fbpx
ಹೆಚ್ಚಿನ

ಕನ್ನಡ ಕಲಿಯದೇ ಮೊಂಡುತನ ತೋರುತ್ತಿದ್ದರು ಈಗ ತಾವಾಗಿಯೇ, ಕನ್ನಡ ಕಲಿಯುವ ಅನಿವಾರ್ಯತೆ ಬಂದಿದೆ. ಏಕೆ ಗೊತ್ತ.

ಕನ್ನಡ ಕಲಿಯದೇ ಮೊಂಡುತನ ತೋರುತ್ತಿದ್ದರು, ಈಗ ತಾವಾಗಿಯೇ ಕನ್ನಡ ಕಲಿಯುವ ಅನಿವಾರ್ಯತೆ ಬಂದಿದೆ. ಏಕೆ ಗೊತ್ತ.

 

ಕನ್ನಡವನ್ನು ಕಲಿಯದೇ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿರುವ ಪೋಷಕರು ಸ್ಥಳೀಯ ಭಾಷೆ ಮತ್ತು ಅದರ ಲಿಪಿಯನ್ನು ಕಲಿಯಲು ಉತ್ಸುಕರಾಗಿದ್ದಾರೆ ಎಂದು ತಿಳಿದು ಬಂದಿದೆ. ಕೆಲವರು ವಾಟ್ಸ್ ಅಪ್ಪ ಗ್ರೂಪ್ ರಚಿಸಿ ಕನ್ನಡ ಕಲಿಯಲು ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಕೆಲವರು ಕನ್ನಡ ಕಲಿಯರು ಶಿಕ್ಷಕರ ಸಹಾಯ ಪಡೆಯುತ್ತಿದ್ದಾರೆ, ಇನ್ನು ಕೆಲವರು ಆನ್ಲೈನ್ ನಲ್ಲಿ ಕನ್ನಡ ಕಲಿಕಾ ವೆಬ್ ಸೈಟ್ ನಲ್ಲಿ ಸಬ್ಸ್ಕ್ರೈಬ್ ಆಗುತ್ತಿದ್ದಾರೆ.

 

 

 

ಈ ಒಳ್ಳೆಯ ಬೆಳವಣಿಗೆ ಕಾರಣವೆಂದರೆ, ಅಕ್ಟೋಬರ್ 2017 ರಲ್ಲಿ, ಕರ್ನಾಟಕ ಸರ್ಕಾರವು ಶಾಲೆಗಳಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಕಡ್ಡಾಯಗೊಳಿಸಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಮತ್ತು ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್ಸಿ) ಕೌನ್ಸಿಲ್ಗೆ ಸೇರಿದ ಎಲ್ಲಾ ಶಾಲೆಗಳು ಕನ್ನಡವನ್ನು ಕಲಿಸಬೇಕು ಎಂದು ಕನ್ನಡ ಭಾಷಾ ಕಲಿಕೆ ನಿಯಮ 2015 ರ ನಿಯಮಗಳು ಜಾರಿಗೆ ತಂದಿದೆ.

 

ಎಲ್ಲಾ ತರಗತಿಗಳ ವಿದ್ಯಾರ್ಥಿಗಳಿಗೆ ಈ ನಿಯಮವನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು, ಒಂದನೆಯ ತರಗತಿಯ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಿಂದ ಕನ್ನಡವನ್ನು ಕಲಿಯಬೇಕಾದ ನಿಯಮ ಬಂದಿದೆ.

ಮಕ್ಕಳಿಗೆ ಕನ್ನಡ ಕಲಿಕೆ ಕಡ್ಡಾಯ ಮಾಡಿದರಿಂದ ಪೋಷಕರಿಗೆ ಕನ್ನಡ ಕಲಿಯಲೇಬೇಕು ಅನೀವ್ಯಾರತೆ ಬಂದಿದೆ. ಮಕ್ಕಳಿಗೆ ಮನೆಪಾಠ ಮಾಡುವ ಸಂಧರ್ಭದಲ್ಲಿ ಕನ್ನಡ ವಿಷಯ ಕಲಿಸುವ ಸಲುವಾಗಿ ಕನ್ನಡ ಕಲಿಯುತ್ತಿದ್ದಾರೆ. ರಾಜ್ಯ ಸರಕಾರ ತಂದಿರುವ ಈ ನಿಯಮ ಕನ್ನಡ ಬೆಳವಣಿಗೆಗೆ ಸಹಾಯಕಾರಿ ಆಗಲಿದೆ. ಬೇರೆ ರಾಜ್ಯದಿಂದ ಇಲ್ಲಿ ಬಂದು ಕನ್ನಡ ಕಲಿಯದ ಜನರಿಗೆ ಈಗ ಕನ್ನಡ ಕಲಿಯಲು ಸದವಕಾಶ ಬಂದಂತಾಗಿದೆ.

 

 

ಹೀಗೆ ಕನ್ನಡಪರ ನಿಯಮಗಳು ಬರಲಿ ಎಲ್ಲರು ಕನ್ನಡ ಕಲಿತು ಕನ್ನಡದ ಕಂಪು ವಿಶ್ವಕ್ಕೆ ಹರಡಲಿ ಎಂದು ಆಶಿಸೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top