fbpx
ಮನೋರಂಜನೆ

ಪಬ್ಲಿಕ್ ಟಿವಿ ರಂಗಣ್ಣನಿಗೆ ಹಿಗ್ಗಾ ಮುಗ್ಗ ಜಾಡಿಸಿದ ರವಿ ಬೆಳೆಗೆರೆ.

ಪಬ್ಲಿಕ್ ಟಿವಿ ರಂಗಣ್ಣನಿಗೆ ಹಿಗ್ಗಾ ಮುಗ್ಗ ಜಾಡಿಸಿದ ರವಿ ಬೆಳೆಗೆರೆ.

 

 

ಸದಾ ವಿವಿಧ ವಿಚಾರಗಳಿಗೆ ಸುದ್ದಿಯಾಗುವ ಹಾಯ್ ಬೆಂಗಳೂರು ಪ್ರತ್ರಿಕೆಯ ಸಂಪಾದಕ ರವಿ ಬೆಳಗೆರೆ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ತಮ್ಮ ತೀಕ್ಷ್ಣವಾದ ಬರಹಗಳಿಂದಲೇ ರಾಜಕೀಯ ವ್ಯಕ್ತಿಗಳು, ಸಿನಿಮಾ ನಟರು ಸೇರಿದಂತೆ ಅನೇಕಾನೇಕ ಗಣ್ಯ ವ್ಯಕ್ತಿಗಳನ್ನು ತರಾಟೆಗೆ ತೆಗೆದುಕೊಳ್ಳುವ ರವಿಬೆಳಗೆರೆಯ ಕೆಟ್ಟ ಕಣ್ಣು ಈಗ ಪಬ್ಲಿಕ್ ಟಿವಿ ಸಂಪಾದಕ ಹೆಚ್. ಆರ್ ರಂಗನಾಥ್ ಅವರ ಮೇಲೆ ಬಿದ್ದಿದೆ. ಹೌದು ತಮ್ಮ ವಯಕ್ತಿಕ ವಿಚಾರವಾಗಿ ರವಿ ಬೆಳಗೆರೆಯವರು ರಂಗಣ್ಣ ಮೇಲೆ ರವಿಬೆಳಗೆರೆ ಮಾತಿನ ಗದಾಪ್ರಹಾರವನ್ನೇ ಮಾಡಿದ್ದಾರೆ.

 

 

ಕಲ್ಲೆಡ ವರ್ಷ ಸಹದ್ಯೋಗಿ ಸುನಿಲ್ ಹೆಗ್ಗನಹಳ್ಳಿ ಕೊಲೆಗೆ ಸುಪಾರಿ ನೀಡಿದ ಆರೋಪದಲ್ಲಿ ರವಿ ಬೆಳಗೆರೆಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಿಚಾರಣೆಗೆ ಒಳಪಡಿಸಿದ್ದರು. ಸುಮಾರು ಮೂರ್ನಾಲ್ಕು ದಿನಗಳ ಕಾಲ ರವಿಬೆಳೆಗರೆ ಜೈಲಿನಲ್ಲೇ ಇರಬೇಕಾಗಿತ್ತು. ಈ ವೇಳೆ ಪಬ್ಲಿಕ್ ಟಿವಿ ಸೇರಿದಂತೆ ಕನ್ನಡದ ಎಲ್ಲಾ ಸುದ್ದಿ ವಾಹಿನಿಗಳು ರವಿಬೆಳಗೆರೆ ಬಂಧನದ ವಿಷಯವನ್ನು ತಮ್ಮ ಮೂಗಿನ ನೇರಕ್ಕೆ ಹೇಗೆ ಬೇಕೋ ಹಾಗೆ ಪ್ರಸಾರ ಮಾಡಿ ಬಿಟ್ಟಿದ್ದವು.

 

 

 

ನಂತರ ಜಾಮೀನು ಪಡೆದು ನ್ಯಾಯಾಂಗ ಬಂಧನದಿಂದ ಹೊರಗಡೆ ಬಂದ ರವಿ ಬೆಳೆಗರೆ ತಾವು ಬಂಧನದಲ್ಲಿದ್ದಾಗ ತಮ್ಮ ಮೇಲೆ ಕನ್ನಡ ನ್ಯೂಸ್ ಚಾನೆಲ್ ಗಳು ಮಾಡಿರುವ ನ್ಯೂಸ್ ಗಳನ್ನೂ ನೋಡಿ ಗರಂ ಆಗಿಬಿಟ್ಟಿದ್ದರು. ತಮ್ಮ ಬಗ್ಗೆ ಇಲ್ಲ ಸಲ್ಲದ ಸುದ್ದಿಗಳನ್ನು ಬೇಕಾಬಿಟ್ಟಿಯಾಗಿ ಬಿತ್ತರಿಸಿದ್ದ ಒಂದೊಂದೇ ನ್ಯೂಸ್ ಚಾಲ್ ಗಳಿಗೆ ಟಾಂಗ್ ಕೊಡುತ್ತಿರುವ ರವಿ ಬೆಳಗೆರೆ. ಈಗ ರೀತಿ ಪಬ್ಲಿಕ್ ಟಿವಿ ಮತ್ತು ಅದರ ಮಾಲೀಕ ರಂಗನಾಥ್ ಅವರಿಗೂ ಮಂಗಳಾರತಿ ಮಾಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಈ ಬಗ್ಗೆ ಒಂದು ವಿಡಿಯೋ ಅಪ್ಲೋಡ್ ಮಾಡಿರುವ ರವಿಬೆಳಗೆರೆ ಪಬ್ಲಿಕ್ ಟಿವಿ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಪಬ್ಲಿಕ್ ಟಿವಿ ರಂಗಣ್ಣನಿಗೆ ಮಂಗಳಾರತಿ ಮಾಡಿರುವ ವಿಡಿಯೋವನ್ನು ಇಲ್ಲಿ ನೋಡಿ.👇👇👇👇

 

 

” ಪೊಲೀಸರು ನನ್ನನ್ನು ನ್ಯಾಯಾಂಗ ಬಂಧನದಲ್ಲಿ ಇಟ್ಟಿದ್ದಾಗ ನಾನು ಕೆಲವು ದಿನ ಜೈಲಿನಲ್ಲಿ ಇದ್ದೆ, ಹಾಗಂದ ಮಾತ್ರಕ್ಕೆ ನನಗೆ ಖೈದಿ ನಂಬರ್ ಇರುವ ಬಟ್ಟೆ ಕೊಡ್ತಾರೆ ಅಂತ ಅಲ್ಲ. ಯಾರಿಗೆ ಆಗಲಿ ಆರೋಪ ಸಾಭೀತಾಗಿ ಶಿಕ್ಷೆ ಪ್ರಕಟವಾಗುವವರೆಗೂ ವಿಚಾರಣಾಧೀನ ಆರೋಪಿಗಳಿಗೆ ಖೈದಿ ನಂಬರ್ ನೀಡೋದಿಲ್ಲ, ಒಬ್ಬ ಕ್ರೈಮ್ ರಿಪೋರ್ಟರ್ ಆಗಿ ಈ ವಿಷಯ ರಂಗಣ್ಣನಿಗೂ ಗೊತ್ತು, ಹಾಗಿದ್ದರೂ ಆತನ ದುರಾಸೆಯಿಂದ ನನಗೆ ಯಾವುದೊ ಒಂದು ಬಾಯಿಗೆ ಖೈದಿ ನಂಬರ್ ಕೊಟ್ಟು ತನ್ನ ಚಾನೆಲ್ ನಲ್ಲಿ ಪ್ರಸಾರ ಮಾಡಿದ್ದಾನೆ. ಇಂತಹ ಮೂರ್ಖ, ನಾನು ಇದನ್ನು ನಿಮ್ಮಿಂದ ನಿರೀಕ್ಷಿಸಿರಿಲ್ಲ”

“ನಾನು ಕಣ್ಣೀರು ಹಾಕುತ್ತಾ ಜೈಲಿನ ಒಳಕ್ಕೆ ಹೋದನಂತೆ. ಅಲ್ಲಿ ನನಗೆ ಖೈದಿ ಡ್ರೆಸ್ ಕೊಟ್ರಂತೆ ಎಂತಾ ಸುಳ್ಳು.. ಮೂರ್ಖತನಕ್ಕೆ ಒಂದು ಕ್ಷಮೆ ಇರುತ್ತೆ, ದುಷ್ಟತನಕ್ಕೆ ಶಿಕ್ಷೆಯಿರುತ್ತೆ ಆದ್ರೆ ಮೋಸಮಾಡೋದು ಒಳ್ಳೇದಲ್ಲ, ರಂಗಣ್ಣ ಇದನ್ನ ತಿಳ್ಕೊಬೇಕು, ಪದೇ ಪದೇ ಪ್ರತಿದಿನ ಸುಳ್ಳನ್ನೇ ಹೇಳ್ತ ಇದ್ರೆ ಜನ ಏನು ಕಿವಿಮೇಲೆ ಹೂ ಇಟ್ಕೊಂಡಿರ್ತಾರ? ಸ್ಟುಪಿಡ್ ಫೆಲೋ” ಎಂದು ರಂಗನಾಥ್ ಅವರಿಗೆ ನೇರವಾಗಿಯೇ ಮೂರ್ಖ ಎಂದಿದ್ದಾರೆ ರವಿಬೆಳಗೆರೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top