ-2 ಸಿನಿಮಾದ ಮೂಲಕ ದೇಶ್ಯಾದ್ಯಂತ ಬಹು ಬೇಡಿಕೆಯ ನಟನಾಗಿರುವ ಪ್ರಭಾಸ್ ಹಾಗು ಅನುಷ್ಕಾ ಶೆಟ್ಟಿ ನಡುವಿನ ಪ್ರೇಮಾಂಕುರದ ಗುಸು-ಗುಸು ಸುದ್ದಿಗಳ ಬಗ್ಗೆ ಪ್ರಭಾಸ್ ಅವರು ತಮ್ಮ ಮೌನವನ್ನು ಮುರಿದ್ದರು ಅನುಷ್ಕಾ ಜೊತೆಗೆ ಮದುವೆಯಾಗುತ್ತಿಲ್ಲ ಎಂಬ ಸ್ಪಷ್ಟನೆ ನೀಡಿದ್ದರು.

 

 

ಇದಾದ ಬಳಿಕವೂ ಯಾರ ಜೊತೆ ಅನುಷ್ಕಾ ಮದುವೆ ಮದುವೆಯಾಗುತ್ತಾರೆ. ಅನುಷ್ಕಾ ಯಾವಾಗ ಮದುವೆ ಯಾಗುತ್ತಾರೆ ಎಂಬ ಪ್ರಶ್ನೆಗಳು ಅವರ ಅಭಿಮಾನಿಗಳ ಬಳಗದಲ್ಲಿ ಹರಿದಾಡುತ್ತಿದ್ದವು ಆದರೆ ಇದಕ್ಕೆ ಉತ್ತರ ಸಿಕ್ಕಿರಲಿಲ್ಲ. ಈಗ ಮೌನ ಮುರಿದಿರುವ ಅನುಷ್ಕಾ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಮದುವೆಯ ಬಗ್ಗೆ ಅನುಷ್ಕಾ ಏನು ಹೇಳಿದ್ರು ಅಂತ ಮುಂದೆ ಓದಿ.

 

 

ನನಗೆ ವಿವಾಹದ ಮೇಲೆ ಅಪಾರವಾದ ನಂಬಿಕೆ ಇದೆ. ಆದರೆ ಸದ್ಯಕ್ಕೆ ನಾನು ಮದುವೆಯಾಗುವ ಕುರಿತು ಯೋಜನೆಯನ್ನು ಮಾಡಿಲ್ಲ. ನನ್ನ ಜೊತೆಗೆ ಯಾರು ಕನೆಕ್ಟ್ ಆಗುತ್ತಾರೋ ಅವರನ್ನು ನಾನು ವಿವಾಹ ಆಗುತ್ತೇನೆ ಎಂದು ಅನುಷ್ಕಾ ಹೇಳಿದರು. ನನ್ನ ಅಪ್ಪ ಅಮ್ಮ ಕೂಡ ನನಗೆ ಮದುವೆಯ ವಿಚಾರವಾಗಿ ಒತ್ತಾಯ ಮಾಡುತ್ತಿದ್ದಾರೆ. ಒಂದೊಳ್ಳೆ ಸಮಯಕ್ಕಾಗಿ ನಾನು ಕಾಯುತ್ತೇನೆ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದರು. ಅಭಿಮಾನಿಗಳ ಪ್ರಶೆಗೆ ಉತ್ತರ ಸಿಕ್ಕಂತಾಯಿತು.

 

 

ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಉತ್ತರಕ್ಕಾಗಿ ಈಗ ತೆರೆ ಬಿದ್ದಂತಾಗಿದೆ ಇನ್ನಾದರೂ ಅಭಿಮಾನಿಗಳು ಅನುಷ್ಕಾ ರವರ ಮದುವೆ ಚಿಂತೆ ಬಿಟ್ಟು ತಮ್ಮ ಕೆಲಸದಲ್ಲಿ ತೊಡಗಲಿ ಎಂದು ಆಶಿಸೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top