fbpx
ಕರ್ನಾಟಕ

ಸರಕಾರಿ ಶಾಲೆಗಳಿಗೆ ಸೌರ ಶಕ್ತಿಯ ಮೂಲಕ ವಿದ್ಯುತ್ ನೀಡಲು ರಾಜ್ಯ ಸರ್ಕಾರದ ಚಿಂತನೆ

ಸರಕಾರಿ ಶಾಲೆಗಳಿಗೆ ಸೌರ ಶಕ್ತಿಯ ಮೂಲಕ ವಿದ್ಯುತ್ ನೀಡಲು ರಾಜ್ಯ ಸರ್ಕಾರದ ಚಿಂತನೆ

ಸರಕಾರಿ ಶಾಲೆಗಳಿಗೆ ಸೌರ ಶಕ್ತಿಯ ಮೂಲಕ ವಿದ್ಯುತ್ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದ ಎಲ್ಲ ಸರಕಾರಿ ಶಾಲೆಗಳ ಚಾವಣಿ ಮೇಲೆ ಸೋಲಾರ್‌ ಫಲಕಗಳನ್ನು ಅಳವಡಿಸುವ ಮೂಲಕ ಶಾಲೆಗೆ ಬೇಕಾದ ವಿದ್ಯುತ್‌ ಉತ್ಪಾದನೆ ಮಾಡಲು ಇಂಧನ ಇಲಾಖೆ ಚಿಂತನೆ ನಡೆಸಿದೆ. ಸರಕಾರಿ ಕಟ್ಟಡ ಹಾಗೂ ದೊಡ್ಡ ದೊಡ್ಡ ಕಾಲೇಜುಗಳಲ್ಲಿ ಸೌರ ವಿದ್ಯುತ್‌ ಘಟಕ ಅಳವಡಿಸುತ್ತಿರುವ ಇಲಾಖೆ ಇದೀಗ ಸರಕಾರಿ ಶಾಲೆಗಳಿಗೂ ಈ ಸೌಲಭ್ಯ ಒದಗಿಸಲು ಯೋಚಿಸುತ್ತಿದೆ.

ಶಾಲೆಗಳ ಮೂಲ ಸೌಕರ್ಯಗಳಿಗೆ ಸೌರ ವಿದ್ಯುತ್ತನ್ನೇ ಮುಖ್ಯವಾಗಿ ಬಳಸಿಕೊಳ್ಳಬಹುದಾಗಿದೆ. ಶಾಲೆಗಳ ಬೆಳಕು, ಫ್ಯಾನ್, ಕಂಪ್ಯೂಟರ್‌ ಕಲಿಕೆ ಇದು ಸಹಕಾರಿಯಾಗಲಿದೆ. ಅಲ್ಲದೆ ಸೌರ ವಿದ್ಯುತ್ ಅಳವಡಿಕೆಯಿಂದ ಶಾಲೆಗಳಲ್ಲಿ ಪ್ರತ್ಯೇಕವಾಗಿ ವಿದ್ಯುತ್‌ ಬಿಲ್‌ ಕಟ್ಟುವ ವ್ಯವಸ್ಥೆ ಇರುವುದಿಲ್ಲ.

Image result for govt school solar plant

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ‘ಸರಕಾರಿ ಶಾಲೆಗಳ ಸಶಕ್ತೀಕರಣ’ ಕಾರ್ಯಕ್ರಮದಲ್ಲಿ ಶಾಲೆಗಳ ಈ ಬೇಡಿಕೆ ಬಂದಿದ್ದರಿಂದ ಇಂಧನ ಸಚಿವರಿಗೆ ಪತ್ರ ಬರೆಯಲಾಗಿದೆ.

 

” ಸರಕಾರಿ ಶಾಲೆಗಳ ಸಶಕ್ತೀಕರಣ ಕಾರ್ಯಕ್ರಮದಲ್ಲಿ ಸರಕಾರಿ ಶಾಲೆಗಳಲ್ಲಿ ವಿದ್ಯುತ್‌ ಸಮಸ್ಯೆ ಇರುವುದು ಗಮನಕ್ಕೆ ಬಂದಿತು. ಈ ಹಿನ್ನೆಲೆಯಲ್ಲಿ ಉಚಿತ ವಿದ್ಯುತ್‌ ಒದಗಿಸುವಂತೆ ಇಂಧನ ಸಚಿವರಿಗೆ ಪತ್ರ ಬರೆಯಲಾಗಿದ್ದು, ಅದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ. ಎಲ್ಲ ಶಾಲೆಗಳಿಗೂ ಉಚಿತ ವಿದ್ಯುತ್‌ ವ್ಯವಸ್ಥೆ ಕಲ್ಪಿಸುವ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆ ಮಾಡಬೇಕಿದೆ.” ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷೆ ಕೃಪಾ ಆಳ್ವಾ ತಿಳಿಸಿದ್ದಾರೆ.

Related image

”ಶಾಲೆಗಳಲ್ಲಿ ಸೌರ ವಿದ್ಯುತ್‌ ಸೌಲಭ್ಯ ಕಲ್ಪಿಸುವ ಕುರಿತು ಇಲಾಖೆ ಚಿಂತನೆ ನಡೆಸುತ್ತಿದೆ. ಇನ್ನು ಉಚಿತ ವಿದ್ಯುತ್‌ ಪೂರೈಕೆ ವಿಚಾರವಾಗಿ ಸದ್ಯಕ್ಕೆ ಯಾವುದೇ ಆರ್ಥಿಕ ಇಲಾಖೆ ಅನುಮತಿ ನೀಡಿದ್ದೇ ಆದಲ್ಲಿ ರೈತರಿಗೆ ಉಚಿತ ವಿದ್ಯುತ್‌ ಪೂರೈಕೆ ಮಾಡುತ್ತಿರುವ ರೀತಿಯಲ್ಲಿಯೇ ಶಾಲೆಗಳಿಗೂ ಉಚಿತ ವಿದ್ಯುತ್‌ ಸೌಲಭ್ಯ ಕಲ್ಪಸಬಹುದು,” ಎಂದು ಇಲಾಖೆ ಮೂಲಗಳು ತಿಳಿಸಿವೆ.

 

”ರಾಜ್ಯದಲ್ಲಿ 46 ಸಾವಿರಕ್ಕೂ ಹೆಚ್ಚು ಸರಕಾರಿ ಶಾಲೆಗಳಿದ್ದು, ಅವುಗಳ ಅಭಿವೃದ್ಧಿಗೆ ನೀಡುವ ಅನುದಾನದಲ್ಲಿಯೇ ವಿದ್ಯುತ್‌ ಬಿಲ್‌ ಸಹ ಪಾವತಿಸಬೇಕಾಗಿದೆ. ಹೀಗಾಗಿ ಬಹುತೇಕ ಶಾಲೆಗಳಲ್ಲಿ ಶಾಲೆ ಕಚೇರಿ ಹೊರತು ಪಡಿಸಿ ತರಗತಿಗಳಲ್ಲಿ ವಿದ್ಯುತ್‌ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಇದರಿಂದ ಮಕ್ಕಳು ಕಂಪ್ಯೂಟರ್‌ ಶಿಕ್ಷಣ ಪಡೆಯುವುದು ಸಮಸ್ಯೆಯಾಗಿದೆ. ಮಾತ್ರವಲ್ಲ ಮಳೆಗಾಲದಲ್ಲಿ, ಮೋಡಕವಿದಂತಹ ಸಂದರ್ಭದಲ್ಲಿ ಲೈಟ್‌ಗಳನ್ನು ಹಾಕಿಕೊಳ್ಳಲು ಹಾಗು ಬೇಸಿಗೆಯಲ್ಲಿ ಫ್ಯಾನ್‌ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಕ್ಕಳ ಯಾವುದೇ ಹಕ್ಕುಗಳ ಉಲ್ಲಂಘನೆ ಆಗಬಾರದು,”ಎಂದು ಕೃಪಾ ಆಳ್ವಾ ತಿಳಿಸಿದ್ದಾರೆ.

 

ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್ ಶಾಲೆಗಳನ್ನಾಗಿ ಪರಿವಾರಿಸಲು ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಆದೇಶ ಹೊರಡಿಸಿತ್ತು. ಸ್ಮಾರ್ಟ್ ಶಾಲೆಗಳಿಗೆ ವಿದ್ಯುತ್ ಅವಶ್ಯವಾಗಿದ್ದು, ಈ ಯೋಜನೆ ಬಹು ಉಪಯೋಗಿಯಾಗಲಿದೆ.

 

” ಈ ಹಿಂದೆ ಆಸ್ಪತ್ರೆಗಳಿಗೆ ಸೌರ ವಿದ್ಯುತ್‌ ಅಳವಡಿಸುವ ಕುರಿತು ಇಂಧನ ಇಲಾಖೆಗೆ ಮನವಿ ಮಾಡಲಾಗಿತ್ತು. ಅದೇ ರೀತಿಯಲ್ಲಿ ಶಾಲೆಗಳಿಗೂ ಸೌರ ವಿದ್ಯುತ್‌ ಅಳವಡಿಸಿದರೆ ಶಾಲೆಯ ಅಭಿವೃದ್ಧಿಗೆ ನೀಡುವ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ. ಹಾಗೇನಾದರೂ ಇಂಧನ ಇಲಾಖೆ ಶಾಲೆಗಳಿಗೆ ಸೌರ ವಿದ್ಯುತ್‌ ಸೌಲಭ್ಯ ಕಲ್ಪಿಸುವುದೇ ಆದರೆ ಅದು ಒಳ್ಳೆಯ ಹೆಜ್ಜೆ.” ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಪ್ರತಿಕ್ರಿಯಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top