fbpx
ಸಿನಿಮಾ

ದರ್ಶನ ಗೆ ಭರ್ಜರಿ ಗಿಫ್ಟ್ ಕೊಟ್ಟ ಪತ್ನಿ ವಿಜಯಲಕ್ಷ್ಮಿ

ದರ್ಶನ ಗೆ ಭರ್ಜರಿ ಗಿಫ್ಟ್ ಕೊಟ್ಟ ಪತ್ನಿ ವಿಜಯಲಕ್ಷ್ಮಿ

 

ಫೆಬ್ರುವರಿ 16 ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ ರವರ ದರ್ಶನ್‌ ಜನುಮ ದಿನವಿದೆ , ದರ್ಶನ ಅಭಿಮಾನಿಗಳು ಹುಟ್ಟುಹಬ್ಬಕ್ಕೆ ಸಕಲ ಸಿದ್ದತೆಯನ್ನು ಈಗಾಗಲೇ ಮಾಡಿಕೊಂಡಿದ್ದಾರೆ. ವಿಶಿಷ್ಟವಾಗಿ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ನಿರ್ಧಾರ ಮಾಡಿದ್ದಾರೆ. ಹುಟ್ಟು ಹಬ್ಬ ಸಮೀಪಿಸುತ್ತಿರುವ ಈ ಸಂಧರ್ಭದಲ್ಲಿ ಅಭಿಮಾನಿಗಳಿಗೆ ದರ್ಶನ ಪತ್ನಿ ವಿಜಯಲಕ್ಷ್ಮಿ ಒಂದೊಳ್ಳೆ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ.

 

ಹುಟ್ಟುಹಬ್ಬದ ವಾರಕ್ಕೂ ಮೊದಲೇ ವಿಜಯಲಕ್ಷ್ಮಿ ದರ್ಶನ್ ವಿಶೇಷವಾಗಿರುವ ಒಂದೊಳ್ಳೆ ಗಿಫ್ಟ್ ನೀಡಿದ್ದಾರೆ. ಹೌದು ದರ್ಶನ್ ಪತ್ನಿ ವಿಜಯಲಕ್ಷ್ಮಿ ನಿನ್ನೆ ತಮ್ಮ ಉಂಗುರದ ಬೆರಳಿನ ಮೇಲೆ ಮೇಲೆ ದರ್ಶನ್ ರವರ ಹೆಸರಿನ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರ ಹೆಸರು ಮತ್ತು ಭಾವಚಿತ್ರವನ್ನ ಹಚ್ಚೆಯನ್ನು ಹಾಕಿಸಿಕೊಳ್ಳುತ್ತಾರೆ. ದರ್ಶನ ಹೆಸರಿನ ಜೊತೆಯಾಗಿ ಒಂದು ಹಾರ್ಟ್‌ ಸಿಂಬಲ್‌ ಸಹಿತ ಇದೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಚಿತ್ರವನ್ನು ಅವರು ಹಚ್ಚಿಕೊಂಡಿದ್ದಾರೆ. ಜೊತೆಗೆ ಒಂದು ಮುದ್ದಾದ ಬೆಕ್ಕಿನ ಮರಿಯನ್ನು ಅವರು ಹಿಡಿದುಕೊಂಡಿದ್ದಾರೆ.

 

 

ಪತ್ನಿ ತನ್ನ ಹೆಸರಿನ ಹಚ್ಚೆ ಹಾಕಿಸಿಕೊಂಡಿರುವುದನ್ನು ನೋಡಿದ ದರ್ಶನ ಖುಷಿ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top