fbpx
ದೇವರು

ಶಾಪ ಅನ್ನೋದು ದೇವಾ ಕೃಷ್ಣನನ್ನೇ ಬಿಟ್ಟಿಲ್ಲ ಇನ್ನು ಮನುಷ್ಯರು ಯಾವ ಲೆಕ್ಕ ? ಕೃಷ್ಣನಿಗೆ ಸಾವಿನ ಶಾಪ ಕೊಟ್ಟ ಗಾಂಧಾರಿ

ಶಾಪ ಅನ್ನೋದು ದೇವಾ ಕೃಷ್ಣನನ್ನೇ ಬಿಟ್ಟಿಲ್ಲ ಇನ್ನು ಮನುಷ್ಯರು ಯಾವ ಲೆಕ್ಕ ? ಕೃಷ್ಣನಿಗೆ ಸಾವಿನ ಶಾಪ ಕೊಟ್ಟ ಗಾಂಧಾರಿ

 

ಯುದ್ಧವು ಮುಗಿಯಿತೆಂದು ಪಾಂಡವರು ಧೃತರಾಷ್ಟ್ರ, ಗಾಂಧಾರಿಯನ್ನು ನೋಡಲು ಹಸ್ತಿನಾವತಿಗೆ ಬಂದರು. ಯುಯುತ್ಸು ಮಾತ್ರವೇ ಬದುಕಿ ಉಳಿದಿದ್ದನು. ಎಲ್ಲರೂ ಬಂದಾಗ ಧೃತರಾಷ್ಟ್ರನು ಎಲ್ಲರನ್ನೂ ಕರೆದು ಪಾಂಡು ಕುಮಾರರೇ ಬನ್ನಿ ಎಂದು ಸ್ವಾಗತಿಸಿದನು. “ಭೀಮನೆಲ್ಲಿ” ಎಂದು ಕೇಳಿದನು. ಪ್ರತಿಯೊಬ್ಬರೂ ತಮ್ಮ ಹೆಸರು ಹೇಳಿ ಪರಿಚಯ ಮಾಡಿಕೊಂಡರು, ಭೀಮನನ್ನು ಅಪ್ಪಿಕೊಳ್ಳಲು ಬಯಸಿದ್ದೇನೆ, ಎಂದಾಗ ಕೃಷ್ಣನು ಕಣ್ಸನ್ನೆ
ಮಾಡಿದನು. ಭೀಮನ ಬದಲಿಗೆ ದುರ್ಯೋಧನನು ಗದಾಯುದ್ಧದ ಅಭ್ಯಾಸಕ್ಕಾಗಿ ಮಾಡಿಕೊಂಡ ಭೀಮನ ವಿಗ್ರಹವನ್ನು ಎದುರಿಗೆ ತಂದರು. ಧೃತರಾಷ್ಟ್ರನು ಅದನ್ನೇ ಕೈಗಳಿಂದ ಒತ್ತಿ ಪುಡಿಪುಡಿ ಮಾಡಿದನು. ಆದರೆ ತಾನು ಕೊಂದು ಹಾಕುವ ಪ್ರಯತ್ನ ಮಾಡಿದ್ದನ್ನು ತಿಳಿದು ಪಶ್ಚಾತ್ತಾಪ ಪಟ್ಟನು.

 

 

ಕೃಷ್ಣನು ಮಹಾರಾಜ ಇನ್ನು ಮುಂದೆ ಪಾಂಡವರೇ ನಿನ್ನ ಮಕ್ಕಳು, ಇವರೊಂದಿಗೆ ಸುಖವಾಗಿರು ,ಸತ್ತವರಿಗಾಗಿ ಶೋಕ ಪಡಬೇಡ, ಪಾಂಡವರು ಧರ್ಮ ಮಾರ್ಗದಲ್ಲಿದ್ದು ಜಯ ಪಡೆದಿದ್ದಾರೆ. ಅವರೊಂದಿಗೆ ಪ್ರೀತಿಯಿಂದಿರು ಎಂದನು. ಗಾಂಧಾರಿಯು ತನ್ನ ಮಕ್ಕಳನ್ನು ಹೀಗೆ ದಾಯಾದಿ ಕಲಹದಲ್ಲಿ ಕೊಲ್ಲಿಸಿದಕ್ಕಾಗಿ ನೀವು ಹೀಗೆ ಸಾಯಿರೆಂದು ಕೃಷ್ಣನಿಗೆ ಶಾಪ ಕೊಟ್ಟಳು.

 

 

ಪಾಂಡವರು ಮರಳಿ ರಣರಂಗಕ್ಕೆ ಬಂದಾಗ ಅಲ್ಲಿರುವ ಹೆಣಗಳನ್ನು ನೋಡಿ ಮರುಗಿದರು .ಎಲ್ಲಾ ಸ್ತ್ರೀಯರು ದುಃಖಿತರಾಗಿದ್ದಾರೆ, ತಂದೆ, ಮಗ, ಗಂಡ, ಸಹೋದರ ಹೀಗೆ ಶವಗಳನ್ನು ನೋಡಿ ಕಿರುಚಿ ಬೀಳುತ್ತಿದ್ದಾರೆಂದು ಅರಿತರು. ಕ್ರೂರ ಪ್ರಾಣಿಗಳು ಶರೀರವನ್ನು ಕುಕ್ಕಿ ತಿನ್ನುತ್ತಿದ್ದವು. ಅನೇಕ ಲಕ್ಷ ಸಂಖ್ಯೆಯಲ್ಲಿ ಸಾವು ನೋವು ಸಂಭವಿಸಿತ್ತು. ಗಾಂಧಾರಿಯು ಕೃಷ್ಣನಿಗೆ ನೀನು ಮನಸ್ಸು ಮಾಡಿದ್ದರೆ ಎಲ್ಲರನ್ನೂ ಉಳಿಸಬಹುದಿತ್ತು ಎಂದಳು.
ಗಾಂಧಾರಿಯು “ನೀವು ಸಹ ನಿಮ್ಮಲ್ಲೇ ಬಡಿದಾಡಿ ಸಾಯಿರಿ” ಎಂದು ಹೇಳಿದಾಗ ಕೃಷ್ಣನು ಮರು ಮಾತನಾಡಲಿಲ್ಲ. ಮಕ್ಕಳನ್ನು ಕಳೆದುಕೊಂಡವರ ದುಃಖ ನನಗೆ ತಿಳಿದಿದೆ. ದುಷ್ಟ ಶಿಕ್ಷಣ , ಶಿಷ್ಟ ಪಾಲನೆಗಾಗಿ, ನಾನು ಜನ್ಮ ಪಡೆದಿದ್ದೇನೆ. ನನ್ನ ಉದ್ದೇಶ ಈಡೇರಿದೆ, ನನ್ನ ಅವತಾರ ಸಮಾಪ್ತಿಯಾಗುವ ಕಾಲವೂ ಸಹ ಸನಿಹ ಬಂದಿದೆ ಎಂದು ಹೇಳಿದನು.

 

 

ಅನಂತರ ಎಲ್ಲರ ಶವ ಸಂಸ್ಕಾರಕ್ಕೆ ಏರ್ಪಾಟು ಮಾಡಿದರು. ಕುಂತಿಯು ಧರ್ಮರಾಜನಿಗೆ ಕರ್ಣನ ಹಾಗೂ ಕುರುಕುಲದ ರಾಜಕುಮಾರ ಶವ ಸಂಸ್ಕಾರ ಮಾಡು. ಕರ್ಣನು ನಿಮ್ಮ ಅಣ್ಣ ಎಂದಳು. ಆಗ ಪಾಂಡವರಿಗೆ ಸಿಡಿಲು ಬಡಿದಂತಾಯಿತು. ನಾವೆಂತಹ ಪಾಪಿಗಳು, ರಾಜ್ಯದ ಆಸೆಗಾಗಿ ಅಜ್ಜ ,ಗುರು, ಬಂದು, ಸಹೋದರರನ್ನೇ ಬಲಿ ತೆಗೆದುಕೊಂಡೆವು ಎಂದು ಮರುಗಿದರು.

ಪಾಂಡವರು ಎಲ್ಲರ ಶವ ಸಂಸ್ಕಾರ ಮುಗಿಸಿದರು. ಉಳಿದವರ ಕುಟುಂಬವನ್ನು ಪೋಷಿಸಿದರು. ಅನಾಥರಿಗೆ ಅನೇಕ ರೀತಿಯಿಂದ ಉಪಚಾರ, ಪರಿಹಾರಗಳನ್ನು ಕೊಟ್ಟರು. ನಗರದ ಜನರು ಧರ್ಮರಾಜನಲ್ಲಿಗೆ ಬಂದು ಸ್ವಾಮಿ ಇನ್ನು ಮುಂದೆ ರಾಜ್ಯವನ್ನು ನೀವೇ ಆಳಿರಿ ಎಂದು ಪ್ರಾರ್ಥಿಸಿದರು. ಬಂಧುಗಳನ್ನೇ ಕೊಂದು ಈ ರಾಜ್ಯವನ್ನು ನಾನು ಸ್ವೀಕರಿಸಲಾರೆ ಎಂದು ಧರ್ಮರಾಜನು ನಿರಾಕರಿಸಿದನು.
ಆಗ ಅಲ್ಲಿಗೆ ವ್ಯಾಸರು ಮತ್ತು ನಾರದರು ಬಂದು ಹಸ್ತಿನಾವತಿಯ ಸಿಂಹಾಸನ ಬರಿದಾಗಿದೆ. ರಾಜನಿಗೆ ವೈಯಕ್ತಿಕ ಸುಖಕ್ಕಿಂತಲೂ ಪ್ರಜೆಯ ಸುಖವೇ ಮುಖ್ಯವು ಅಪಾರ ಪ್ರಾಣ ಹಾನಿಯಾಗಿದೆ. ಸಂಪತ್ತು ಹಾಳಾಗಿದೆ. ಬೊಕ್ಕಸ ಬರಿದಾಗಿದೆ. ಸೈನ್ಯವೇ ಇಲ್ಲವಾಗಿದೆ .ಈಗ ಅಸ್ತವ್ಯಸ್ತವಾದದ್ದನ್ನು ಸರಿಪಡಿಸು ಎಂದು ಧರ್ಮರಾಯನನ್ನು ಕೇಳಿದಾಗ ಅವನು ಆಡಳಿತವನ್ನು ಸ್ವೀಕರಿಸಲು ಒಪ್ಪಿಸಿದನು. ಯುಧಿಷ್ಠಿರನ ಕುಲ ಗುರುಗಳಾಗಿ ಧೌಮ್ಯ ಮಹರ್ಷಿಗಳು ಬಂದರು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top