fbpx
ಸಿನಿಮಾ

ಪಾರ್ಟಿಯಲ್ಲಿ ಡಾನ್ಸ್ ಮಾಡಲು ಒಪ್ಪದಿದ್ದಕ್ಕೆ ಗುಂಡಿಕ್ಕಿ ಪಾಕಿಸ್ತಾನದ ನಟಿಯ ಬರ್ಬರ ಹತ್ಯೆ

ಪಾರ್ಟಿಯಲ್ಲಿ ಡಾನ್ಸ್ ಮಾಡಲು ಒಪ್ಪದಿದ್ದಕ್ಕೆ ಗುಂಡಿಕ್ಕಿ ಪಾಕಿಸ್ತಾನದ ನಟಿಯ ಬರ್ಬರ ಹತ್ಯೆ

 

ಪ್ರಸಿದ್ಧ ಪಾಕಿಸ್ತಾನಿ ನಟಿ ಮತ್ತು ಗಾಯಕಿ ಸುಂಬುಲ್ ಖಾನ್ ಅವರನ್ನು ಸೋಮವಾರ ಗುಂಡಿಕ್ಕಿ ಕೊಂದ ಘಟನೆ ಪಾಕಿಸ್ತಾನಲ್ಲಿ ನಡೆದಿದೆ. ಷೇಕ್ ಮಾಲ್ಟೂನ್ ಪಟ್ಟಣದಲ್ಲಿನ ತನ್ನ ಮನೆಯೊಳಗೆ ನಟಿ ಇದ್ದಾಗ ಮೂರು ಸಶಸ್ತ್ರ ಪುರುಷರು ಅವಳನ್ನು ಗುಂಡಿಕ್ಕಿ ಕೊಂಡಿದ್ದಾರೆ. ಮೂಲಗಳ ಪ್ರಕಾರ ಸುಂಬುಲ್ ಖಾನ್ ಖಾನ್ ರವರು ಪಾರ್ಟಿ ಒಂದರಲ್ಲಿ ನರ್ತನೆ ಮಾಡಲು ನಿರಾಕರಣೆ ಮಾಡಿದ್ದರಂತೆ.

 

ಈ ದುಷ್ಕರ್ಮಿಗಳು ಸುಂಬುಲ್ ಖಾನ್ ಅವರನ್ನು ಖಾಸಗಿ ಪಾರ್ಟಿಯಲ್ಲಿ ನರ್ತನೆ ಮಾಡಲು ಕೇಳಿಕೊಂಡಿದ್ದಾರೆ ಎಂದು ವರದಿ ಹೇಳಿದೆ, ಆದರೆ ಆ ರೀತಿ ಹೋಗಲು ಅವರು ನಿರಾಕರಿಸಿದರು. ಈ ಮೂಲಕ ಕೋಪಗೊಂಡ ಅವರು ಸುಂಬಲ್ ಖಾನ್ ಅವರನ್ನು ಕೊಂದು ಅವರ ಮನೆಗೆ ಬೆಂಕಿ ಹಚ್ಚಿ ಹೋಗಿದ್ದಾರೆ. ಮಾಜಿ ಪೊಲೀಸ್, ನಯೀಮ್ ಖಟ್ಟಕ್, ಈ ಪ್ರಕರಣದಲ್ಲಿ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ. ಕೊಲೆಗೆ ತನಿಖೆ ನಡೆಸಿದ ಬಳಿಕ ಅವರನ್ನು ಬಂಧಿಸಲಾಯಿತು.

 

 

ಪಾಕಿಸ್ತಾನದಲ್ಲಿ 25 ವರ್ಷ ವಯಸ್ಸಿನ ನಟಿ-ಗಾಯಕಿ ಪಾಕಿಸ್ತಾನದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ ಏಕೆಂದರೆ ದೇಶದಲ್ಲಿ ಅನೇಕ ದೂರದರ್ಶನ ಕಾರ್ಯಕ್ರಮಗಳಲ್ಲಿ ನಟಿಸಿದ್ದಾರೆ. ಪಾಕಿಸ್ತಾನದಲ್ಲಿ ಮನರಂಜನಾ ಉದ್ಯಮದ ಒಬ್ಬರನ್ನು ಕೊಲೆ ಮಾಡಿದ್ದೂ ಇದೆ ಮೊದಲಲ್ಲ. ಸುಮಾರು ಒಂದು ವರ್ಷದ ಹಿಂದೆ, ಜನಪ್ರಿಯ ನಟಿ ಮತ್ತು ನರ್ತಕಿ, ಕಿಸ್ಮತ್ ಬೇಗ್, ಲಾಹೋಲ್ ನಲ್ಲಿ ಇದೆ ರೀತಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 

 

ಆಕೆಯ ಕಾಲು, ಹೊಟ್ಟೆ ,ಕೈ ಹಾಗು ದೇಹದ ವಿವಿಧ ಭಾಗಗಳಲ್ಲಿ 11 ಸುತ್ತು ಗುಂಡು ಹಾರಿಸಿ ಕೊಂದಿದ್ದಾರೆ. ಬೈಕ್ ನಲ್ಲಿ ಬಂದ ಆಕ್ರಮಣಕಾರರು ಗುಂಡು ಹರಿಸಿ ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೇ ಬಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top