fbpx
ಸಿನಿಮಾ

ರಮ್ಯ ‘ಪಲ್ಲಂಗ’ ಪುರಾಣ ವಿವಾದಾತ್ಮಕ ಹೇಳಿಕೆ ನೀಡಿದ ಜಗ್ಗೇಶ್ ವಿರುದ್ಧ ಸೆಟೆದು ನಿಂತ ‘ರಮ್ಯ ಫ್ಯಾನ್ಸ್ ‘

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಪ್ರಧಾನಿ ಮಾತನಾಡಿದ ಬಳಿಕ ಟ್ವಿಟ್ಟರ್ ವಾರ್ ಶುರುವಾಗಿದೆ.

 

 

ನಮ್ಮ TOP ಆದ್ಯತೆ ಟೊಮ್ಯಾಟೋ, ಆನಿಯನ್, ಪೊಟ್ಯಾಟೋ ಎಂದಿದ್ದ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ‘ನೀವು ನಶೆಯಲ್ಲಿದ್ದರೆ ಹೀಗೆಯೇ ಆಗೋದು’ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಟೀಕಿಸಿ ಟ್ವಿಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕ ಜಗ್ಗೇಶ್ ರಮ್ಯಾಗೆ ಟ್ವಿಟ್ಟರ್ ನಲ್ಲಿ ಟಾಂಗ ನೀಡಿದ್ದಾರೆ.

 

 

ರಮ್ಯಾಗೆ ಟ್ವೀಟ್ ಮಾಡಿ ಟಾಂಗ ನೀಡಿದ ಜಗ್ಗೇಶ್ ಹೀಗೆ ಬರೆದಿದ್ದರೆ
“ಸ್ಟಾರ್ ಹೋಟಲಲ್ಲಿ ಕೂತು ಅಪ್ಪನ ದುಡ್ಡಲ್ಲಿ ಪಾರ್ಟಿಕೊಟ್ಟು ಪಾರ್ಟು ಗಿಟ್ಟಿಸಿ!
ಪ್ರತಿಚಿತ್ರದ ಕ್ಯಾಚ್ಗೆ ಅದೆಸ್ಟಾರ್ ಹೋಟಲ್ ಪಾರ್ಟಿ!
ದೊಡ್ಡವರ ನೆರಳಲ್ಲಿ ರಾಜಕೀಯ ಕ್ಯಾಚ್!
ಆಮೇಲೆ ಮೆಟ್ಲೇರಕ್ಕೆ ಹೆಡ್ಡಾಫೀಸ್ ಕ್ಯಾಚ್ ಹಾಕ್ದೋರ್ಗೆ ಮೋದಿ ಆದರೇನು ಗಾಂದಿಆದರೇನು ಯಾರಿಗೆ ಬೇಕಾದರು ಹಂಗಿಸುತ್ತಾರೆ!
ಕಾರಣ ಶ್ರಮವಿಲ್ಲದೆ ಪಲ್ಲಂಗ ಎರ್ದೋರಲ್ಲವೆ!”

 

 

ಇನ್ನೊಂದು ಟ್ವೀಟ್ ನಲ್ಲಿ ಕೂಡ ರಮ್ಯಾಗೆ ಟಾಂಗ ಕೊಟ್ಟು ಹೀಗೆ ಬರೆದಿದ್ದಾರೆ.
“ದೊಡ್ಡವರ ಬಗ್ಗೆ ಮಾತಾಡ ಬೇಕಾದರೆ
ಮಾತಾಡುವ ಮಂದಿಗೆ ವಯಸ್ಸು ಅನುಭವ ಸಾಧನೆ ಮಾಡಿ ಪಕ್ವವಾದಾಗ ಅಪಭ್ರಂಷ ಇಲ್ಲದೆ ಚರ್ಚೆ ಮಾಡಿದರೆ ಅದನ್ನ ತರ್ಕ ಎಂದು ಒಪ್ಪಿ ವಿಮರ್ಷೆಮಾಡಿ ನಿರ್ಣಯಸುತ್ತಾರೆ ಜನ..
ವಿಶ್ವದ ಬಲಿಷ್ಟರಾಷ್ಠ್ರದ ನಾಯಕರೆ #modi ರವರ ಒಪ್ಪಿಮೆಚ್ಚಿದ್ದಾರೆ..
ಈಕೆ ಯಾರು?ಸಾಧನೆ ಏನು?ನೆಟ್ಟಗೆ ಕನ್ನಡ ಮಾತಾಡಲು ಬರದ ಕಾಡುಪಾಪದಂತೆ ಈಕೆ!”

 

ಜಗೇಶ್ ‘ಪಲ್ಲಂಗ’ ಎನ್ನುವ ಪದ ಬಳಕೆ ಮಾಡಿದ್ದೆ ಮಾಡಿದ್ದು ಜಗ್ಗೇಶ್ ರವರಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹಿಗ್ಗಾ ಮುಗ್ಗಾ ಟ್ರೊಲ್ ಮಾಡ್ತಿದ್ದಾರೆ .

 

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top