fbpx
ಮನೋರಂಜನೆ

ಓಗರ ಕಾರ್ಯಕ್ರಮದಲ್ಲಿ ದರ್ಶನ್ ಏನಂದ್ರು ಗೊತ್ತಾ?

ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ರಘುನಾಥ್ ಅವರ ಹೊಸಾ ಕನಸು `ಓಗರ’. ರಘುನಾಥ್ ಮತ್ತು ವಾಣಿಶ್ರೀ ರಘುನಾಥ್ ಸಾರಥ್ಯದಲ್ಲಿ ಆಹಾರೋತ್ಪನ್ನ ತಯಾರಿಕಾ ಘಟಕ `ಓಗರ’ ಆರಂಭವಾಗುವ ನಿಮಿತ್ತವಾಗಿ ಪುರಭವನದಲ್ಲಿ ಚೆಂದದ್ದೊಂದು ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದ ಪ್ರಧಾನ ಆಕರ್ಷಣೆಯಾಗಿದ್ದವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್!

 

 

ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ದರ್ಶನ್ ರಘುನಾಥ್ ಮತ್ತು ವಾಣಿಶ್ರೀ ರಘುನಾಥ್ ದಂಪತಿಯ ಹೊಸಾ ಕನಸು ಯಶ ಕಾಣಲಿ ಅಂತ ಶುಭ ಹಾರೈಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ಯೂರ್ ಮಾಂಸಾಹಾರಿಯಾದ ತಮ್ಮನ್ನು ಶುದ್ಧ ಸಸ್ಯಾಹಾರ ತಯಾರಿಕಾ ಘಟಕದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರ ಬಗ್ಗೆ ತಮಾಶೆಯ ಶೈಲಿಯಲ್ಲಿಯೇ ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ದರ್ಶನ್ ಅವರೇ ಹೇಳಿಕೊಂಡಿರೋ ವಿಚಾರವನ್ನೇ ಹೇಳೋದಾದರೆ ಅವರು ಮಾಂಸಾಹಾರಪ್ರಿಯರು. ವರ್ಷದ ಹೆಚ್ಚಿನ ದಿನಗಳಲ್ಲಿ ಮಾಂಸಾಹಾರ ಸೇವಿಸೋ ಅವರು ಶಬರಿ ಮಲೆಗೆ ತೆರಳುವ ವ್ರತ ಹಿಡಿದ ಸಂದರ್ಭದಲ್ಲಿ ಮಾತ್ರ ಕಟ್ಟುನಿಟ್ಟಾದ ವ್ರತ ಪರಿಪಾಲಿಸುತ್ತಾರಂತೆ. ಆ ದಿನಗಳಲ್ಲಿ ಅವರದ್ದು ಶುದ್ಧವಾದ ಸಸ್ಯಾಹಾರ. ಇಂಥಾ ವ್ರತದ ಸಂದರ್ಭದಲ್ಲಿ ಓಗರದ ಪದಾರ್ಥಗಳು ತಮಗೆ ಅನುಕೂಲಕ್ಕೆ ಬರಬಹುದು ಅಂತ ದರ್ಶನ್ ಹೇಳಿಕೊಂಡಿದ್ದಾರೆ!

 

 

ಇದೇ ಸಂದರ್ಭದಲ್ಲಿ ದರ್ಶನ್ ಆಹಾರ ಪದಾರ್ಥಗಳನ್ನು ತಯಾರಿಸುವ ಘಟಕ ತೆರೆದಿರುವ ರಘುನಾಥ್ ಮತ್ತು ವಾಣಿಶ್ರೀ ರಘುನಾಥ್ ದಂಪತಿಗೆ ಯಶಸ್ಸು ಸಿಗಲಿ, ಅವರ ಓಗರ ಎಲ್ಲೆಡೆ ಪ್ರಸಿದ್ಧಿ ಪಡೆಯಲಿ ಎಂದೂ ಹಾರೈಸಿದ್ದಾರೆ.

ಓಗರದ ಆರಂಭದ ಸಮಾರಂಭಕ್ಕೆ ಕೇಂದ್ರ ಸಚಿವರಾದ ಅನಂತಕುಮಾರ್ ಮತ್ತು ಅವರ ಮಡದಿ ತೇಜಸ್ವಿನಿ ಅನಂತಕುಮಾರ್ ಕೂಡಾ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತಾಡಿದ ಅನಂತ ಕುಮಾರ್ ತಾವೂ ಕೂಡಾ ಅದಮ್ಯ ಚೇತನದ ಮೂಲಕ ಹಸಿದ ಹೊಟ್ಟೆಗಳನ್ನು ತಣಿಸೋ ಪ್ರಯತ್ನ ಮಾಡುತ್ತಿದ್ದೇವೆ. ಇದೀಗ ಹೊಸದಾಗಿ ಆರಂಭವಾಗಿರೋ ಓಗರದ ಅರ್ಥ ಏನೆಂಬ ಕುತೂಹಲವಿತ್ತು. ಕಡೆಗೆ ಓಗರದ ಅರ್ಥ ಅನ್ನ ಅಂತ ತಿಳಿಯಿತು. ಅನ್ನ ದೇವರ ಸಮಾನ. ಅದನ್ನು ಒಂದಗುಳೂ ಪೋಲು ಮಾಡದಂತೆ ಎಚ್ಚರ ವಹಿಸಬೇಕಿದೆ. ಇಂಥಾ ಆಹಾರವನ್ನು ಪ್ಲಾಸ್ಟಿಕ್ ಬಳಸದೇ ಪ್ಯಾಕಿಂಗ್ ಮಾಡೋ ಬಗೆಗೂ ಆವಿಷ್ಕಾರಗಳು ನಡೆಯಬೇಕಿದೆ. ಇಂಥಾ ಹೊಸತನದ ಆಹಾರ ತಯಾರಿಕಾ ಘಟಕ ತೆರೆದಿರುವ ರಘುನಾಥ್ ಅಂಥಾದ್ದೊಂದು ಕೆಲಸಕ್ಕೆ ಮನಸು ಮಾಡುವಂತಾಗಲಿ ಎಂದಿದ್ದಾರೆ.

 

 

ಈ ಕಾರ್ಯಕ್ರಮದಲ್ಲಿ ಮಂತ್ರಾಲಯ ರಾಘವೇಂದ್ರಸ್ವಾಮಿ ಮಠದ ಪೀಠಾಧೀಶರಾದ ಸುಬುಧೇಂದ್ರ ತೀರ್ಥ ಸ್ವಾಮೀಜಿ, ಆಧ್ಯಾತ್ಮಿಕ ಚಿಂತಕರಾದ ಭಾನುಪ್ರಕಾಶ್ ಶರ್ಮಾ, ಪಾವಗಡ ಪ್ರಕಾಶ್ ರಾವ್ ಮುಂತಾದವರು ಆಶೀರ್ವಚನ ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top