fbpx
ಮನೋರಂಜನೆ

ಗುಳ್ಟು ಹಾಡು ಬಂತು

ಗುಳ್ಟು ಹಾಡು ಬಂತು!

 

 

ತಂತ್ರಜ್ಞಾನ ಬೆಳೆದಂತೆ ಅಪರಾಧ ಚಟುವಟಿಕೆಗಳು ಆನ್‌ಲೈನ್ ಮುಖಾಂತರ ನಡೆಯುತ್ತಿರುತ್ತವೆ. ಇಂತಹುದೆ ಘಟನೆಗಳನ್ನು ಹೆಕ್ಕಿಕೊಂಡು ಟೆಕ್ಕಿಗಳೇ ಸೇರಿಕೊಂಡು ನಿರ್ಮಿಸಿರುವ ಚಿತ್ರ ’ಗುಳ್ಟು’. ಇದಕ್ಕೆ ಆನ್ ಲೈನ್ ಎನ್ನುವ ಟ್ಯಾಗ್ ಲೈನ್ ಕೂಡಾ ಇದೆ. ಕತೆ ಬರೆದು ನಿರ್ಮಾಣದಲ್ಲಿ ಪಾಲುದಾರನಾಗಿ, ನಿರ್ದೇಶನ ಮಾಡಿರುವ ಜನಾರ್ಧನ್ ಚಿಕ್ಕಣ್ಣ ಮಾತನಾಡುತ್ತಾ ಪ್ರಸಕ್ತ ಸಮಾಜದಲ್ಲಿ ತಂತ್ರಜ್ಞಾನದ ಮೂಲಕ ಹೊಸ ಹೊಸ ರೀತಿಯ ಅಪರಾಧಗಳು ನಡೆಯುತ್ತಿದೆ. ಅಂತಹ ಅಂಶಗಳ ಸುತ್ತ ಸನ್ನಿವೇಶಗಳು ಬರಲಿದೆ ಅಂತ ಕತೆಯ ತಿರುಳನ್ನು ಹೇಳದೆ ಗೌಪ್ಯತೆಯನ್ನು ಕಾಪಾಡಿದರು. ಒಂದು ದಿನದ ಮಟ್ಟಿಗೆ ಅಭಿನಯಿಸಬೇಕೆಂದು ಕೋರಿಕೊಂಡರು. ಪ್ರಾರಂಭದಿಂದಲೂ ಹೊಸಬರಿಗೆ ಪ್ರೋತ್ಸಾಹ ನೀಡಿತ್ತಿರುವ ನನಗೆ ಇವರ ಕೆಲಸ ನೋಡಿ ಯಾಕೆ ಪ್ರಯತ್ನ ಮಾಡಬಾರದು ಅಂದುಕೊಂಡು ಸೆಟ್‌ಗೆ ಹೋದಾಗ ತಂಡದ ಉತ್ಸಾಹ, ಶ್ರದ್ದೆ ನೋಡಿ ನಂಬಿಕೆ ಬಂತು. ವಾಣಿಜ್ಯ ಪದವಿ ಪಡೆದಿರುವ ನಾನು ವಿಜ್ಗಾನದ ಡೈಲಾಗ್ ಹೇಳಿದ್ದೇನೆ. ನನಗಂತಲೇ ಒಂದು ಹಾಡನ್ನು ಸೃಷ್ಟಿಸಿ ಡ್ಯಾನ್ಸ್ ಮಾಡಿಸಿದ್ದಾರೆ ಎನ್ನುತ್ತಾರೆ ನಾಯಕಿ ಸೋನುಗೌಡು.

 

 

ಹೊಸಬರ ಪ್ರತಿಭೆಯನ್ನು ಗುರುತಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಅನುಭವ ಇದ್ದರೂ ಇವರಿಂದ ಸಾಕಷ್ಟು ಕಲಿತಿದ್ದೇನೆ. ಹೊಸಬರಲ್ಲಿ ಸಾಕಷ್ಟು ವಿಷಯಗಳು ಇರುತ್ತದೆ. ತಂಡಕ್ಕೆ ಯಾವುದೇ ರೀತಿಯ ಪ್ರೋತ್ಸಾಹ ನೀಡಿಲ್ಲ. ಒಳ್ಳ ಪಾತ್ರ ಇದೆ ಎಂಬ ಸ್ವಾರ್ಥದಿಂದ ಪೋಲೀಸ್ ಅಧಿಕಾರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ ಎಂದರು ಅವಿನಾಶ್. ಯುವಕರು, ಜೊತೆಗೆ ಕಂಪ್ಯೂಟರ್ ಬಲ್ಲವರು. ಕಟ್ಟಡ ಕಟ್ಟುವುದನ್ನು ಬಿಟ್ಟು, ಸಿನಿಮಾ ಕಟ್ಟಲು ಬಂದಿದ್ದಾರೆ. ನಿರ್ದೇಶಕರು ಕತೆ ಹೇಳಲು ಬಂದಾಗ ಶೀರ್ಷಿಕೆಗೆ ಅರ್ಥ ಗೊತ್ತಿಲ್ಲವೆಂದು ಹೇಳಿದಾಗ ಅದು ಕಂಪ್ಯೂಟರ್ ಭಾಷೆ ಎಂದು ಸುಮ್ಮನಿರಿಸಿದರು. ಹಳೇ ಬೇರು ಹೊಸ ಚಿಗುರು ಎನ್ನುವಂತೆ ಹೊಸಬರು ಬಂದರೆ ಚಿತ್ರರಂಗ ಬೆಳೆಯುತ್ತೆ. ಇತ್ತೀಚೆಗೆ ಮಂಗಳೂರು ಕಲಾವಿದರು ಬರುತ್ತಿದ್ದಾರೆ. ಅಪರೂಪಕ್ಕೆ ಎನ್ನುವಂತೆ ಉತ್ತರ ಕರ್ನಾಟಕದವರು ಬಂದಿರುವುದು ಸಂತಸದ ವಿಷಯವೆಂದು ಮುಖ್ಯ ಮಂತ್ರಿಯಾಗಿ ಕಾಣಿಸಿಕೊಂಡಿರುವ ರಂಗಾಯಣರಘು ನುಡಿ. ಇಳಕಲ್ಲು ಮೂಲದ ನಾಯಕ ನವೀನ್‌ಶಂಕರ್ ಮೈಕ್ ತೆಗೆದುಕೊಂಡು ಮಾಹಿತಿ ತಂತ್ರಜ್ಘಾನ, ಸಂವಹನ ತಂತ್ರಜ್ಞಾನ ವೇಗವಾಗಿ ರೂಪುಗೊಳ್ಳುತ್ತಿದೆ. ಜಾಲತಾಣ ಯುಗದಲ್ಲಿ ಸಾಕಷ್ಟು ಜನರು ಸಂಪರ್ಕದಲ್ಲಿ ಇದ್ದಾರೆ. ಇದರಿಂದ ಅಪರಾಧಗಳು ನಡೆಯುತ್ತಿದೆ ಎಂದಷ್ಟೇ ಹೇಳಿ ಚಿತ್ರದ ಸಾರಾಂಶವನ್ನು ಮುಚ್ಚಿಟ್ಟರು. ಪ್ರಶಾಂತ್‌ರೆಡ್ಡಿ, ದೇವರಾಜ್.ಆರ್.,ರಾಜು.ಬಿ ಗೆಳಯ ಆಕ್ಷನ್ ಕಟ್ ಹೇಳುತ್ತಿರುವುದರಿಂದ ಚಿತ್ರಕ್ಕೆ ಹಣ ಹೂಡಿದ್ದಾರೆ. ಐದು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಅಮಿತ್ ಆನಂದ್ ಚಿಕ್ಕಪರದೆ ಮೇಲೆ ವಿವರವನ್ನು ಹಾಡುಗಳ ವಿವರವನ್ನು ಬಿಚ್ಚಿಟ್ಟರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top