fbpx
ಉಪಯುಕ್ತ ಮಾಹಿತಿ

ಗೋಮೂತ್ರದಿಂದ ಅಷ್ಟ ಔಷಧ ಉಪ್ರ ಆಯುರ್ವೇದ ಇಲಾಖೆ ಶೋಧನೆ.

ಗೋಮೂತ್ರದಿಂದ ಅಷ್ಟ ಔಷಧ ಉಪ್ರ ಆಯುರ್ವೇದ ಇಲಾಖೆ ಶೋಧನೆ.

ಉತ್ತರ ಪ್ರದೇಶದ ಆಯುರ್ವೇದ ಇಲಾಖೆ ಗೋಮೂತ್ರದಿಂದ ಎಂಟು ವಿವಿಧ ಔಷಧ ತಯಾರಿಸಿದೆ.

Image result for gomutra

ಲಖನೌ: ಗೋಮೂತ್ರದ ಔಷಧೀಯ ಗುಣಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿರುವ ಉತ್ತರಪ್ರದೇಶ ಸರ್ಕಾರ, ಇದೀಗ ಗೋಮೂತ್ರದಿಂದಲೇ ಔಷಧಗಳ ತಯಾರಿಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ಮಹತ್ವದ ಯಶಸ್ಸು ಸಾಧಿಸಿದೆ. ರಾಜ್ಯ ಸರ್ಕಾರದ ಆಯುರ್ವೇದ ಇಲಾಖೆಯು, ಗೋಮೂತ್ರದಿಂದ 8 ಔಷಧಗಳನ್ನು ಅಭಿವೃದ್ಧಿಪಡಿಸಿದೆ.

ಉತ್ತರ ಪ್ರದೇಶದ ಆಯುರ್ವೇದ ಇಲಾಖೆ ಗೋಮೂತ್ರದಿಂದ ಎಂಟು ವಿವಿಧ ಔಷಧ ತಯಾರಿಸಿದೆ. ಲಿವರ್ ಸಂಬಂಧಿ ಸಮಸ್ಯೆಗಳು, ಸಂದುನೋವು ಶಮನ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಇದು ಸಹಕಾರಿಯಾಗಲಿದೆ ಎಂದು ಆಯುರ್ವೇದ ಇಲಾಖೆ ನಿರ್ಧೇಶಕ ಡಾ. ಆರ್. ಆರ್.ಚೌಧರಿ ಭಾನುವಾರ ತಿಳಿಸಿದ್ದಾರೆ.

ಆಯುರ್ವೇದ ಇಲಾಖೆ ಲಖನೌ ಮತ್ತು ಫಿಲಿಬಿತ್ ನಲ್ಲಿ ಫಾರ್ಮಸಿಗಳನ್ನು ಹೊಂದಿದೆ. ಖಾಸಗಿ ಘಟಕಗಳ ನೆರವಿನೊಂದಿಗೆ ಗೋಮೂತ್ರ, ಹಾಲು ಮತ್ತು ತುಪ್ಪ ಬಳಸಿ ವಿವಿಧ ಆಯುರ್ವೇದ ಔಷಧ ತಯಾರಿಸುತ್ತಿದೆ. ರಾಜ್ಯದಲ್ಲಿನ ಎಂಟು ಆಯುರ್ವೇದ ಮೆಡಿಸಿನ್ ವಿಷಯದಲ್ಲಿ ಪದವಿ ಕೋರ್ಸ್ ಆರಂಭಿಸಲಾಗಿದೆ ಎಂದು ಚೌಧರಿ ಹೇಳಿದ್ದಾರೆ.

ಪ್ರಸ್ತುತ ಎಂಟು ಮಾದರಿಯ ಔಷಧಿ ಸಿದ್ಧಪಡಿಸಲಾಗಿದೆ. ಔಷಧ ಸೇವನೆ ಪರಿಣಾಮಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಆಯುರ್ವೇದದಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಕೋರ್ಸ್ಗಳನ್ನು ಕೂಡ ಆರಂಭಿಸಲಾಗುತ್ತದೆ. ಗೋಮೂತ್ರ, ಗೋವಿನ ಉತ್ಪನ್ನಗಳ ಕುರಿತ ಸಂಶೋಧನೆಗೆ ಆರೆಸ್ಸೆಸ್ ಮತ್ತು ವಿಶ್ವ ಹಿಂದು ಪರಿಷತ್’ನ ವಿಜ್ಞಾನ ಭಾರತಿ ಮತ್ತು ಗೋವಿಜ್ಞಾನ ಅನುಸಂಧಾನ ಕೇಂದ್ರ ಸಹಯೋಗ ನೀಡುತ್ತಿವೆ ಎಂದು ಅವರು ತಿಳಿಸಿದ್ದಾರೆ.

Image result for gomutra

ವೈದ್ಯರ ನೇಮಕಾತಿಗೂ ಐಪಿಎಲ್ ಮಾದರಿ ಬಿಡ್!

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ತೀವ್ರ ಕೊರತೆ ನಿವಾರಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ವೈದ್ಯರನ್ನು ಐಪಿಎಲ್ ಕ್ರಿಕೆಟ್’ನ ಆಟಗಾರರನ್ನು ಹರಾಜು ಮೂಲಕ ಖರೀದಿಸುವ ರೀತಿಯಲ್ಲೇ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ, ತಮ್ಮ ಮೂಲ ವೇತನವನ್ನು ವೈದ್ಯರ ನೇಮಕಾತಿಯನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್‌ ಸರ್ಕಾರವು ರಾಜ್ಯದ 7 ಜಿಲ್ಲೆಗಳು ಹಾಗೂ ನಗರಪ್ರದೇಶಗಳ 16 ಕಡೆಗಳಲ್ಲಿ ಒಂದು ಸಾವಿರ ಗೋವುಗಳನ್ನು ಸಾಕುವಂಥ ಸಾಮರ್ಥ್ಯದ ಗೋಶಾಲೆಗಳನ್ನು ನಿರ್ಮಿಸಲು ಅನುಮತಿ ನೀಡಿದೆ. ರಾಜ್ಯದ ಪ್ರತಿ ಬ್ಲಾಕ್‌ನಲ್ಲೂ ಇಂಥ ಗೋಶಾಲೆ ನಿರ್ಮಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಸುರಕ್ಷಿತ ಪ್ರದೇಶಗಳಲ್ಲಿ ಹಾಗೂ ಮೇವು ಮತ್ತು ನೀರಿನ ಲಭ್ಯತೆ ಸಾಕಷ್ಟು ಇರುವಂಥ ಪ್ರದೇಶಗಳಲ್ಲೇ ಇದನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸುವ ಕುರಿತೂ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top