fbpx
ಆರೋಗ್ಯ

ಕೆನ್ನೇರಳೆ ಬಣ್ಣದ ಬದನೆಕಾಯಿ ತಿಂದ್ರೆ ಎಷ್ಟೆಲ್ಲಾ ರೋಗಗಳಿಗೆ ರಾಮಬಾಣ ಗೊತ್ತಾ?

ಕೆನ್ನೇರಳೆ ಬಣ್ಣದ ಬದನೆಕಾಯಿ ತಿಂದ್ರೆ ಎಷ್ಟೆಲ್ಲಾ ರೋಗಗಳಿಗೆ ರಾಮಬಾಣ ಗೊತ್ತಾ?

 

ಅಡುಗೆ ಮಾಡುವಾಗ ನಾವು ತರೇಹವಾರಿ ತರಕಾರಿಗಳು ಹಾಗೂ ಸೊಪ್ಪುಗಳನ್ನು ಬಳಸುತ್ತೇವೆ ಹಾಗೆಯೇ ಬದನೆಕಾಯಿ ಕೂಡ ಜನರು ಸಾಮಾನ್ಯವಾಗಿ ಉಪಯೋಗಿಸುವ ತರಕಾರಿ

ಬದನೆ ಕಾಯಿಗಳು ಅನೇಕ ಬಣ್ಣಗಳಲ್ಲಿ ಬಂದಿತ್ತು ನೀಲಿ ಬಣ್ಣದ ಬದನೆಕಾಯಿ ಹಾಗೂ ಹಸಿರು ಬಣ್ಣದ ಬದನೆಕಾಯಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿವೆ

 

 

ಹೀಗೆ ಎರಡು ಮುಖ್ಯ ವಿಧಗಳಲ್ಲಿ ಸಿಗುವ ಬದನೇಕಾಯಿಯಲ್ಲಿ ಯಾವ ಬದನೆಕಾಯಿ ಹೆಚ್ಚು ಆರೋಗ್ಯಕಾರಿ ಎಂಬ ಪ್ರಶ್ನೆ ನಿಮ್ಮನ್ನೂ ಕಾಡಿರುತ್ತದೆ

ಅದಕ್ಕೆ ವಿಜ್ಞಾನಿಗಳು ಈ ರೀತಿ ಉತ್ತರಿಸುತ್ತಾರೆ ಅದೆಂದರೆ ನೀಲಿ ಬದನೆಕಾಯಿಯ ಹಸಿರು ಬದನೆಕಾಯಿ ಇಂದು ಹೆಚ್ಚು ಆರೋಗ್ಯಕಾರಿ ಎಂಬುದು

ನೀಲಿ ಬದನೆಕಾಯಿ ಹೆಚ್ಚು ಆರೋಗ್ಯಕಾರಿ ಏಕೆಂದರೆ ನೀಲಿ ಬದನೆ ಕಾಯಿ ಹೆಚ್ಚು ಸೂರ್ಯ ರಶ್ಮಿಯನ್ನು ಹೀರಿಕೊಳ್ಳುತ್ತದೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ ಹೀಗೆ ಹೆಚ್ಚು ಸೂರ್ಯನ ಕಿರಣಗಳನ್ನು ಹೀರಿಕೊಳ್ಳುವ ತರಕಾರಿಗಳು ಪೌಷ್ಟಿಕಾಂಶಗಳಿಂದ ಕೂಡಿರುತ್ತದೆ ಹಾಗೂ ಇತರೆ ತರಕಾರಿಗಳಿಗಿಂತ ಅದು ಮೇಲು ಎಂದು ಭಾವಿಸುತ್ತಾರೆ

*ಬದನೆಕಾಯಿಯನ್ನು ರೆಗ್ಯುಲರ್ ಆಗಿ ಬಳಸುವುದರಿಂದ ಶರೀರದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸಿ ರಕ್ತದಲ್ಲಿನ ಕೊಲೆಸ್ಟ್ರಾಲ್ ಲೆವೆಲ್ ಅನ್ನು ಕಡಿಮೆ ಮಾಡುತ್ತದೆ.

 

 

*ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ನೂರು ಗ್ರಾಂ ಬದನೆಕಾಯಿಯಲ್ಲಿ 24 ಕ್ಯಾಲರಿ ಮಾತ್ರ ಇರುವುದರಿಂದ ದೇಹದ ತೂಕ ಹೆಚ್ಚಾಗುವುದಿಲ್ಲ.

*ಬದನೆಕಾಯಿಯಲ್ಲಿ ಆಟೋ ಸಯನಿನ್ ಎಂಬ ಪದಾರ್ಥ ನಿಶಕ್ತಿಯನ್ನು ದೂರ ಮಾಡಿ ಉತ್ಸಾಹ ತುಂಬುತ್ತದೆ. ಬದನೆಕಾಯಿ ಇಂದ ಕ್ಯಾನ್ಸರ್ ಅನ್ನು ನಿಯಂತ್ರಣಕ್ಕೆ ಬರುತ್ತದೆ.

*ಬದನೆಕಾಯಿಯಲ್ಲಿನ ನೀರು, ಪೊಟಾಷಿಯಂ ರಕ್ತದಲ್ಲಿ ಸೇರಿ ಕೊಬ್ಬುನ್ನು ಕಡಿಮೆ ಮಾಡುತ್ತದೆ.ಜೊತೆಗೆ ಇದು ಹಸಿವನ್ನು ನಿಯಂತ್ರಿಸಿ ತೂಕ ಹೆಚ್ಚಾಗದಂತೆ ತಡೆಯುತ್ತದೆ.

 

 

*ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಬದನೆಕಾಯಿಯನ್ನು ಅಡುಗೆಯಲ್ಲಿ ಹೆಚ್ಚು ಬಳಸುವುದರಿಂದ ಹೃದಯ, ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳು ತಡೆಯುತ್ತದೆ. ಬದನೆಕಾಯಿಯಲ್ಲಿನ ನಿಕೋಟಿನ್ ಎಂಬ ಪದಾರ್ಥ ಧೂಮಪಾನದ ಅಭ್ಯಾಸವನ್ನು ನಿಯಂತ್ರಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

*ಬದನೆಕಾಯಿ ತಿನ್ನುವುದರಿಂದ ಕೀಲು ನೋವು ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಷ್ಟೇ ಅಲ್ಲ ಇದು ದೇಹದ ತೂಕವನ್ನು ಸಹ ಇಳಿಸುತ್ತದೆ..!!!

 

 

*ಇದು ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ರಕ್ತದೊತ್ತಡ ನಿರ್ವಹಿಸಲು ಸಹ ಸಹಾಯ ಮಾಡುತ್ತದೆ. ಸಾಧಾರಣ ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದೊತ್ತಡ ನಿಯಂತ್ರಣ ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತವೆ.

 

 

*ಅಂಗೈ ಮತ್ತು ಅಂಗಾಲು ಬೆವರುತ್ತಿದ್ದರೆ ಬದನೆಯನ್ನು ಸಣ್ಣಗೆ ಹೆಚ್ಚಿ ನೀರಿಗೆ ಹಾಕಿ. ಸ್ವಲ್ಪ ಸಮಯದ ನಂತರ ಬದನೆಯನ್ನು ತೆಗೆದು ಆ ನೀರಿನಲ್ಲಿ ದಿನವೂ ಕೈ-ಕಾಲುಗಳನ್ನು 30 ನಿಮಿಷಗಳು ಮುಳುಗಿಸಿಡಬೇಕು. ಬೆವರು ನಿಲ್ಲುತ್ತದೆ.

*ಮೈಯೆಲ್ಲ ವಿಪರೀತ ತುರಿಕೆಯಿಂದ ಕೂಡಿದ್ದರೆ ಬದನೆಯ ಎಲೆಗಳನ್ನು ಅರೆದು ಸಕ್ಕರೆ ಸೇರಿಸಿ ತುರಿಕೆ ಇರುವ ಜಾಗಕ್ಕೆ ಹಚ್ಚಿ ಒಂದು ಗಂಟೆಯ ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ.

*ಬದನೆ ಎಲೆಗಳನ್ನು ಕೆಂಡದಲ್ಲಿ ಬಿಸಿ ಮಾಡಿ ಏಟುಬಿದ್ದ ಗಾಯದ ಮೇಲೆ ಕಟ್ಟಿದರೆ ನೋವು ಬೇಗ ಗುಣವಾಗುತ್ತದೆ.

*ಇದು ಸ್ಮರಣ ಶಕ್ತಿಯನ್ನು ಹೆಚ್ಚಿಸುವ ತರಕಾರಿಯೂ ಹೌದು. ನೇರಳೆ ಬಣ್ಣದ ಬದನೆಯನ್ನು ಬೇಯಿಸಿ, ಸ್ವಲ್ಪ ಬೆಲ್ಲ ಸೇರಿಸಿ ಬೆಳಿಗ್ಗೆ ಸೇವಿಸುತ್ತಾ ಬಂದರೆ ಮೂಲವ್ಯಾಧಿ ಕಡಿಮೆಯಾಗುತ್ತದೆ.

*ಎಳೆಯ ಬದನೆಯನ್ನು ಹಸುವಿನ ತುಪ್ಪದಲ್ಲಿ ಹುರಿದು ಸೇವಿಸಿದರೆ ಕಣ್ಣಿನ ತೊಂದರೆ ದೂರವಾಗಿ ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ.

*ಇದರ ನಿಯಮಿತ ಸೇವನೆಯಿಂದ ದೇಹದಲ್ಲಿರುವ ಹೆಚ್ಚುವರಿ ಕಬ್ಬಿಣದ ಅಂಶ ಹೊರಟುಹೋಗುತ್ತದೆ. ಇದು ಪಾಲಿಸಿಥಿಮಿಯಾ ರೋಗಿಗಳಿಗೆ ಹೆಚ್ಚು ಉಪಯುಕ್ತ. ಬದನೆಯಲ್ಲಿರುವ ನಸುಯೈನ್ ಎಂಬ ಒಂದು ಸಂಯುಕ್ತ ಪ್ರಸ್ತುತ ದೇಹದ ಅತಿಯಾದ ಕಬ್ಬಿಣದ ಅಂಶವನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ .

*ಬದನೆಯಲ್ಲಿ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ವಿಟಮಿನ್ ‘ಸಿ’ ಅಂಶ ಅಧಿಕ ಪ್ರಮಾಣದಲ್ಲಿದೆ.

*ಬದನೆ ರೋಗ ನಿರೋಧಕ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ.ತ್ವಚೆಯ ಹೊಳಪಿಗೆ ಅತ್ಯಗತ್ಯವಾಗಿರುವ ಖನಿಜಗಳು, ಜೀವಸತ್ವಗಳು ಮತ್ತು ನಾರಿನಾಂಶ ಬದನೆಯಲ್ಲಿದೆ. ಇದರಿಂದ ತ್ವಚೆಯನ್ನು ಬಲವಾಗಿ ಹಾಗೂ ವಯಸ್ಸಿನ ಕಳೆಯನ್ನು ತೆಗೆಯಲು ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸಬಹುದು.

*ಬದನೆಯಲ್ಲಿರುವ ಕೆಲವು ಕಿಣ್ವಗಳು ಕೂದಲಿನ ರಕ್ಷಕರಂತೆ ಕೆಲಸ ಮಾಡಿ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಕೂದಲಿನ ಆರೋಗ್ಯಕರ ವಿನ್ಯಾಸ ನಿರ್ವಹಿಸಲು ಸಹಾಯಕವಾಗಿದೆ.

*ಬದನೆಯಲ್ಲಿ ನೀರನ ಅಂಶ ಅಧಿಕವಾಗಿದೆ. ಇದು ತ್ವಚೆಯನ್ನು ಅಗತ್ಯದಷ್ಟು ತೇವಾಂಶಯುಕ್ತವಾಗಿಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಶುಷ್ಕ ತ್ವಚೆಯಿಂದ ಮುಕ್ತಿ ಹೊಂದಬಹುದು ಮತ್ತು ನಿಮ್ಮ ದೇಹದ ಸಹವರ್ತಿಯಂತೆ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top