fbpx
ಸಿನಿಮಾ

ವಿನೋದ್ ಆಳ್ವ ಇಬ್ಬರು ಮಕ್ಕಳು ಏಕಕಾಲಕ್ಕೆ ಚಿತ್ರರಂಗ ಪ್ರವೇಶ. ಯಾವಾಗ ಗೊತ್ತಾ?

ವಿನೋದ್ ಆಳ್ವ ಇಬ್ಬರು ಮಕ್ಕಳು ಏಕಕಾಲಕ್ಕೆ ಚಿತ್ರರಂಗ ಪ್ರವೇಶ. ಯಾವಾಗ ಗೊತ್ತಾ?

 

“ತವರು ಮನೆ” ಚಿತ್ರ ಮುಖೇನ ಚಿತ್ರರಂಗಕ್ಕೆ ಕಾಲಿಟ್ಟು ವಿನೋದ್‌ ಆಳ್ವಾ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿಯೂ ಅಭಿನಯ ಮಾಡಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ವಿನೋದ್ ಅಲ್ವ ಅವರ ಬಹಳ ದಿನಗಳ ಆಸೆಯಂತೆ ಅವರ ಮಕ್ಕಳನ್ನು ಚಿತ್ರರಂಗಕ್ಕೆ ಕರೆತರಲು ಸಕಲ ಸಿದ್ದತೆಯನ್ನು ಅವರು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

 

 

ದಕ್ಷಿಣ ಕನ್ನಡ ಜಿಲ್ಲೆಯವರಾದ ವಿನೋದ್‌ ಆಳ್ವಾ 1985 ರಲ್ಲಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ತಮ್ಮ ಅಮೋಘ ನಟನೆಯ ಮೂಲಕ ವಿವಿಧ ಭಾಷೆಯಲ್ಲಿ ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟನೆ ಮಾಡಿದರು. ವಿನೋದ್ ಆಳ್ವ ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಅಭಿನಯ ಮಾಡಿದ್ದಾರೆ. ಈಗ ಇವರ ಮಕ್ಕಳಾದ ಅಮೋಘ ಹಾಗೂ ಹಯಾಗ್‌ರನ್ನು ಚಿತ್ರರಂಗಕ್ಕೆ ಪರಿಚಯ ಮಾಡಲು ಸಕಲ ಸಿದ್ಧತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ವಿನೋದ್ ಆಳ್ವ ಇಬ್ಬರು ಪುತ್ರರಾದ ಅಮೋಘ ಹಾಗೂ ಹಯಾಗ್‌ ಅಭಿನಯಕ್ಕೆ ಸಂಬಂದಿಸಿದ ತರಬೇತಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೆರಡು ವರ್ಷದಲ್ಲಿ 2020 ಕ್ಕೆ ಭರ್ಜರಿ ಎಂಟ್ರಿ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.

 

 

ಇನ್ನು ವಿನೋದ ಅಳವ ರವರು ಕನ್ನಡದ ‘ಪ್ರೇಮ ಯುದ್ಧ’ ಚಿತ್ರದಲ್ಲಿ ನಟನೆ ಮಾಡಲಿದ್ದಾರೆ ಎಂದು ಗಾಂಧಿನಗರದಲ್ಲಿ ಸುದ್ದಿ ಹರಿದಾಡುತ್ತಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top