fbpx
ಹೆಚ್ಚಿನ

ಪುರಾಣ ಶಾಸ್ತ್ರಗಳ ಪ್ರಕಾರ ಹಾವನ್ನು ಕಂಡರೆ ಸರ್ಪಗಳ ಶಕುನ ಫಲ ಏನೆನ್ನುತ್ತದೆ ಇದರ ಬಗ್ಗೆ ನಿಮಗೆಷ್ಟು ಗೊತ್ತು ?

ಪುರಾಣ ಶಾಸ್ತ್ರಗಳ ಪ್ರಕಾರ ಹಾವನ್ನು ಕಂಡರೆ ಸರ್ಪಗಳ ಶಕುನ ಫಲ ಏನೆನ್ನುತ್ತದೆ ಇದರ ಬಗ್ಗೆ ನಿಮಗೆಷ್ಟು ಗೊತ್ತು ?

 

ಸರ್ಪಗಳ ಶಕುನ ಫಲದ ಬಗ್ಗೆ ನಿಮಗೆಷ್ಟು ಗೊತ್ತು ?

ಪ್ರಯಾಣದಲ್ಲಿ ನಮಗೆ ಹಾವುಗಳು ಅಡ್ದ ಬಂದರೆ ನಮ್ಮ ಜೀವನದಲ್ಲಿ ನಾವು ಯಾವ ರೀತಿಯ ತೊಂದರೆಗಳನ್ನು ನಾವು ಅನುಭವಿಸಬೇಕಾಗುತ್ತದೆ. ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ……
ನಮ್ಮ ಸನಾತನ ಧರ್ಮದಲ್ಲಿ ಪ್ರಾಣಿಗಳಿಗೆ ಅವುಗಳದ್ದೇ ಆದಂತಹ ಒಂದು ವಿಶೇಷವಾಗಿರುವ ಸ್ಥಾನವನ್ನು ,ಫಲವನ್ನು ಒಂದು ವಿಶೇಷವಾದ ಸೂಚನೆಗಳನ್ನು ಮತ್ತು ಮಹತ್ವಗಳನ್ನು ನಮ್ಮ ಪೂರ್ವಜರು ಹೇಳಿದ್ದಾರೆ. ಅದರಲ್ಲಿ ನಾವು ಕೆಲವು ಪ್ರಾಣಿಗಳನ್ನು ಕಂಡರೆ ಶಕುನಗಳ ರೀತಿಯಲ್ಲಿ ಅವುಗಳನ್ನು ಪೂಜ್ಯ ಭಾವದಿಂದ ಪೂಜೆ ಮಾಡುವಂತಹ ಪ್ರಾಣಿ ಎಂದರೆ ಅದು ಸರ್ಪ. ಈ ಸರ್ಪವು ಶಿವನ ಕಂಠಾಭರಣ ವಾಗಿದ್ದು,ಭಗವಂತಾನಾದ ವಿಷ್ಣುವಿನ ಮಲಗುವ ಹಾಸಿಗೆಯಾಗಿದ್ದು, ಗಣಪತಿಯ ಹೊಟ್ಟೆಯ ಪಟ್ಟಿಯಾಗಿ , ವಿಶ್ವಕರ್ಮನಿಗೆ ಯಜ್ಞೋಪವೀತವಾಗಿ, ಅದೇ ರೀತಿಯಾಗಿ ಹಲವಾರು ದೇವತೆಗಳ ಕೈಗಳಲ್ಲಿ ಆಯುಧವಾಗಿ ಇರುವಂತಹ ನಾಗದೇವತೆ ಸರ್ಪ , ಎನ್ನುವ ಸರ್ಪಕ್ಕೆ ಅದರದ್ದೇ ಆದ ಕೆಲವು ವಿಶೇಷವಾಗಿರುವ0ತಹ ಸೂಚನೆಗಳನ್ನು ಶಕುನಗಳನ್ನು ಅವು ನಮಗೆ ನೀಡುತ್ತವೆ ಎಂದು ನಂಬಿದ್ದಾರೆ. ಅದಕ್ಕೆ ಸಂಬಂಧಪಟ್ಟಂತಹ ಸಂಪೂರ್ಣ ಸರ್ಪದ ಮತ್ತು ಸರ್ಪಗಳು ಸೂಚಿಸುವಂತಹ ಶಕುನಗಳನ್ನು ಇಂದು ನಾವೆಲ್ಲರೂ ತಿಳಿಯೋಣ…………….

 

 

ನಾವು ಪ್ರಯಾಣ ಮಾಡುವಾಗ ಸರ್ಪವು ದಾರಿಗೆ ಅಡ್ಡ ಬಂದರೆ , ಒಳ್ಳೆಯದಲ್ಲ ಹಾಗೆ ಅಡ್ಡಗಟ್ಟಿದಲ್ಲಿ ಆ ಪ್ರಯಾಣವನ್ನು ಅಲ್ಲಿಗೆ ಅರ್ಧಕ್ಕೆ ನಿಲ್ಲಿಸಬೇಕೆಂದು ಒಂದು ವೇಳೆ ನಾವು ಪ್ರಯಾಣವನ್ನು ನಿಲ್ಲಿಸಲಿದ್ದರೆ, ಕಷ್ಟಗಳು ತಪ್ಪಿದ್ದಲ್ಲ, ತಪ್ಪಲಾರದು ಎಂದು ಶಾಸ್ತ್ರವು ಹೇಳುತ್ತದೆ.

ಅದೇ ರೀತಿಯಾಗಿ ಎರಡು ಹಾವುಗಳು ಜಗಳ ಮಾಡುತ್ತಾ ಇರುವುದನ್ನು ನಾವು ನೋಡಿದರೆ ಆದು ನಮ್ಮ ಆಪ್ತರಲ್ಲಿ ವಿರೋಧ, ವೈಮನಸ್ಯ ಮತ್ತು ಜಗಳ ಉಂಟಾಗುತ್ತದೆ.
ಎರಡು ಹಾವುಗಳು ಕೂಡಿ ಒಂದು ಪಕ್ಕಕ್ಕೆ ಓಡಿ ಹೋಗುತ್ತಿದ್ದರೆ ಅದನ್ನು ನಾವು ನೋಡಿದರೆ ಆದು ನಮಗೆ ಬಡತನವನ್ನು ತಂದೊಡ್ಡುತ್ತದೆ.

 

 

ಹೆಣ್ಣು ಮತ್ತು ಗಂಡು ಹಾವುಗಳು ಸೇರುತ್ತಿರುವುದನ್ನು ಕಂಡರೆ, ಸೌಖ್ಯ ಉಂಟಾಗುತ್ತದೆ, ಮತ್ತು ಸುಖ ಉಂಟಾಗುತ್ತದೆ. ಒಂದು ಹಾವು ಮತ್ತೊಂದು ಹಾವನ್ನು ನುಂಗುತ್ತಿರುವುದನ್ನು ಕಂಡರೆ ತೊಂದರೆಗಳು ಬರುತ್ತವೆ ಎಂದು ತಿಳಿಯಬೇಕು.
ಹಸಿರಾದ ಗಿಡ ಮರವನ್ನು ಹಾವು ಹತ್ತುತ್ತಿರುವುದನ್ನು ಕಂಡರೆ ಅತ್ಯಂತ ಶುಭ ಸೂಚಕ ಎಂದು ಅದು ಶುಭಫಲವನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ .
ಮರದಿಂದ ಹಾವು ಇಳಿಯುತ್ತಿರುವುದನ್ನು ನೋಡಿದರೆ ಸರ್ಕಾರದಿಂದ ತೊಂದರೆಗಳು ಉಂಟಾಗುತ್ತವೆ, ಅದೇ ರೀತಿಯಾಗಿ ನಮ್ಮಿಂದ ಬೇರೆಯವರಿಗೆ ಒಳ್ಳೆಯದಾಗುತ್ತದೆ , ಅವರಿಂದ ನಮಗೆ ಕೆಡುಕು ಉಂಟಾಗುತ್ತದೆ ಎಂದು ತಿಳಿಯಬೇಕು.

ಹಾವು ತನ್ನ ಹುತ್ತದೊಳಗೆ ಹೋಗುತ್ತಿರುವುದನ್ನು ನೋಡಿದರೆ ವಿಶೇಷವಾದ ಧನಲಾಭವಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.

 

 

ಬಹುಕಾಲದಿಂದ ತಮ್ಮ ಮನೆಯಲ್ಲಿ ವಾಸವಾಗಿದ್ದ ಹಾವು ಬೇರೊಂದು ಸ್ಥಳಕ್ಕೆ ಹೊರಟು ಹೋದರೆ, ಅಂದರೆ ಕೆಲವು ಮನೆಗಳಲ್ಲಿ ಹಾವುಗಳನ್ನು ಸಾಕುವ ಪದ್ಧತಿ ಇರುತ್ತದೆ. ಅಂತಹ ಮನೆಯಿಂದ ಹಾವು ಮನೆಯಿಂದ ಹೊರಗೆ ಹೋದರೆ ದ್ರವ್ಯ ಹಾನಿಯಾಗುತ್ತದೆ. ಹಾವು ಯಾರ ಮನೆಗೆ ಹೋಗುತ್ತದೋ ಅವರಿಗೆ ವಿಶೇಷವಾದ ಧನಲಾಭವಾಗುತ್ತದೆ ಎಂದು ಕೂಡ ಶಾಸ್ತ್ರ ಹೇಳುತ್ತದೆ.

ಪ್ರಯಾಣ ಕಾಲದಲ್ಲಿ ವರಳಾಡುತ್ತಿರುವ ಹಾವನ್ನು ನೋಡಿದರೆ ಕಾರ್ಯಸಿದ್ಧಿಯಾಗುತ್ತದೆ. ತಲೆಯೆತ್ತಿ , ಎಡೆ ಎತ್ತಿ ಆಡಿಸತೊಡಗಿದರೆ ವಿಶೇಷವಾದ ಸಂಪತ್ತು ಪ್ರಾಪ್ತಿಯಾಗುತ್ತದೆ. ಅಂದರೆ ಕೆಲವರನ್ನು ನೋಡಿದರೆ ಹಾವು ಎಡೆ ಎತ್ತಿ ಆಡುವುದನ್ನು ಕಾಣಬಹುದು, ಆ ರೀತಿ ಇದ್ದರೆ ಅವರಿಗೆ ವಿಶೇಷವಾದ ರಾಜಯೋಗವು ಪ್ರಾಪ್ತಿಯಾಗುವುದು ಎಂದು ಶಾಸ್ತ್ರ ಹೇಳುತ್ತದೆ.

 

 

 

ನಾವು ನೋಡುತ್ತಿದ್ದಂತೆಯೇ ಹಾವು ಹುತ್ತದ ಒಳಗೆ ಹೊರಟು ಹೋದರೆ, ಅಥವಾ ಉತ್ತವನ್ನು ಹತ್ತಿದರೆ ಬಡವರಿಗೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಮತ್ತು ಐಶ್ವರ್ಯ ಇರುವಂತಹ ಶ್ರೀಮಂತ ವ್ಯಕ್ತಿಗಳಿಗೆ ದರಿದ್ರ ಪ್ರಾಪ್ತಿಯಾಗುವುದು ಎಂದು ಶಾಸ್ತ್ರ ಹೇಳುತ್ತದೆ.

ಅದೇ ರೀತಿ ಊರಿನ ಬಾಗಿಲಲ್ಲಿ ಹಾವು ಹೊರಗೆ ಹೋಗುತ್ತಿದ್ದರೆ ಆ ಊರಿಗೆ ಕೂಡ ತೊಂದರೆ, ತೊಂದರೆ ಉಂಟಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಊರಿಗೆ ಮತ್ತು ಊರಿನ ಒಳಗೆ ಹಾವು ಬರುತ್ತಿರುವುದನ್ನು ನೋಡಿದರೆ ವಿಶೇಷವಾಗಿ ಊರಿಗೆ ಅಭಿವೃದ್ಧಿಯಾಗುತ್ತದೆ ಒಳ್ಳೆಯ ಉತ್ತಮ ಫಲಗಳು ಲಭಿಸುತ್ತವೆ .

ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಅಥವಾ ಉಳುಮೆ ಮಾಡುತ್ತಿರುವಾಗ ರೈತರಿಗೆ ವಿಶೇಷವಾಗಿ ಹಾವು ಎಡೆ ಎತ್ತಿ ತೋಟದಲ್ಲಿ ಆಡುತ್ತಿದ್ದರೆ, ಆ ಸಮಯದಲ್ಲಿ ಬೆಳೆಯುವಂತಹ ಬೆಳೆಯಿಂದ ವಿಶೇಷವಾದಂತಹ ಅಧಿಕ ಧನಲಾಭ ಪ್ರಾಪ್ತಿಯಾಗುವುದು ಎಂದು ಶಾಸ್ತ್ರ ಹೇಳುತ್ತದೆ.

 

ಹಾಗೂ ಹೊಲದಿಂದ ಅಥವಾ ತೋಟದಿಂದ ಆಗಲಿ ರೈತರು ಹೋದಾಗ ಅಲ್ಲಿಂದ ಓಡಿ ಹೋಗುತ್ತಿದ್ದರೆ, ಅವರು ಅಲ್ಲಿ ಬೆಳೆಯುತ್ತಿರುವಂತಹ ಬೆಳೆಯಿಂದ ನಷ್ಟ ಉಂಟಾಗುತ್ತದೆ ಮತ್ತೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಬೆಳೆ ಸರಿಯಾಗಿ ಆಗುವುದಿಲ್ಲ ಎಂದು ಶಾಸ್ತ್ರ ಹೇಳುತ್ತದೆ .

ನಾವು ಯಾವುದಾದರೂ ಗ್ರಾಮವನ್ನು ಪ್ರವೇಶ ಮಾಡುತ್ತಿರುವಾಗ ಅಥವಾ ಕೆಲಸದ ನಿಮಿತ್ತ ನಾವು ಎಲ್ಲಾದರೂ ಹೋಗುವಾಗ ನಮಗೆ ಹಾವಿನ ಕೂಗು ಕೇಳಿದರೆ, ಶಬ್ದ ಕೇಳಿದರೆ ವಿಶೇಷವಾಗಿರುವಂತಹ ಲಾಭವಾಗುತ್ತದೆ. ಹಾವು ಎಡಭಾಗದಿಂದ ಕೂಗಿದರೆ ಆಥವಾ ಶಬ್ದ ಎಡಭಾಗದಿಂದ ಕೇಳಿಸಿದರೆ ತೊಂದರೆಗಳು ಉಂಟಾಗುತ್ತವೆ. ಅದೇ ಬಲಭಾಗದಿಂದ ಕೂಗಿದರೆ ಆಥವಾ ಕೂಗಿದಂತೆ ಕೇಳಿಸಿದರೆ ವಿಶೇಷವಾದ ಒಳ್ಳೆಯ ಶುಭ ಫಲಗಳು ಲಭಿಸುತ್ತವೆ.
ಹಾವು ಪೊರೆಗಳನ್ನು ಬಿಡುತ್ತಿರುವುದನ್ನು ಕಂಡರೆ ಅಂತಹವರಿಗೆ ಮೃತ್ಯುಭಯ ಬರುತ್ತದೆ. ಮೃತ್ಯುವಿಗೆ ಸಮಾನವಾಗಿರುವ ದೋಷಗಳು ಕಾಯಿಲೆಗಳು ಉಂಟಾಗುತ್ತವೆ.

 

 

ಹಾವು ಕಪ್ಪೆಯನ್ನು ನುಂಗುತ್ತಿರುವುದನ್ನು ನೋಡಿದರೆ ಅವರಿಗೆ ಭಯ ಪ್ರಾಪ್ತಿಯಾಗುತ್ತದೆ, ಯಾರಿಂದಲೋ ತೊಂದರೆಯಾಗುವುದು,, ಯಾರಾದರೂ ಎದುರಿಸಬಹುದು, ಭಯ ಪಡುವ ಸನ್ನಿವೇಶಗಳು ಎದುರಾಗುತ್ತವೆ.
ಇನ್ನು ಮುಂಗುಸಿ ಯೊಡನೆ ಹಾವು, ಹಾವು ಜಗಳ ಮಾಡುತ್ತಿರುವುದನ್ನು ನೋಡಿದರೆ ನಮಗೆ ಕಲಹ ಉಂಟಾಗುತ್ತವೆ, ಅಥವಾ ಇದಕ್ಕೂ ಮೊದಲು ಯಾವುದಾದರೂ ಜಗಳಗಳಲ್ಲಿ ನಾವು ಭಾಗಿಯಾಗಿದ್ದರೆ ನಮಗೆ ಜಯಪ್ರದವಾಗುತ್ತದೆ, ಕೋರ್ಟು ಕಚೇರಿ ಕೆಲಸಗಳಲ್ಲಿ ಜಯ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.

 

ಗರುಡ ಪಕ್ಷಿ ಹಾವನ್ನು ಹಿಡಿದುಕೊಂಡು ಹೋಗುತ್ತಿರುವುದನ್ನು ಕಂಡರೆ, ನಮಗೆ ಮೃತ್ಯು ಭಯವಾದರೂ ಇದ್ದರೆ ಅಥವಾ ಆ ರೀತಿಯ ತೊಂದರೆ ದೋಷಗಳು ಇದ್ದರೆ ಅವು ದೂರವಾಗುತ್ತವೆ.
ಎಲ್ಲಿಯಾದರೂ ಇದ್ದ ಹಾವು ಮತ್ತೊಬ್ಬರ ಗಾಬರಿಯಿಂದ ಆಥವಾ ಯಾರಾದರೂ ನಿಮಗೆ ಅಲ್ಲಿ ಹಾವು ಇದೆ ಎಂದು ತೋರಿಸಿದರೆ ಗಾಬರಿ ಪಟ್ಟರೆ ಅದು ಕೂಡ ಒಳ್ಳೆಯದು. ಹಾವುಗಳು ದೈವಾಂಶ ಸಂಭೂತ ಉಳ್ಳವುಗಳು ಎಂದು ನಾವು ಕಾಣುತ್ತೇವೆ. ಅಂತಹ ಹಾವುಗಳು ಮಂತ್ರ , ತಂತ್ರ ಯಂತ್ರಗಳಿಗೆ ಕಟ್ಟು ಬೀಳುತ್ತವೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಅಂತಹ ಹಾವುಗಳಿಂದ ಹಲವು ವಿಶೇಷವಾಗಿರುವ ಆರೋಗ್ಯಕ್ಕೆ ಔಷಧಿಗಳನ್ನು ತಯಾರಿಸುತ್ತಾರೆ. ಸರ್ಪಗಳು ದೈವಾಂಶ ಸಂಭೂತ ಉಳ್ಳದ್ದಾಗಿದೆ. ಅವರು ಪೂಜ್ಯ ಸ್ಥಾನದಲ್ಲಿ ಇರುವುದರಿಂದ ಯಾರೂ ಕೂಡ ಸರ್ಪಗಳಿಗೆ ಹಾನಿ ಉಂಟು ಮಾಡಬಾರದು, ಹೊಡೆಯಬಾರದು, ಕೊಲ್ಲಬಾರದು ಅದರಿಂದ ನಮಗೆ ಸರ್ಪದೋಷ, ಮಹಾಪಾಪ ಬರುವುದು ಅಂತ ಶಾಸ್ತ್ರದಲ್ಲಿ ಹೇಳಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top