fbpx
ಸಮಾಚಾರ

ಮೊಬೈಲ್ ಕ್ಯಾಂಟೀನ್ ನಲ್ಲಿ ಯಶಸ್ಸು ಸಾಧಿಸಿದ ಮಂಗಳೂರು ಶಿಲ್ಪಾ ಅವರಿಗೆ ಪಾಲುದಾರರಾಗಿ ಬಂತು ಮಹೀಂದ್ರಾ ಪಿಕಪ್ ವಾಹನ  

ಮೊಬೈಲ್ ಕ್ಯಾಂಟೀನ್ ಸಾಧಕಿಗೆ ಬೊಲೆರೊ

ಮೊಬೈಲ್ ಕ್ಯಾಂಟೀನ್ ನಲ್ಲಿ ಯಶಸ್ಸು ಸಾಧಿಸಿದ ಮಂಗಳೂರು ಶಿಲ್ಪಾ ಅವರಿಗೆ ಪಾಲುದಾರರಾಗಿ ಬಂತು ಮಹೀಂದ್ರಾ ಪಿಕಪ್ ವಾಹನ  

ಮಲೆನಾಡು ಶೈಲಿಯ ರೋಟ್ಟಿಗಳನ್ನು ಮೊಬೈಲ್ ಕ್ಯಾಂಟೀನ್ ನಲ್ಲಿ ಯಶಸ್ಸು ಸಾಧಿಸಿದ ಮಂಗಳೂರು ಶಿಲ್ಪಾ ಅವರಿಗೆ ಮಹಿಂದ್ರಾ ಪಿಕ್ ಅಪ್ (ಬೊಲೆರೊ ಮ್ಯಾಕ್ಸಿ ಟದರಕ್ ಪ್ಲಸ್) ವಾಹನವನ್ನು ಸೋಮವಾರ ಹಸ್ತಾಂತರಿಸಲಾಯಿತು.

ನಗರದ ಕೊಟ್ಟಾರ ಚೌಕಿಯಲ್ಲಿರುವ ಮಹೀಂದ್ರಾ ವಾಹನಗಳ ಅಧಿಕೃತ ಮಾರಾಟಗಾರರಾದ ಕರ್ನಾಟಕ ಏಜನ್ಸೀಸ್ ನಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಸಿಇಒ ಆರ್.ಸಿ.ರಾಡ್ರಿಗಸ್ ವಾಹನದ ಕೀಲಿ ಕೈ ಹಸ್ತಾಂತರಿಸಿದರು, ಶಿಲ್ಪಾ ಸಾಧನೆ: ಮೂಲತಃ ಹಾಸನದವರಾದ ಶಿಲ್ಪಾ ಮಂಗಳೂರಿನ ವ್ಯಕ್ತಿಯನ್ನು ವಿವಾಹವಾಗಿ ಇಲ್ಲಿಗೆ ಬಂದವರು. ಪತಿ ಕೆಲ ವರ್ಷ ಹಿಂದೆ ನಾಪತ್ತೆಯಾಗಿದ್ದರು. 2015ರಲ್ಲಿ ಸಾಲ ಮಾಡಿ ಮಹಿಂದ್ರ ಪಿಕ್ಅಪ್ ಖರೀದಿಸಿ, ಅದನ್ನು ಮೊಬೈಲ್ ಕ್ಯಾಂಟೀನ್ ಆಗಿ ಪರಿವರ್ತಿಸಿ ಮಣ್ಣಗುಡ್ಡ ಗಾಂಧಿನಗರ ಬಳಿ ತಮ್ಮ ಸೋದರನೊಂದಿಗೆ ಮೊಬೈಲ್ ಕ್ಯಾಂಟೀನ್ ಆರಂಭಿಸಿದ್ದರು. ಇವರ ಮಲೆನಾಡು ಶೈಲಿಯ ರೊಟ್ಟಿ ಗ್ರಾಹಕರ ಮನ ಗೆದ್ದಿತ್ತಿ.

ಮಂಗಳೂರಿನಲ್ಲಿ ಕರ್ನಾಟಕ ಏಜೆನ್ಸಿ ಮೂಲಕ ಕಮರ್ಷಿಯಲ್ ಸೇಲ್ಸ್ ಹೆಚ್‌ಒಡಿ ಫಾರ್ಚುನೇಟ್ ಸೆರಾವೊ ಹಾಗೂ ಕರ್ನಾಟಕ ಏಜೆನ್ಸಿ ಪಾಲುದಾರರಾದ ಸಂತೋಷ್ ರಾಡ್ರಿಗಸ್ ಅವರು ಶಿಲ್ಪಾ ಅವರಿಗೆ ವಾಹನವನ್ನು ಹಸ್ತಾಂತರಿಸಿದರು.

ಹಿಂದೊಮ್ಮೆ ಮಹೀಂದ್ರಾ ಸಿಇಒ ಆನಂದ್ ಮಹೀಂದ್ರ, `ಶಿಲ್ಪಾರ ಸಾಧನೆಯಲ್ಲಿ ಮಹೀಂದ್ರದ ಪಾಲೂ ಇರುವುದು ಅತೀವ ಸಂತೋಷ ತಂದಿದೆ. ಆಕೆ ಮನಸ್ಸು ಮಾಡಿದರೆ, ಮತ್ತೊಂದು ಕ್ಯಾಂಟೀನ್ ತೆರೆಯುವುದಾದರೆ ನಾನು ವಾಹನ ನೀಡುವ ಮೂಲಕ ಆಕೆಯ ಉದ್ಯಮದಲ್ಲಿ ಹೂಡಿಕೆ ಮಾಡಲು ತಯಾರಿದ್ದೇನೆ’ ಎಂದು ಟ್ವೀಟ್ ಮಾಡಿದ ಸಂದೇಶಕ್ಕೆ ಭಾರೀ ಪ್ರಶಂಸೆ ಬಂದಿತ್ತು. ಇಂದು ಆ ಗಳಿಗೆ ಬಂದಿದೆ. ಶಿಲ್ಪಾ ತಮ್ಮ ಕುಟುಂಬ ಸಮೇತ ಬಂದು ವಾಹನವನ್ನು ಸ್ವೀಕರಿಸಿದ್ದಾರೆ.

ಇದೇ ವೇಳೆ ತಮಗೆ ಸಿಕ್ಕ ಮಾಧ್ಯಮಗಳ ಜೊತೆ ಮಾತನಾಡಿರುವ ರಮ್ಯ ಈಗ ನನಗೆ ಸಿಕ್ಕ ಹೊಸ ಪಿಕಪ್ ವಾಹನದಲ್ಲಿ ಇನ್ನೊಂದು ಕಡೆ ವ್ಯಾಪಾರ ನಡೆಸಲು ಸಿದ್ಧತೆ ನಡೆಸಿದ್ದೇನೆ.

 

ಇದಕ್ಕೆ ಈಗಾಗಲೇ ಕಂಕನಾಡಿ ಪರಿಸರದಲ್ಲಿ ಒಂದು ಜಾಗವನ್ನು ಗುರುತಿಸಿದ್ದೇನೆ. ಪಾಲಿಕೆ ಸಚೇತಕ ಶಶಿಧರ್ ಹೆಗ್ಡೆ ಹಾಗೂ ಇತರರು ನನಗೆ ನೆರವಾಗಿದ್ದಾರೆ. ಆಸಕ್ತರನ್ನು ಹೊಸ ಉದ್ಯಮಕ್ಕೆ ನೇಮಿಸಿ ಆ ಮೂಲಕ ಹಳ್ಳಿಮನೆ ರೊಟ್ಟಿಸ್ ಉದ್ಯಮವನ್ನು ವಿಸ್ತರಿಸಲಿದ್ದೇನೆ ಎಂದು ತಿಳಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top