fbpx
ಜಾಗೃತಿ

ಅನ್ ಲೈನ್ ವಂಚನೆಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ ಗಂಟೆಗೆ ರೂ.2 ಲಕ್ಷ ಕನ್ನ!

ಅನ್ ಲೈನ್ ವಂಚನೆಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ ಗಂಟೆಗೆ ರೂ.2 ಲಕ್ಷ ಕನ್ನ!

ಬೆಂಗಳೂರು ದೇಶ ದಿನಕಳೆದಂತೆ ಡಿಜಿಟಲ್ ಹಣಕಾಸಿನ ವಹಿವಾಟಿಗೆ ತೆರೆದುಕೊಳ್ಳುತ್ತಿದ್ದರೆ, ಮತ್ತೊಂದೆಡೆ ಸೈಬರ್ ಖದೀಮರು ಅಷ್ಟೇ ವೇಗದಲ್ಲಿ ಕೈಚಳಕ ತೋರಿ ಪ್ರತಿ ಗಂಟೆಗೆ ಸರಾಸರಿ 2 ಲಕ್ಷ ರೂ. ಲಪಟಾಯಿಸುತ್ತಿದ್ದು, ಒಟ್ಟಾರೆ ಪ್ರಕರಣಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

Image result for cyber crime

ವಂಚಕರು ಕ್ರೆಡಿಟ್/ಡೆಬಿಟ್ ಕಾರ್ಡ್ ಹಾಗೂ ಆನ್ ಲೈನ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲೇ ಇದೊಂದು ದೊಡ್ಡ ವಂಚನೆಯಾಗಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಕೇಂದ್ರ ಗೃಹ ಇಲಾಖೆಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖವಾಗಿದೆ.

Image result for cyber crime

ರಾಜ್ಯದಲ್ಲಿ 221 ಪ್ರಕರಣ

ಕ್ರೆಡಿಟ್/ಡೆಬಿಟ್, ಆನ್ ಲೈನ್ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ದಾಖಾಲಾಗಿರುವ ಪಟ್ಟಿಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. 221 ವಂಚನೆಯಾಗಿರುವ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ಸೈಬರ್ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿವೆ. 2015-16ರಲ್ಲಿ ರಾಜ್ಯದಲ್ಲಿ 91 ಪ್ರಕರಣಗಳು ದಾಖಾಲಾಗಿ 4.3 ಕೋಟಿ ವಂಚನೆಯಾಗಿತ್ತು. 2015-17ರಲ್ಲಿ ಪ್ರಕರಣಗಳಲ್ಲಿ 4.7 ಕೋಟಿ ರೂ. ವಂಚನೆಯಾಗಿತ್ತು.

Image result for cyber crime

ತಿಂಗಳಿಗೆ 250 ಕೇಸ್

2018ರ ಜನವರಿಯಲ್ಲಿ ಬೆಂಗಳೂರು ಸೈಬರರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 250 ಪ್ರಕರಣಗಳು ದಾಖಾಲಾಗಿವೆ. ಆನ್ ಲೈನ್ ಬ್ಯಾಂಕಿಂಗ್ ಅಧಿಕವಾದಂತೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಕಳ್ಳರು ಖಾತೆಗಳ ಹ್ಯಾಕ್ ಮಾಡುವುದು, ಫಿಷಿಂಗ್ ಹಾಗೂ ಸ್ಕಿಮಿಂಗ್ ನಿಂದ ಹಣ ಕದಿಯುತ್ತಿದ್ದಾರೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Image result for cyber crime

ಮುನ್ನೆಚ್ಚರಿಕೆಯ ಕ್ರಮಗಳು:

*ಅನಾಮಿಕ ಮೊಬೈಲ್ ಕರೆ, ಇ-ಮೇಲ್ ನಲ್ಲಿ ಬ್ಯಾಂಕಿಂಗ್ ವಿವರ ಹಂಚಿಕೊಳ್ಳಬೇಡಿ.

*ಇ-ಮೇಲ್ ನಲ್ಲಿ ಬ್ಯಾಂಕಿಂಗ್ ಖಾತೆ, ಮೊಬೈಲ್ ನಂಬರ್, ಪಾಸ್ ವರ್ಡ್ ರವಾನಿಸಬೇಡಿ.

*ಕಾಲಕಾಲಕ್ಕೆ ಬ್ಯಾಂಕ್ ಖಾತೆಯ ವ್ಯವಹಾರದ ವಿವರ ಪಡೆಯಿರಿ.

*ನೆಟ್ ಬ್ಯಾಂಕಿಂಗ್ ಸೈಬರ್ ಕೆಫೆ, ಅಪರಿಚಿತರ ಕಂಪ್ಯೂಟರ್ ಬಳಕೆ ಒಳ್ಳೆಯದಲ್ಲ.

*ಕನಿಷ್ಠ 3 ತೊಂಗಳಿಗೊಮ್ಮೆ ಪಾಸ್ ವರ್ಡ್ ಬದಲಾಯಿಸಿ.

*ಬ್ಯಾಂಕ್ ವ್ಯವಹಾರ ಮೊಬೈಲ್ ಗೆ ಎಸ್ ಎಂ ಎಸ್ ಬರುವಂತೆ ಮಾಡಿಕೊಳ್ಳಿ.

*ಗಮನಕ್ಕೆ ಬಾರದೆ ಖಾತೆಯಿಂದ ಹಣ ಡ್ರಾ ಆದರೆ ತಕ್ಷಣ ಖಾತೆಗೆ ಬ್ಯಾಕ್ ಮಾಡಿಸಿ.

ಹೆಲ್ಪ್ ಲೈನ್ ಗೆ ಕರೆ ಮಾಡಿ

ಸೈಬರ್ ವಂಚನೆ ಪ್ರಕರಣಗಳಲ್ಲಿ ಬ್ಯಾಂಕ್’ನ ತಪ್ಪಿನಿಂದ ನಡೆದರೆ ಗ್ರಾಹಕರಿಗೆ ವಾಪಸ್ ಹಣ ಬರುತ್ತದೆ. ಬ್ಯಾಂಕುಗಳು ಆನ್ ಲೈನ್, ಮೊಬೈಲ್ ಬ್ಯಾಂಕಿಂಗ್ ತಂತ್ರಜ್ಞಾನ ಸರಿಯಾಗಿ ನಿರ್ವಹಣೆ ಇಲ್ಲದಿದ್ದಾಗ ಮಾತ್ರ ಗ್ರಾಹಕರಿಗೆ ಪರಿಹಾರ ಸಿಗಲಿದೆ. ಒಂದು ವೇಳೆ ಗ್ರಾಹಕರೇ ಓಟಿಪಿ ನಂಬರ್ ಅಥವಾ ಬ್ಯಾಂಕ್ ಖಾತೆ ವಿವರವನ್ನು ಸೈಬರ್ ಕಳ್ಳರಿಗೆ ಕೊಟ್ಟಿದ್ದರೆ ಪರಿಹಾರ ಕೊಡಲ್ಲ ಎಂದು ಇತ್ತೀಚೆಗೆ ಗ್ರಾಹಕರ ನ್ಯಾಯಾಲಯ ಉಲ್ಲೇಖಿಸಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top