fbpx
ರಾಜಕೀಯ

ಮೋದಿ ಅಭಿಮಾನಿಗಳಿಗೆ ಉಚಿತವಾಗಿ ಪಕೋಡ ಮಾರಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು.

ಮೋದಿ ಅಭಿಮಾನಿಗಳಿಗೆ ಉಚಿತವಾಗಿ ಪಕೋಡ ಮಾರಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು.

ಬಿಜೆಪಿ ಪರಿವರ್ತನಾ ಯಾತ್ರೆ ನಡೆದ ಬೆಂಗಳೂರು ನಗರದ ಅರಮನೆ ಮೈದಾನದ ಸುತ್ತ ಮುತ್ತಲಿನ ಸ್ಥಳದಲ್ಲಿ ಪಕೋಡಾ ಮಾರಾಟ ಮಾಡಿ ವಿನೂತನ ಪ್ರತಿಭಟನೆ ಮಾಡಿದ ಘಟನೆ ನಿನ್ನೆ ನಡೆದಿದೆ. ಬಿಜೆಪಿ ಪರಿವರ್ತನಾ ಯಾತ್ರೆ ಜರುಗುತ್ತಿದ್ದ ಅರಮನೆ ಮೈದಾನದ ಹೊರಗಿನ ರಸ್ತೆಯಲ್ಲಿ ಪಕೋಡ ಮಾರಾಟ ಮಾಡಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ತಮ್ಮ ವಶಕ್ಕೆ ಪಡೆದು ಕರೆದೊಯ್ದರು ಎಂದು ತಿಳಿದು ಬಂದಿದೆ.

 

 

ಮಧ್ಯಾಹ್ನದ ವೇಳೆಯಲ್ಲಿ ಮೈದಾನದ ಬಳಿ ಗ್ರಾಜುಯೇಷನ್ ದಿನದಂದು ಧರಿಸುವ ಗೌನ್ ಧರಿಸಿಕೊಂಡು, ಕೈಯಲ್ಲಿ ಪಕೋಡ ಹಿಡಿದು ಬಂದ ಕೆಲವು ವಿಧಯಃರ್ಥಿಗಳು ಪಕೋಡ ಪಕೋಡ ಮೋದಿ ಪಕೋಡ ಎಂದು ಕೂಗಲು ಪ್ರಾರಂಭ ಮಾಡಿದರು.

 

 

ಬಿಜೆಪಿ ಪರಿವರ್ತನಾ ಯಾತ್ರೆಗೆ ಬಸ್ ನಲ್ಲಿ ತೆರಳುತ್ತಿದ್ದ ಜನರಿಗೆ ವಿದ್ಯಾರ್ಥಿಗಳು ಗ್ರಾಜುಕೇಟ್ ಗೌನ್ ಹಾಕಿ ಪಕೋಡ ಹಂಚುತ್ತಿದ್ದರು. ಪ್ರತಿಭಟನಕಾರರು ಮೋದಿ ಪಕೋಡಾ, ಅಮಿತ್ ಶಾ ಪಕೋಡ ಎಂಬ ಭಿತ್ತಿ ಪತ್ರ ಹಿಡಿದುಕೊಂಡಿದ್ದು. ಪಕೋಡ ಪಕೋಡ ಮೋದಿ ಪಕೋಡ ಎಂದು ವಿದ್ಯಾರ್ಥಿಗಳು ಕೂಗುತ್ತಿದ್ದರು. ಇದರಿಂದ ಬಸ್ ನಲ್ಲಿದ್ದ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಲು ಪ್ರಾರಂಭ ಮಾಡಿದರು. ವಿದ್ಯಾರ್ಥಿಗಳು ಮುನ್ನಚ್ಚೆರಿಕಾ ಕ್ರಮವಾಗಿ ವಿಡಿಯೋ ಕ್ಯಾಮೆರಾ ತಂದಿದ್ದರು ಪಕೋಡ ಮಾರುತ್ತಿದ್ದ ಸಂಬಂಧ ದೃಶ್ಯಗಳನ್ನು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು.

ವಿಡಿಯೋ ನೋಡಿ:

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top