fbpx
ದೇವರು

ಮಂಗಳಮುಖಿಯರ ಈ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡು ಮಾರನೇ ದಿನಾ ಸತ್ತ ಗಂಡನನ್ನು ನೆನೆದು ಬಳೆಗಳನ್ನು ಹೊಡೆದುಕೊಂಡು ,ಎದೆ ಬಡಿದುಕೊಂಡು ರೋಧಿಸುವ ವಿಚಿತ್ರ ಪದ್ಧತಿ ಇದೆ

ಮಂಗಳಮುಖಿಯರ ಈ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡು ಮಾರನೇ ದಿನಾ ಸತ್ತ ಗಂಡನನ್ನು ನೆನೆದು ಬಳೆಗಳನ್ನು ಹೊಡೆದುಕೊಂಡು ,ಎದೆ ಬಡಿದುಕೊಂಡು ರೋಧಿಸುವ ವಿಚಿತ್ರ ಪದ್ಧತಿ ಇದೆ

 

ನಮ್ಮ ಸಮಾಜದಲ್ಲಿ ಮಂಗಳಮುಖಿಯರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ. ದಿನ ಅವಮಾನದಲ್ಲೇ ಜೀವನ ನಡೆಸುವ ಇವರಿಗೆ ಕೂವಗಂನಲ್ಲಿ ನಡೆಯುವ ಕೋತಂಡವರ್ ಆಲಯ ಉತ್ಸವದಲ್ಲಿ ತಮ್ಮ ನೋವುಗಳನ್ನು ಮರೆತು ತುಂಬಾ ಸಂತೋಷವಾಗಿ ಕಾಲ ಕಳೆಯುತ್ತಾರೆ .ಇವರುಗಳು ಈ ಉತ್ಸವಕ್ಕಾಗಿ ವರ್ಷವೆಲ್ಲ ಕಾಯುತ್ತ ಇರುತ್ತಾರೆ .

 

 

ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಒಂದು ಸಂತೋಷವಾದ ಕ್ಷಣ ,ಆದರೆ ಮಂಗಳಮುಖಿಯರಿಗೆ ಆ ಅದೃಷ್ಟ ಇಲ್ಲ .
ಅದರಿಂದ ಮಂಗಳಮುಖಿಯರ ಈ ಉತ್ಸವದಲ್ಲಿ ಮಧುಮಗಳಾಗುತ್ತಾರೆ,ಈ ಆಚರಣಿ ಮಂಗಳಮುಖಿಯರಿಗೆ ನೀಡಿರುವ ಬಹುಮಾನ , ಈ ದಿನಗಳು ಅವರುಗಳು ಪಡುವ ಸಂತೋಷ ಮಾತಿನಲ್ಲಿ ಹೇಳಲು ಆಗುವುದಿಲ್ಲ .

 

 

ತಮಿಳುನಾಡಿನ ವಿಲ್ಲುಪುರ ಜಿಲ್ಲೆಯ ಉಲಂದೂರು ಪೇಟೆ ತಾಲೂಕಿನ ಕೂವಗಂ ಗ್ರಾಮದ ಕೋತಂಡವರ್ ದೇವಾಲಯ ಇದೆ ,ಈ ದೇವರು ಮಂಗಳಮುಖಿಯರ ಆರಾಧ್ಯ ದೇವರು .
ಏಪ್ರಿಲ್ ಮತ್ತು ಮೇ ಚೈತ್ರಮಾಸದಲ್ಲಿ ಬರುವ ಈ ಉತ್ಸವ ನಡೆಯುತ್ತದೆ ,ಮಂಗಳಮುಖಿಯರ ಆ ದೇವರನ್ನು ಮದುವೆ ಮಾಡಿಕೊಳ್ಳುತ್ತಾರೆ ಹೀಗೆ ಅವರ ಮದುವೆ ಮಾಡಿಕೊಂಡರೆ ಕೋತಂಡವರ್ ದೇವರು ಸಾಯುತ್ತಾರೆ ಮರುದಿನ ಮಂಗಳಮುಖಿಯರು ಅಳುತ್ತಾ ಬಳೆಗಳನ್ನು ಹೊಡೆದುಕೊಂಡು ಹೊಳೆಯಲ್ಲಿ ಸ್ನಾನ ಮಾಡುತ್ತಾರೆ .

 

 

ಕೋತಂಡವರ್ ದೇವಾಲಯದಲ್ಲಿ 15 ದಿನಗಳ ಉತ್ಸವ ನಡೆಯುತ್ತದೆ ,ಕೋತಂಡವರ್ ದೇವರನ್ನು ಶ್ರೀಕೃಷ್ಣ ಎಂದು ತಿಳಿದು ಪೂಜಿಸುತ್ತಾರೆ , 15 ನೇ ದಿನ ಮಾಂಗಲ್ಯ ಕಟ್ಟಿಕೊಳ್ಳುತ್ತಾರೆ 16ನೇ ದಿನ ಮಾಂಗಲ್ಯ, ಬಳೆಗಳನ್ನೂ ತೆಗೆದು ರೋಧಿಸುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top