fbpx
ಸಿನಿಮಾ

ನಟಿ ಪಾರುಲ್ ಯಾದವ್ ಕನ್ನಡ ಫಿಲಂ ಇಂಡಸ್ಟ್ರಿ ಬಗ್ಗೆ ಆಡಿದ ಆ ಮಾತುಗಳಿಗೆ ದಂಗಾದ ಕನ್ನಡ ಪ್ರೇಕ್ಷಕ !

ಕನ್ನಡ ಕನ್ನಡಿಗರು ಹಾಗೂ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಹಾಡಿ ಹೊಗಳಿದ ನಟಿ ಪಾರುಲ್ ಯಾದವ್

 

 

ಗೋವಿಂದಾಯ ನಮಃ ಚಿತ್ರದ ಮೂಲಕ ಬೆಳ್ಳಿತೆರೆಯನ್ನು ಅಲಂಕರಿಸಿದ ನಟಿ ಪಾರುಲ್ ಯಾದವ್ ‘ಪ್ಯಾರ್ಗೆ ಆಗ್ಬಿಟ್ಟೈತೆ’ ಈ ಹಾಡಿನಿಂದ ಜನಮನ ಗೆದ್ದಿದ್ದು ಸುಳ್ಳಲ್ಲ .
ಈ ಚಿತ್ರದ ನಂತರ ನಟಿ ಪಾರುಲ್ ಯಾದವ್ ಗೆ ಅವಕಾಶಗಳು ಒಂದರ ಮೇಲೆ ಮತ್ತೊಂದರಂತೆ ಬಂದವು

 

ಕನ್ನಡಕ್ಕೆ ನನ್ನ ಒಲವು ಹೆಚ್ಚು

ನನಗೆ ಸಿಕ್ಕಿರುವ ಜನಪ್ರಿಯತೆ ಇಂದು ಕನ್ನಡ ಫಿಲ್ಮ್ ಇಂಡಸ್ಟ್ರಿ ಯಿಂದ ಆದ್ದರಿಂದ ನನಗೆ ಕನ್ನಡ ಚಿತ್ರಗಳು ಹಾಗೂ ಚಿತ್ರರಂಗ ಎಂದರೆ
ಪಂಚಪ್ರಾಣ

 

ಬಾಲಿವುಡ್ ಹಾಗೂ ಕನ್ನಡ ಚಿತ್ರರಂಗ ಇವು ಇವುಗಳಲ್ಲಿ ನಿಮ್ಮ ಆಯ್ಕೆ ಯಾವುದು

 

 

ಇಂದು ನಾನು ಏನಾಗಿದ್ದೇನೋ ಅದಕ್ಕೆ ಕನ್ನಡ ಚಿತ್ರ ಕಲಾವಿದರು ಹಾಗೂ ಕನ್ನಡ ತಂತ್ರಜ್ಞರು ಕನ್ನಡ ಪ್ರೇಕ್ಷಕರು ಕನ್ನಡ ಫಿಲಂ ಕಾರಣ
ಆದ್ದರಿಂದ ನನ್ನ ಊರು ಮುಂಬೈ ಆಗಿದ್ದರು ಸಹ ಬಾಲಿವುಡ್ ನನಗೆ ಹತ್ತಿರವಿದ್ದರೂ ಸಹ ನನಗೆ ಕನ್ನಡ ಚಿತ್ರಗಳೆಂದರೆ ಅಚ್ಚುಮೆಚ್ಚು ಹಾಗೆ ಇಂಡಸ್ಟ್ರೀ ಕೂಡ ನನಗೆ ಅಚ್ಚುಮೆಚ್ಚು

ಬಾಲಿವುಡ್ ನಲ್ಲಿ ಅವಕಾಶಗಳು ಸಿಕ್ಕರೆ

ಬಾಲಿವುಡ್ ನಲ್ಲಿ ಅವಕಾಶಗಳು ಸಿಕ್ಕರೆ ಖಂಡಿತಾ ನಟಿಸುತ್ತೇನೆ ಬಾಲಿವುಡ್ ನಲ್ಲಿ ಅಷ್ಟೇ ಅಲ್ಲ ಬೇರೆ ಭಾಷೆಗಳಾದ ತೆಲುಗು ತಮಿಳು ಮಲಯಾಳಂ ಈ ಭಾಷೆಗಳಲ್ಲೂ ನನಗೆ ನಟಿಸುವ ಆಸೆಯಿದೆ ನಾನು ಎಲ್ಲಾ ಇಂಡಸ್ಟ್ರಿಗಳನ್ನು ಗೌರವಿಸುತ್ತೇನೆ
ಆದರೂ ಸಹ ಕನ್ನಡ ಜನತೆ ನನ್ನನ್ನು ಬಹಳ ಒಪ್ಪಿಕೊಂಡಿದ್ದಾರೆ ನಾನು ಕನ್ನಡತಿ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ ಆದ್ದರಿಂದ ನನ್ನ ಆದ್ಯತೆ ಯಾವಾಗಲೂ ಕನ್ನಡ ಫಿಲ್ಮ್ಗಳಿಗೆ ಇರುತ್ತದೆ

 

 

ಕನ್ನಡ ಫಿಲ್ಮ್ ಇಂಡಸ್ಟ್ರಿ ನನ್ನ ಕರ್ಮಭೂಮಿ

 

ನನಗೆ ಅವಕಾಶಗಳು ಇಲ್ಲದಾಗ ಮೊದಲಿಗೆ ನನಗೆ ಅವಕಾಶ ಕೊಟ್ಟಿದ್ದು ಕನ್ನಡ ಸಿನಿಮಾಗಳು ಆದ್ದರಿಂದ ಇದು ನನ್ನ ಕರ್ಮಭೂಮಿ ನನ್ನ ಮೊದಲ ಆದ್ಯತೆ ಯಾವಾಗಲೂ ಇಲ್ಲಿಯೇ ಇರುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top