fbpx
ಸಮಾಚಾರ

ಶಾಲೆಗ ರಜೆ ನೀಡಿ ಗುಂಡು ತುಂಡು ಭರ್ಜರಿ ಪಾರ್ಟಿ ಮಾಡಿದ ಶಿಕ್ಷಕರು!

ಶಾಲೆಗ ರಜೆ ನೀಡಿ ಗುಂಡು ತುಂಡು ಭರ್ಜರಿ ಪಾರ್ಟಿ ಮಾಡಿದ ಶಿಕ್ಷಕರು!

ವಿಜಯಪುರ: ಶಿಕ್ಷಕರೊಬ್ಬರು ನಿವೃತ್ತಿ ಹೊಂದಿದ ಹಿನ್ನೆಲೆ  ಉಳಿದ ಶಿಕ್ಷಕರೆಲ್ಲಾ ಒಟ್ಟಿಗೆ ಸೇರಿ ಗುಂಡು, ತುಂಡಿನ ಪಾರ್ಟಿ ನಡೆಸಿದ ಘಟನೆಯೊಂದು ನಡೆದಿದೆ. ಮುದ್ದೇಬಿಹಾಳದ ರಕ್ಕಸಗಿ ಸರ್ಕಾರಿ ಪ್ರೌಢ ಶಾಲೆ ಮಕ್ಕಳಿಗೆ ಅನಧಿಕೃತವಾಗಿ ರಜೆ ನೀಡಿ ಶಿಕ್ಷಕರೆಲ್ಲಾ ಪಕ್ಕದ ಹೊಲದಲ್ಲಿ ಸೇರಿ ಗುಂಡು ತುಂಡು ಪಾರ್ಟಿ ನಡೆಸಿದ್ದಾರೆ. ಈ ಘಟನೆ ಜನವರಿ 31 ರಂದು ನಡೆದಿದ್ದು ಈಗ ಬೆಳಕಿಗೆ ಬಂದಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ರಕ್ಕಸಗಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎ. ಹೆಚ್ ಬಿರಾದಾರ್ ಹಾಗೂ 4 ಜನ ಶಿಕ್ಷಕರು ಜಮೀನೊಂದರಲ್ಲಿ ಪಾರ್ಟಿ ಮಾಡಿದ್ದಾರೆ. ಈ ಘಟನೆ ಜನವರಿ 31 ರಂದು ನಡೆದಿದ್ದು, ಶಿಕ್ಷಕರ ಈ ಆಟಾಟೋಪಕ್ಕೆ ಆಕ್ರೋಶಗೊಂಡ ಸಾರ್ವಜನಿಕರು ಹಾಗೂ ಪಾಲಕರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, ಈ ವೇಳೆ ನಾನು ಸುರಪೂರದ ದೊರೆ. ನನ್ನನ್ನು ಯಾರು ಕೇಳೋರು? ಎಂದು ಕುಡಿದ ಅಮಲಿನಲ್ಲಿ ಮುಖ್ಯೋಪಾಧ್ಯಾಯ ಬಿರಾದಾರ್ ಅವಾಜ್ ಹಾಕಿದ್ದಾನೆ

ಬಿ.ಆರ್‌.ಲಮಾಣಿ ಎನ್ನುವ ಶಿಕ್ಷಕ ನಿವೃತ್ತಿಯಾದ ಸಂಭ್ರಮಕ್ಕೆ ಮುಖ್ಯೋಪಾಧ್ಯಾಯ ಎ.ಎಚ್‌.ಬಿರಾದಾರ್‌ ಮತ್ತು ನಾಲ್ವರು ಸಹ ಶಿಕ್ಷಕರು ಈ ಭರ್ಜರಿ ಪಾರ್ಟಿ ಮಾಡುತ್ತಿದ್ದಾರೆ.

ಯಾವುದೇ ಉದ್ದೇಶವಿಲ್ಲದೆ ರಜೆ ಸಾರಿದ್ದರ ಬಗ್ಗೆ ಅನುಮಾನಗೊಂಡ ಪೋಷಕರು ಮತ್ತು ಸಾರ್ವಜನಿಕರು ಸ್ಥಳಕ್ಕೆ ತೆರಳಿ ಶಿಕ್ಷಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಕೇಳಿದಾಗ ಬಿರಾದಾರ್ ಅವರು ನಾನು ಸುರಪುರದ ದೊರೆ ನನ್ನನ್ನು ಕೇಳುವವರು ಯಾರು? ಎಂದಿದ್ದಾರೆ. ಇದೇ ವೇಳೆ ಸಾರ್ವಜನಿಕರಿಗೆ ಕುಡಿದ ಅಮಲಿನಲ್ಲಿ ಶಿಕ್ಷಕರು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಮಾತ್ರವಲ್ಲದೆ ಬಿಇಓ ಅವರಿಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

ಈ ಬಗ್ಗೆ ನಾಲ್ವರು ಶಿಕ್ಷಕರನ್ನು ಅಮಾನತು ಮಾಡುಲು ಬಿಇಓ ಅವರು ಡಿಡಿಪಿಐಗೆ ಶಿಫಾರಸು ಪತ್ರ ಕಳುಹಿಸಿರುವ ಬಗ್ಗೆ ವರದಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top