fbpx
ದೇವರು

ಜನವರಿ 18ನೇ ತಾರೀಖಿನಿಂದ ಪ್ರಾರಂಭವಾಗಿ ಫೆಬ್ರವರಿ 15 ನೇ ತಾರೀಕಿನವರೆಗೆ ಇರುವ ಮಾಘ ಮಾಸದಲ್ಲಿ ಹೀಗೆ ಮಾಡಿದ್ರೆ , 100 ಅಶ್ವಮೇಧ ಯಾಗಗಳ ಪುಣ್ಯ ಫಲ ಸಿಗುತ್ತೆ .

ಜನವರಿ 18ನೇ ತಾರೀಖಿನಿಂದ ಪ್ರಾರಂಭವಾಗಿ ಫೆಬ್ರವರಿ 15 ನೇ ತಾರೀಕಿನವರೆಗೆ ಇರುವ ಮಾಘ ಮಾಸದಲ್ಲಿ ಹೀಗೆ ಮಾಡಿದ್ರೆ , 100 ಅಶ್ವಮೇಧ ಯಾಗಗಳ ಪುಣ್ಯ ಫಲ ಸಿಗುತ್ತೆ .

 

ಮಾಘ ಮಾಸದ ಮಹತ್ವ ಮತ್ತು ಮಾಘ ಮಾಸದಲ್ಲಿ ಹೀಗೆ ಮಾಡಿದರೆ, ನೂರು ಅಶ್ವಮೇಧ ಯಾಗಗಳ ಫಲ ದೊರೆಯುವುದು.

ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಹನ್ನೊಂದನೇ ಮಾಸ ಈ ಮಾಘ ಮಾಸ. ಈ ಮಾಸ ವಿಷ್ಣುವಿನ ಆರಾಧನೆಗೆ ತುಂಬಾ ಶ್ರೇಷ್ಠವಾದದ್ದು .ಈ ಮಾಘ ಮಾಸವು ಜನವರಿ 18 ನೇ ತಾರೀಖಿನಿಂದ ಪ್ರಾರಂಭವಾಗಿ ಫೆಬ್ರವರಿ ಹದಿನೈದನೇ ತಾರೀಕಿನವರೆಗೆ ಇರುವುದು.

 

 

ಈ ಮಾಘ ಮಾಸದಲ್ಲಿ ಭೀಷ್ಮರು ಪಾಂಡವರಿಗೆ ವಿಷ್ಣು ಸಹಸ್ರನಾಮವನ್ನು ಭೋದಿಸಿದರು ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ಮಾಘ ಮಾಸದಲ್ಲಿ ಪವಿತ್ರ ಮಾಘ ಸ್ನಾನ ಮಾಡಿದರೆ ನೂರು ಅಶ್ವಮೇಧ ಯಾಗಗಳನ್ನು ಮಾಡಿದಷ್ಟು ಪುಣ್ಯಕ್ಕೆ ಸಮಾನವಾಗಿರುತ್ತದೆ.

 

 

ಬ್ರಹ್ಮ ವೈವರ್ತ ಪುರಾಣದ ಪ್ರಕಾರ ಮಾಘ ಮಾಸದಲ್ಲಿ ಭಗವಾನ್ ವಿಷ್ಣುವು ಗಂಗಾ ನದಿಯಲ್ಲಿ ವಾಸಿಸುತ್ತಾರೆ, ಹಾಗಾಗಿ ಗಂಗೆಯ ನೀರು ಈ ಕಾಲದಲ್ಲಿ ಎಲ್ಲಾ ಕಾಯಿಲೆಗಳನ್ನು ಗುಣಪಡಿಸಬಲ್ಲದು ಎಂದು ನಂಬಲಾಗಿದೆ. ಆದ್ದರಿಂದ ಈ ಮಾಘ ಮಾಸದ ಸ್ನಾನ ತುಂಬಾ ಪುಣ್ಯಕರವಾದದ್ದು, ಈ ನಾಟಕದಲ್ಲಿ ವಿಷ್ಣುವನ್ನು ಶ್ರದ್ಧಾ, ಭಕ್ತಿಯಿಂದ ಆರಾಧಿಸಿದರೆ, ಮೋಕ್ಷ ದೊರೆತು ವೈಕುಂಠವನ್ನು ಸೇರಬಹುದು ಎಂದು ಹೇಳಲಾಗಿದೆ.

 

 

ಮಾಘ ಮಾಸದಲ್ಲಿ ಸೂರ್ಯನು ಮಕರ ರಾಶಿಯಲ್ಲಿ ಇರುವುದರಿಂದ ಪ್ರಾತಃ ಕಾಲದಲ್ಲಿ ಸ್ನಾನ ಮಾಡುವವರ, ಸಮಸ್ತ ಪಾಪಗಳು ನಾಶವಾಗಿ ಮೋಕ್ಷವನ್ನು ಪಡೆಯುತ್ತಾರೆ ಎಂಬ ನಂಬಿಕೆಯಿದೆ. ಸಾಮಾನ್ಯ ದಿನಗಳಲ್ಲಿ ನಾವು ಜಪ, ಧ್ಯಾನ, ಪೂಜೆಯಿಂದ ವಿಷ್ಣುವಿನ ಅನುಗ್ರಹವನ್ನು ಪಡೆಯುತ್ತೇವೆ. ಆದರೆ ಮಾಘ ಸ್ನಾನ ಮಾಡಿದರೆ ವಿಷ್ಣುವಿನ ಅನುಗ್ರಹ ಹೆಚ್ಚಾಗಿ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ಹೇಳುತ್ತಿವೆ.
ಮಾಘ ಪುರಾಣವನ್ನು ಕೇಳಿದವರಿಗೆ ಕಷ್ಟಗಳೆಲ್ಲ ದೂರವಾಗಿ, ಈ ವ್ರತದ ಫಲವು ಸಂಪೂರ್ಣವಾಗಿ ಲಭಿಸುತ್ತದೆ ಎಂದು ಶಾಸ್ತ್ರಗಳು ಹೇಳುತ್ತಿವೆ .ಅಷ್ಟೇ ಅಲ್ಲದೆ ಮಾಘ ಸ್ನಾನ ಮಾಡಿದರೆ ಆರೋಗ್ಯ, ಆಯಸ್ಸು ಹೆಚ್ಚಾಗಿ ವೃದ್ಧಿಸುತ್ತದೆ. ವಿಷ್ಣುವಿನ ಅನುಗ್ರಹ ದೊರೆತು ಸಂಪತ್ತು ಹೆಚ್ಚಾಗಿ ವೈಕುಂಠ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ಹೇಳುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top