fbpx
ಸಿನಿಮಾ

ಉಗ್ರಂ ಶ್ರೀ ಮುರಳಿ ನೆಕ್ಸ್ಟ್ ಫಿಲಂ ಹೇಗಿರ್ಬೇಕು ಈಗ ನೀವೇ ಡಿಸೈಡ್ ಮಾಡಿ ..

ಚಂದ್ರ ಚಕೋರಿ ಚಿತ್ರದ ಮೂಲಕ ಕನ್ನಡ ಫಿಲ್ಮ್ ಇಂಡಸ್ಟ್ರಿಗೆ ಪರಿಚಯವಾಗಿ ಒಂದು ಹೊಸ ಪ್ರಯತ್ನಕ್ಕೆ ನಾಂದಿಯಾದವರು ಶ್ರೀ ಮುರಳಿ
ನಂತರ ತಮ್ಮ ಕೆರಿಯರ್ನಲ್ಲಿ ಅಷ್ಟು ಯಶಸ್ಸನ್ನು ಕಂಡಿಲ್ಲವಾದರೂ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಉಗ್ರಂ’ ಚಿತ್ರ ಮತ್ತೆ ಅವರಿಗೆ ಹೊಸ ಜೀವನವನ್ನೇ ತಂದುಕೊಟ್ಟಿತು.

 

 

ಉಗ್ರಂ ಚಿತ್ರ ಹಿಟ್ ಆದ ಬಳಿಕ ಮುರಳಿ ಅವರ ಇಮೇಜ್ ಸಂಪೂರ್ಣವಾಗಿ ಬದಲಾಗಿತ್ತು
ಉಗ್ರಂ ನಂತರ ರಥಾವರ ಹಾಗೂ ಶಿವಣ್ಣನ ಜೊತೆ ನಟಿಸಿದ್ದ ಮಫ್ತಿ ಚಿತ್ರಗಳು ಬಹಳ ಹೆಸರನ್ನು ತಂದುಕೊಟ್ಟಿತ್ತು ,ಈ ಚಿತ್ರಗಳಿಂದಾಗಿ ಮತ್ತೆ ಮುರಳಿ ಅವರಿಗೆ ‘ಮಾಸ್ ಹೀರೋ’ ಎಂಬ ಪಟ್ಟವೂ ಸಿಕ್ಕಿತು.

ಈಗ ತಮ್ಮ ಮುಂದಿನ ಚಿತ್ರ ಯಾವ ರೀತಿ ಇರಬೇಕು ಎಂಬುದನ್ನು ಅಭಿಮಾನಿಗಳಿಗಾಗಿ ತಮ್ಮ ಫೇಸ್ ಬುಕ್ ಸ್ಟೇಟಸ್ ಮೂಲಕ ಕೇಳಿಕೊಂಡಿದ್ದಾರೆ..

 

 

ಯಾವ ಚಿತ್ರದಲ್ಲಿ ನನ್ನನ್ನು ನೋಡಲು ನಿಮಗೆ ಇಷ್ಟ ಆಕ್ಷನ್ ಚಿತ್ರ, ಡ್ರಾಮಾ , ಕಾಮಿಡಿ ಅಥವಾ ಫ್ಯಾಮಿಲಿ ನೋಡುವಂತಹ ಸಿನಿಮಾಗಳು ಎಂಬುದು ಮುರಳಿ ಅವರ ಪ್ರಶ್ನೆಯಾಗಿತ್ತು

ಈ ಒಂದು ಸ್ಟೇಟಸ್ ಗೆ ಸಾವಿರಾರು ಉತ್ತರಗಳು ಬಂದಿದ್ದು ಹೆಚ್ಚಿನ ಪ್ರೇಕ್ಷಕರು ಮುರಳಿ ಅವರನ್ನು ಉಗ್ರ ರೂಪದಲ್ಲಿ ನೋಡಲು ಇಷ್ಟಪಡುತ್ತಿದ್ದಾರೆ.

 

 

ಮತ್ತೆ ಉಗ್ರಂ 2 ನೋಡುವ ಆಸೆ ಎಂದು ಪ್ರೇಕ್ಷಕರು ಹೇಳಿಕೊಂಡಿದ್ದಾರೆ ಉಗ್ರಂ ಅಷ್ಟೇ ಅಲ್ಲದೇ ಮಫ್ತಿಯಲ್ಲಿ ಮಾಡಿದ ಪಾತ್ರವನ್ನು ಇನ್ನೊಮ್ಮೆ ನೋಡುವಾಸೆ ಎಂದು ಕೂಡ ಅಭಿಮಾನಿಗಳು ಹೇಳಿಕೊಂಡಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top