fbpx
ಬಿಗ್ ಬಾಸ್

ಬಿಗ್ ಬಾಸ್ ಗೆದ್ದ ಚಂದನ್ ಶೆಟ್ಟಿಗೆ ಭರ್ಜರಿ ಸ್ವಾಗತ ನೀಡಿದ ತವರೂರ ಅಭಿಮಾನಿಗಳು

ಬಿಗ್ ಬಾಸ್ ಗೆದ್ದ ಚಂದನ್ ಶೆಟ್ಟಿಗೆ ಭರ್ಜರಿ ಸ್ವಾಗತ ನೀಡಿದ ತವರೂರ ಅಭಿಮಾನಿಗಳು

 

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ‘ಬಿಗ್ ಬಾಸ್ ಕನ್ನಡ ಸೀಸನ್-5’ ಅಂತ್ಯಗೊಂಡಿದೆ. ಬಹುತೇಕ ವೀಕ್ಷಕರ ಬಯಕೆಯಂತೆ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಕಾಮನ್ ಮ್ಯಾನ್ ಕೋಟಾದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ದಿವಾಕರ್‌ ಬಿಗ್‌ಬಾಸ್‌ ಸೀಸನ್ 5ನ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದು ಸೂಪರ್ ಸ್ಟಾರ್ ಜಯರಾಮ್ ಕಾರ್ತಿಕ್ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

 

 

ಬಿಗ್ ಬಾಸ್ ವಿಜೇತರಾಗಿ ಮೊದಲ ಬಾರಿಗೆ ತಮ್ಮ ತವರೂರಾದ ಹಾಸನಕ್ಕೆ ಚಂದನ್ ಶೆಟ್ಟಿ ಭೇಟಿ ನೀಡಿದರು. ಬಿಗ್ ಬಾಸ್ ಗೆದ್ದ ಬಳಿಕ ಪ್ರಥಮವಾಗಿ ಬಾರಿಗೆ ತವರು ಜಿಲ್ಲೆಗೆ ಬಂದ ಚಂದನ್ ಗೆ ಅದ್ಧೂರಿ ಸ್ವಾಗತವನ್ನು ನೀಡಲಾಯಿತು.

 

 

 

ಅಪಾರ ಚಂದನ್ ಶೆಟ್ಟಿ ಅಭಿಮಾನಿಗಳು ಸೇರಿ ಭವ್ಯವಾದ ಸ್ವಾಗತ ಕೋರಿದರು. ಹಾಸನ ನಗರದ ಬಿಎಂ ರಸ್ತೆ, ಬಸ್ ಸ್ಟಾಂಡ್ ರಸ್ತೆ, ಎ.ವಿ.ಕೆ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಚಂದನ್ಮೆ ಶೆಟ್ಟಿ ಮೆರವಣಿಗೆ ನಡೆಸಿದರು. ಮೆರವಣಿಗೆ ಬಳಿಕ ಮಾತನಾಡಿದ ಚಂದನ್ ಬಿಗ್ ಬಾಸ್ ಗೆದ್ದ ಬಳಿಕ ಇದೇ ಪ್ರಥಮ ಬಾರಿಗೆ ಹಾಸನ ಜಿಲ್ಲೆಗೆ ಬಂದಿದ್ದು ನನಗೆ ಸಂತೋಷ ತಂದಿದೆ ಎಂದು ಹೇಳಿದರು.

 

 

 

ಚಂದನ್ ಶೆಟ್ಟಿ ಅವರು ಹಾಸನ ಜಿಲ್ಲೆ ಶಾಂತಿಗ್ರಾಮದವರು. ಅವರ ಅಪ್ಪ ಪರಮೇಶ್ ಮತ್ತು ತಾಯಿ ಪ್ರೇಮಾ. ಚಂದನ್ ಶೆಟ್ಟಿಗೆ ಒಬ್ಬ ತಮನಿದ್ದಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top