fbpx
ಸಮಾಚಾರ

ನಿರುದ್ಯೋಗಕ್ಕಿಂತ ಪಕೋಡ ಮಾರುವುದೇ ಲೇಸು : ಅಮಿತ್‌ ಶಾ

ನಿರುದ್ಯೋಗಕ್ಕಿಂತ ಪಕೋಡ ಮಾರುವುದೇ ಲೇಸು : ಅಮಿತ್‌ ಶಾ

”ನಿರುದ್ಯೋಗಕ್ಕಿಂತ ಪಕೋಡ ಮಾರುವುದೇ ಉತ್ತಮ ಕೆಲಸ. ಪಕೋಡ ಮಾರುವುದು ಕೀಳು ಕೆಲಸವಲ್ಲ. ಅದು ನಾಚಿಕೆ ಪಡುವಂತಹ ವಿಷಯವೂ ಅಲ್ಲ. ಪಕೋಡ ಮಾರುವವನ ಮಗ ಶ್ರೀಮಂತರಾಗಬಹುದು. ಪಕೋಡ ಮಾರುವವರನ್ನು ಭಿಕ್ಷುಕರಿಗೆ ಹೋಲಿಸುವುದು ಸರಿಯಲ್ಲ” ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಖಾಸಗಿ ಟಿವಿ ಸಂದರ್ಶನದ ವೇಳೆ ಪ್ರಧಾನಿ ಮೋದಿ ಒಬ್ಬ ವ್ಯಕ್ತಿ ಪಕೋಡ ಮಾರಿ ದಿನಕ್ಕೆ 200 ರೂಪಾಯಿ ಸಂಪಾದಿಸಿದರೆ ಅದನ್ನು ಉದ್ಯೋಗ ಎನ್ನಬೇಕೇ ಬೇಡವೇ ಎಂದು ಮೋದಿ ತಿಳಿಸಿದ್ದರು.ಇದೇ ವೇಳೆ ಪ್ರಧಾನಿ ಅವರ ಪಕೋಡ ಹೇಳಿಕೆ ದೇಶದ ಎಲ್ಲೆಡೆ ತ್ರೀವ ಟೀಕೆ ಹಾಗೂ ಪ್ರತಿಭಟನೆಗಳು ನಡೆಯುತ್ತೀವೆ. ಈ ನಡುವೆ ಮೋದಿ ಈ ಹೇಳಿಕೆಗೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಉದ್ಯೋಗ ಸೃಷ್ಟಿ ಮಾಡಬೇಕಾದರೆ ಪ್ರಧಾನಿ ಮೋದಿ, ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಟೀಕಿಸಿದ್ದರು.

Related image

ರಾಜ್ಯಸಭೆಯಲ್ಲೂ ಈಗ ಪಕೋಡ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಭಾಷಣ ಮಾಡಿದ ಅಮಿತ್‌ ಶಾ, ಪಕೋಡ ವಿಷಯದ ಪ್ರಸ್ತಾವ  ಮಾಡಿದ್ದಾರೆ. ಅವರು ರಾಜ್ಯಸಭೆಯಲ್ಲಿ ಮಾತನಾಡುತ್ತ ನಿರುದ್ಯೋಗಿಯಾಗಿ ಇರುವುದಕ್ಕಿಂತ ಕಾರ್ಮಿಕನಾಗಿ ಅಥವಾ ಪಕೋಡಾ ಮಾರಾಟ ಮಾಡಿ ಜೀವನ ಸಾಗಿಸುವುದು ಲೇಸು. ಪಕೋಡಾ ಮಾರಾಟ ಮಾಡುವುದು ನಾಚಿಕೆಗೇಡಿನ ಕೆಲಸ ಅಲ್ಲ ಎಂದು ಅಮಿತ್‌ ಶಾ ತಿಳಿಸಿದ್ದಾರೆ.

In Debut Parliament Speech, Amit Shah's Sharp Rebuttal To Pakoda Jibes

ನಿರುದ್ಯೋಗ ವಿಷಯದಲ್ಲಿ ಕಾಂಗ್ರೆಸ್‌ ಯಾವುದೇ ಯೋಜನೆ ರೂಪಿಸಿಲ್ಲ. 55 ವರ್ಷದಿಂದ ಯಾವುದೇ ಕಾರ್ಯ ಮಾಡದ ಕಾಂಗ್ರೆಸ್‌ ಈಗ ಆಕ್ಷೇಪ ಮಾಡುತ್ತಿರುವುದು ಸರಿಯಲ್ಲ. ನಾವು ಉದ್ಯೋಗ ಸೃಷ್ಟಿಗೆ ಹಲವಾರು ಯೋಜನೆ ರೂಪಿಸುತ್ತಿದ್ದೇವೆ ಎಂದರು.

”ದೇಶದಲ್ಲಿ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಿದ್ದು ನಿಜ. ಇದು ನಮ್ಮ ಅಧಿಕಾರವಧಿಯಲ್ಲಿ ಸೃಷ್ಟಿಯಾಗಿದ್ದಲ್ಲ್ಲ. ನಿರುದ್ಯೋಗ ನಿವಾರಣೆಗೆ ಕೇಂದ್ರ ಸರಕಾರ ಮುದ್ರಾಯೋಜನೆಯಡಿ ಸಾಲಸೌಲಭ್ಯ ನೀಡುತ್ತಿದೆ” ಎಂದು ಶಾ ಹೇಳಿದ್ದಾರೆ.

 

ಪಕೋಡಾ ಮಾರುವುದು ಒಂದು ಉದ್ಯೋಗ ಎಂದು ಇತ್ತೀಚೆಗೆ ಟಿವಿ ಚಾನಲ್ ಸಂದರ್ಶನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದರು. ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗಿಗಳ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದರು. ಪ್ರಧಾನಿ ಮೋದಿ ಹೇಳಿಕೆಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಡಿಸಿದ್ದು, ದೇಶದೆಲ್ಲೆಡೆ ನಿರುದ್ಯೋಗ ಯುವಕರು ಪಕೋಡ ಮಾರಿ ಮೋದಿಯ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top