fbpx
ಆರೋಗ್ಯ

ನೆನಪಿನ ಶಕ್ತಿ ವೃದ್ಧಿಸಲು ಯೋಗದಲ್ಲಿ ಸುಲಭ ಪರಿಹಾರಗಳು ಇಲ್ಲಿವೆ.

ನೆನಪಿನ ಶಕ್ತಿ ವೃದ್ಧಿಸಲು ಯೋಗದಲ್ಲಿ ಸುಲಭ ಪರಿಹಾರಗಳು ಇಲ್ಲಿವೆ.

ಸಾಮಾನ್ಯವಾಗಿ ವಿದ್ಯಾರ್ಥಿಗಳು ನೆನಪಿನ ಶಕ್ತಿಯ ಕೊರತೆಯನ್ನು ಹೆಚ್ಚು ಅನುಭವಿಸುತ್ತಾರೆ. ಮಕ್ಕಳ ಬಗ್ಗೆ ಬಹುತೇಕ ಪೋಷಕರ ದೂರು ಕೂಡ ನೆನಪಿನ ಶಕ್ತಿಯೇ ಆಗಿರುತ್ತದೆ. ನೆನಪಿನ ಶಕ್ತಿ ವೃದ್ಧಿಸಲು ಯೋಗದಲ್ಲಿ ಸುಲಭ ಪರಿಹಾರಗಳಿವೆ. ಯೋಗದಲ್ಲಿನ ಅನೇಕ ಆಸನಗಳು ವಿದ್ಯಾರ್ಥಿಗಳಿಗೆ ತಮ್ಮ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ.

Image result for children surya namaskara

ದೇಹ ಮತ್ತು ಮನಸ್ಸು ಎರಡನ್ನೂ ಒಂದು ಎಂದು ಪರಿಗಣಿಸಿ ಯೋಗದ ವಿವಿಧ ಆಸನಗಳು ರೂಪಿಸಲಾಗಿದೆ. ಯೋಗಾಭ್ಯಾಸದಿಂದ ಮನೋಬಲ ವೃದ್ಧಿಯಾಗುತ್ತದೆ. ಬುದ್ಧಿಮತ್ತೆ ಮತ್ತು ಭಾವನಾತ್ಮಕತೆ (IQ ಮತ್ತು EQ) ಮೇಲೆ ಯೋಗ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡ ನಿವಾರಣೆ ಮತ್ತು ಸಮಚಿತ್ತ ಕಾಯ್ದುಕೊಳ್ಳಲು ಯೋಗ ಮದ್ದು.

ವಿದ್ಯಾರ್ಥಿಗಳಿಗಾಗಿ ಸೂರ್ಯ ನಮಸ್ಕಾರ, ಪ್ರಾಣಾಯಾಮ ಮತ್ತು ಶೀರ್ಷಾಸನ. ನೆನಪಿನ ಶಕ್ತಿ ವೃದ್ಧಿಸಲು ಯೋಗದಲ್ಲಿ ಸುಲಭ ಪರಿಹಾರಗಳಿವೆ. ಯೋಗದಲ್ಲಿನ ಅನೇಕ ಆಸನಗಳು ವಿದ್ಯಾರ್ಥಿಗಳಿಗೆ ತಮ್ಮ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ.

Related image

ಸೂರ್ಯ ನಮಸ್ಕಾರ

ಸೂರ್ಯ ನಮಸ್ಕಾರವು ಅನೇಕ ಆಸನಗಳಿಂದ ಕೂಡಿದ್ದು ಇದು ಎಲ್ಲಾ ವಿಧದಲ್ಲೂ ಉಪಯುಕ್ತವಾಗುವ ಅಭ್ಯಾಸವಾಗಿದೆ.

Image result for children surya namaskara

ಪ್ರಾಣಾಯಾಮ

ಉಸಿರಾಟದ ಮೇಲೆ ನಿಯಂತ್ರಣ ಕಂಡುಕೊಳ್ಳುವ ಪ್ರಾಣಾಯಾಮವು ಏಕಾಗ್ರತೆ ಹೆಚ್ಚಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಪ್ರಾಣಾಯಾಮದ ಅಭ್ಯಾಸದಿಂದ ವಿದ್ಯಾರ್ಥಿಗಳು ತಾವು ಓದಿದ್ದನ್ನು ಬಹು ಬೇಗ ಗ್ರಹಿಸಿಕೊಳ್ಳಬಹುದಾಗಿದೆ.

Related image

ಶೀರ್ಷಾಸನ

ತಲೆಕೆಳಗಾಗಿ ಕಾಲು ಮೇಲೆ ಮಾಡುವ ಶೀರ್ಷಾಸನವು ನೆನಪಿನ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ವಿದ್ಯಾರ್ಥಿಗಳಿಗೆ ಸದಾ ಕಾಡುವ ತಲೆನೋವಿನಿಂದಲೂ ಬಿಡುಗಡೆ ನೀಡುತ್ತದೆ. ಪರೀಕ್ಷಾ ಸಮಯದಲ್ಲಿ ಬಹುತೇಕ ವಿದ್ಯಾರ್ಥಿಗಳು ತಲೆನೋವಿನ ಸಮಸ್ಯೆಯಿಂದ ಬಳಲುತ್ತಾರೆ, ಅಂತಹವರಿಗೆ ಈ ಆಸನದಿಂದ ಸಾಕಷ್ಟು ಪ್ರಯೋಜನಗಳಿವೆ.

ಯೋಗ ಮಾಡುವುದರಿಂದ ಉಪಯೋಗಗಳು

ನಿಯಮಿತವಾಗಿ ಸೂರ್ಯ ನಮಸ್ಕಾರ ಮಾಡುವುದರಿಂದ ಒತ್ತಡವನ್ನು ಸುಲಭವಾಗಿ ಕಡಿಮೆ ಮಾಡಬಹುದು ಮತ್ತು ನಿಮ್ಮ ಏಕಾಗ್ರತೆ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ಮನಸ್ಸಿಗೆ ಶಾಂತಿ ನೀಡುತ್ತದೆ.

 

ಬೆಳಿಗ್ಗೆ ಸೂರ್ಯ ಹುಟ್ಟುವುದಕ್ಕಿಂತ ಮೊದಲು ಅತವಾ ಸೂರ್ಯನೊಂದಿಗಾದರೂ ಏಳುವುದು ಅತ್ಯಂತ ಶ್ರೆಯಷ್ಕರ. ಮುಂಜಾನೆ ಬೇಗ ಏಳುವುದು ಆರೋಗ್ಯದ ದೃಷ್ಟಿಯಿಂದ ಹಿತಕಾರಿ ಅನ್ನುವುದಕ್ಕೆ ಸಾಕಷ್ಟು ವಿಜ್ಞಾನಿಕ ಕಾರಣಗಳಿದ್ದರೂ ಅದಕ್ಕೂ ಮಿಗಿಲಾಗಿ ಮುಂಜಾನೆಯ ಪ್ರಶಾಂತ ಹಾಗೂ ಸುಂದರ ವಾತಾವರಣವನ್ನು ಅನುಭವಿಸುತ್ತ ಆ ಸಂದರ್ಭದಲ್ಲಿ  ಸೂರ್ಯ ನಮಸ್ಕಾರ, ಧ್ಯಾನ, ಜಪ ತಪಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯದ ದೃಷ್ಟಿಯಿಂದ ಗರಿಷ್ಟ ಲಾಭವಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top