fbpx
ಸಮಾಚಾರ

ನರೇಂದ್ರ ಮೋದಿ ಭಾಷಣಕ್ಕೆ ‘ಪ್ರಾಮಿಸ್ ಟೂತ್ ಪೇಸ್ಟ್’ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ ಪ್ರಕಾಶ್ ರೈ

ನರೇಂದ್ರ ಮೋದಿ ಭಾಷಣಕ್ಕೆ ‘ಪ್ರಾಮಿಸ್ ಟೂತ್ ಪೇಸ್ಟ್’ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ ಪ್ರಕಾಶ್ ರೈ

ಬೆಂಗಳೂರು: ನಗರಕ್ಕೆ ಆಗಮಿಸಿ, ಪರಿವರ್ತನಾ ಯಾತ್ರೆಯ ಸಮಾರೋಪ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ.

Related image

ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿರುವ ನಟ ಪ್ರಕಾಶ್ ರೈ, ಇಂದು ಮತ್ತೊಮ್ಮೆ ವ್ಯಂಗವಾಗಿ ಟ್ವೀಟ್ ಮಾಡಿದ್ದಾರೆ. 2014ರಲ್ಲಿ ಮಾರಾಟವಾದ ಪ್ರಾಮಿಸ್ ಟೂತ್ ಪೇಸ್ಟ್ ತೊಂದರೆಗೀಡಾದ ರೈತರು ಮತ್ತು ಉದ್ಯೋಗವಿಲ್ಲದ ಯುವಕರ ಮುಖದಲ್ಲಿ ನಗು ಮೂಡಿಸಲು ವಿಫಲವಾಗಿದೆ ಎಂದು ಟೀಕಿಸಿದ್ದಾರೆ.

ನರೇಂದ್ರ ಮೋದಿ ಭಾಷಣಕ್ಕೆ ‘ಪ್ರಾಮಿಸ್ ಟೂತ್ಪೇಸ್ಟ್’ , ಎಂದು ಟ್ವೀಟ್ ಮಾಡಿ, 2014ರಲ್ಲಿ ಈ ಟೂತ್ಪೇಸ್ಟ್ ಹಂಚಿದರು. ಆದರೆ, ಬ್ರಷ್ ಮಾಡುವುದನ್ನೇ ಮರೆತಿದ್ದಾರೆ, ಎಂದು ಹೀಯಾಳಿಸಿದ್ದಾರೆ.

 

‘ರೈತರು, ನಿರುದ್ಯೋಗಿಗಳ ಮುಖದಲ್ಲಿ ನಗು ತರಿಸುತ್ತಾ? ನಿನ್ನೆ ರಾಜ್ಯದ ಪರಿವರ್ತನಾ ಯಾತ್ರೆಯಲ್ಲಿಯೂ ಈ ಪ್ರಾಮೀಸ್ ಟೂತ್ಪೇಸ್ಟ್ ಅನ್ನು ಮಾರಿದ್ದು, ಶ್ರೀ ಸಾಮಾನ್ಯನ ಮುಖದಲ್ಲಿ ನಗು ತರುವಲ್ಲಿ ಯಶಸ್ವಿಯಾಗುತ್ತಾ?’ ಎಂದು #JustAskig ಹ್ಯಾಷ್ಟ್ಯಾಗ್ ಅಡಿಯಲ್ಲಿ ಪ್ರಶ್ನಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top