fbpx
ತಿಂಡಿ ತೀರ್ಥ

ಮುದ್ದೆ ,ಚಪಾತಿ ಜೊತೆ ಬೆಸ್ಟ್ ಕಾಂಬಿನೇಶನ್ ರುಚಿರುಚಿಯಾದ ಖಾರ ಮಟನ್ ಚಾಪ್ಸ್ ಮಾಡೋದು ಹೀಗೆ

ಮುದ್ದೆ ,ಚಪಾತಿ ಜೊತೆ ಬೆಸ್ಟ್ ಕಾಂಬಿನೇಶನ್ ರುಚಿರುಚಿಯಾದ ಖಾರ ಮಟನ್ ಚಾಪ್ಸ್ ಮಾಡೋದು ಹೀಗೆ

 

ಮಟನ್ ಚಾಪ್ಸ್ :

ಬೇಕಾಗುವ ಸಾಮಗ್ರಿಗಳು :

ಅರ್ಧ ಕೆಜಿ ಮಟನ್
3 ಚಮಚ ತುರಿದುಕೊಂಡ ತೆಂಗಿನ ಕಾಯಿ
ಅರ್ಧ ಚಮಚ ಗಸಗಸೆ
1 /4 ಅರಿಶಿಣ

ಉಪ್ಪು ರುಚಿಗೆ

 

ಧನಿಯಾ ಪುಡಿ 1 1 /2 ಚಮಚ
ಬೆಳ್ಳುಳ್ಳಿ 1
ಚಿಕ್ಕದಾಗಿ ಕತ್ತರಿಸಿಕೊಂಡ ಈರುಳ್ಳಿ 1
ಕೊತ್ತಂಬರಿ ಸೊಪ್ಪು ಸ್ವಲ್ಪ
ಪುದಿನ ಸ್ವಲ್ಪ

 

 

ಶುಂಠಿ ಸ್ವಲ್ಪ
ಹಸಿ ಮೆಣಸಿನ ಕಾಯಿ 2
ಟೊಮೇಟೊ 1
ಚಕ್ಕೆ 1 ಇಂಚ್
ಲವಂಗ 3

ಎಣ್ಣೆ
ಹುರಿಗಡಲೆ ಅರ್ಧ ಚಮಚ

ಮಾಡುವ ವಿಧಾನ :

ಒಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಅದು ಸ್ವಲ್ಪ ಬಿಸಿಯಾದ ಮೇಲೆ ಅದಕ್ಕೆ ಕೊತ್ತಂಬರಿ ಸೊಪ್ಪು ,ಪುದಿನ ,ಚಕ್ಕೆ ,ಲವಂಗ ,ಶುಂಠಿ ಹಸಿಮೆಣಸಿನಕಾಯಿ ,ಬೆಳ್ಳುಳ್ಳಿ ,ಅರ್ಧ ಕತ್ತರಿಸಿಕೊಂಡ ಈರುಳ್ಳಿ ,ಗಸಗಸೆ ಮತ್ತು ಕತ್ತರಿಸಿಕೊಂಡ ಟೊಮೇಟೊ ಹಾಕಿ ಚೆನ್ನಾಗಿ ಬಾಡಿಸಿಕೊಂಡು ಪಕ್ಕದಲ್ಲಿ ಇಟ್ಟುಕೊಳ್ಳಬೇಕು ,ನಂತರ ಒಂದು ಪಾತ್ರೆಗೆ 2 ಚಮಚ ಎಣ್ಣೆ ಹಾಕಿ ಅದು ಬಿಸಿ ಆದಮೇಲೆ ಅದಕ್ಕೆ ಅರ್ಧ ಈರುಳ್ಳಿ ,ಮಟನ್ ತುಂಡು ,ಅರಿಶಿಣ ಮತ್ತು ರುಚಿಗೆ ಬೇಕಾದ ಉಪ್ಪನ್ನು ಹಾಕಿ ಸ್ವಲ್ಪ ಚೆನ್ನಾಗಿ ಬೇಯಿಸಿಕೊಳ್ಳಿ .

 

 

ಮಿಕ್ಸಿಗೆ ತುರಿದ ತೆಂಗಿನ ಕಾಯಿ ,ಧನಿಯಾ ಪುಡಿ ,ಹುರಿಗಡಲೆ ಮತ್ತು ಚೆನ್ನಾಗಿ ಬಾಡಿಸಿಕೊಂಡ ಮಸಾಲೆಯ ಮಿಶ್ರಣ ಮತ್ತು ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು .
ಅನಂತರ ಬೇಯಿಸಿಕೊಂಡ ಮಟನ್ ಗೆ ರುಬ್ಬಿಕೊಂಡ ಮಸಾಲೆಯ ಮಿಶ್ರಣವನ್ನು,ರುಚಿಗೆ ಬೇಕಾದ ಉಪ್ಪನ್ನು ಹಾಕಿ ಕಲಸಿಕೊಂಡು ಚೆನ್ನಾಗಿ ಕುದಿಸಬೇಕು ,ಚೆನ್ನಾಗಿ ಕುದಮೇಲೆ ಅದಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ .
ಇದನ್ನು ಮುದ್ದೆ ,ಚಪಾತಿಯ ಜೊತೆ ತಿನ್ನಲು ಚೆನ್ನಾಗಿರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top