fbpx
ಸಿನಿಮಾ

ಸೀತಾ ರಾಮರ ಕಲ್ಯಾಣವನ್ನು ನೋಡಲು ಹೋದ ಕುಮಾರ ಸ್ವಾಮಿ !

ನಿಖಿಲ್ ಕುಮಾರಸ್ವಾಮಿಗೆ ಹೇಳಿ ಮಾಡಿಸಿದಂತಿರೋ ಚೆಂದದ ಚಿತ್ರ ಕಥೆಯೊಂದನ್ನು ಮಾಡಿಕೊಂಡಿರುವ ಹರ್ಷ ಈಗಾಗಲೇ ಪಕ್ಕಾ ಶೂಟಿಂಗ್ ಪ್ಲಾನಿಂಗ್ ಮಾಡಿಕೊಂಡಿದ್ದಾರೆ. ಏಳು ಕಡೆಗಳಲ್ಲಿ ವಿಶೇಷವಾದ ಸೆಟ್ ಹಾಕಲು ಈಗಾಗಲೇ ಸಂಪೂರ್ಣ ತಯಾರಿ ನಡೆದಿದೆ. ಇನ್ನುಳಿದಂತೆ ಹಾಸನ, ಮಂಡ್ಯ ಸಕಲೇಶಪುರ ಮುಂತಾದ ಸುಂದರ ತಾಣಗಳಲ್ಲಿ ಸೀತಾರಾಮ ಕಲ್ಯಾಣದ ಚಿತ್ರೀಕರಣ ನಡೆಯಲಿದೆ.

 

 

ಜಾಗ್ವಾರ್ ಚಿತ್ರವನ್ನು ಆಸುಪಾಸಿನ ಚಿತ್ರರಂಗಗಳವರೂ ಹುಬ್ಬೇರಿಸಿ ನೋಡುವಂತೆ ನಿರ್ಮಾಣ ಮಾಡಿದ್ದ ಕುಮಾರಸ್ವಾಮಿಯವರು ಈ ಚಿತ್ರದಲ್ಲಿಯೂ ಒಟ್ಟಾರೆ ಅದ್ದೂರಿ ತನಕ್ಕೆ ವಿಶೇಷ ಪ್ರಾಶಸ್ತ್ಯ ಕೊಡುತ್ತಿದ್ದಾರೆ. ಸುನೀಲ್ ಗೌಡ ಅವರ ನಿರ್ಮಾಣ ಮೇಲ್ವಿಚಾರಣೆ ಇರೋ ಸೀತಾರಾಮ ಕಲ್ಯಾಣ ರವಿ ಬಸ್ರೂರು ಅವರ ಸಂಗೀತದಿಂದ ಕಳೆಗಟ್ಟಲಿದೆ. ಇನ್ನುಳಿದಂತೆ ಸ್ವಾಮಿ ಛಾಯಾಗ್ರಹಣ, ರಾಮ್ ಲಕ್ಷಣ್ ಸಾಹಸ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ ಮತ್ತು ಮೋಹನ್ ಬಿ ಕೆರೆ ಕಲಾ ನಿರ್ದೇಶನದಲ್ಲಿ ಸೀತಾರಾಮ ಕಲ್ಯಾಣ ಮೂಡಿ ಬರಲಿದೆ.

 

ಎಲ್ಲ ಪಕ್ಷದ ನಾಯಕರು ತಮ್ಮ ಚುನಾವಣೆಯ ಬಿರುಸಿನ ಸಮಯದಲ್ಲಿ ಪ್ರಚಾರಕ್ಕೆಂದು ತೆರಳುವಾಗ ಕುಮಾರಸ್ವಾಮಿ ಅವರು ತಮ್ಮ ಮಗನ ಮುಂದಿನ ಚಿತ್ರವಾದ ಸೀತಾರಾಮ ಕಲ್ಯಾಣದ ಶೂಟಿಂಗ್ ಸೆಟ್ಗೆ ತೆರಳಿದ್ದಾರೆ

ಇದೇ ಸಮಯದಲ್ಲಿ ತಮ್ಮ ಮಗನಿಗಾಗಿ ವಿಶೇಷ ಕಾಳಜಿಯನ್ನು ವಹಿಸಿ ಕೆಲವು ಶೂಟಿಂಗ್ ದೃಶ್ಯಗಳನ್ನು ನೋಡಿ ಅಗತ್ಯವಾದ ಸಲಹೆಗಳನ್ನು ನೀಡಿ ,ಕೆಲವು ಮಾಹಿತಿಗಳನ್ನು ಕೇಳಿ ಪಡೆದುಕೊಂಡರು ಎನ್ನಲಾಗಿದೆ .

 

 

 

 

 

ಅಮ್ಮ ಇಷ್ಟೆಲ್ಲಾ ರಾಜಕೀಯ ಒತ್ತಡಗಳ ನಡುವೆಯೂ ಕುಮಾರಸ್ವಾಮಿಯವರ ಮಗನ ಮೇಲಿನ ಕಾಳಜಿ ಬಹಳ ವಿಶಿಷ್ಟವಾದದ್ದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top