fbpx
ಮನೋರಂಜನೆ

ಆಶಿಕಾ ಈಗ ರ‍್ಯಾಂಬೋ ರಾಣಿ!

ಹೀರೋಗಳು ಮಾತ್ರ ಸಿನಿಮಾದ ಪೂರ್ತಿ ಆವರಿಸಿಕೊಂಡಿರುತ್ತಾರೆ. ಆದರೆ, ನಾಯಕಿಯರೆನಿಸಿಕೊಂಡೂ ಅಲ್ಲೊಂದು ಇಲ್ಲೊಂದು ಸೀನುಗಳಲ್ಲಿ ಇಣುಕಿ ಮರೆಯಾಗುವ ಹಣೇಬರಹ ಹೀರೋಯಿನ್‌ಗಳದ್ದು.

 


ಆಶಿಕಾ ಎನ್ನುವ ಕನ್ನಡದ ಹೀರೋಯಿನ್ ನಸೀಬು ಕೂಡಾ ಹೀಗೇ ಆಗಿತ್ತು. ಈಗಾಗಲೇ ತೆರೆ ಕಂಡಿರುವ ಮುಗುಳುನಗೆ ಮತ್ತು ರಾಜು ಕನ್ನಡ ಮೀಡಿಯಮ್ ಸಿನಿಮಾಗಳಲ್ಲಿ ಈಕೆ ಹೀರೋಯಿನ್ ಅನಿಸಿಕೊಂಡಿದ್ದರೂ ಜೊತೆಗೆ ಇನ್ನೂ ಇಬ್ಬಿಬ್ಬರು ಹುಡುಗಿಯರಿದ್ದಿದ್ದರಿಂದ ಸೋಲೋ ಹೀರೋಯಿನ್ ಅನಿಸಿಕೊಳ್ಳಲು ಆಗಿರಲಿಲ್ಲ.

ಈಗ ಶರಣ್ ನಟಿಸುತ್ತಿರುವ ರ‍್ಯಾಂಬೋ ೨ ಸಿನಿಮಾದಲ್ಲಿ ಪೂರ್ತಿ ಸಿನಿಮಾದಲ್ಲಿ ಕಾಣಿಸಿಕೊಳ್ಳೋ ಅದೃಷ್ಟ ದಕ್ಕಿದೆಯಂತೆ. ಜೊತೆಗೆ ಈ ಹಿಂದಿನ ಸಿನಿಮಾಗಳಲ್ಲಿ ಡಿ ಗ್ಲಾಮರಸ್ ಪಾತ್ರದಲ್ಲಿ ನಟಿಸಿದ್ದ ಆಶಿಕಾ ರ‍್ಯಾಂಬೋ ದಲ್ಲಿ ತುಂಡು ಬಟ್ಟೆ ತೊಟ್ಟು ಸಖತ್ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರಂತೆ..

 

 

ಅಂದಹಾಗೆ ಆಶಿಕಾ ರಂಗನಾಥ್ ರಂಥ ನಟಿಯರ ಆಗಮನದಿಂದ ನಮ್ಮ ಗಾಂಧಿನಗರದ ಮಂದಿ ಬಾಂಬೆ ಹುಡುಗಿಯರಿಗೆ ರೆಡ್ ಕಾರ್ಪೆಟ್ ಹಾಕೋ ಕೆಲಸ ಕಡಿಮೆಯಾಗಿದೆ. ಕನ್ನಡದ ಹುಡುಗಿಯರೇ ಹೀರೋಯಿನ್ ಗಳಾದರೆ ಭಾಷೆ ಗೊತ್ತಿಲ್ಲದವರನ್ನು ಕರೆದುಕೊಂಡು ಬಂದು ಡೈಲಾಗು ಹೇಳಿಸುವ ಬದಲು ಎಬಿಸಿಡಿ ಓದಿಸೋ ಸಮಸ್ಯೆಯೂ ಬಗೆಹರಿದಂತಾಗುತ್ತದೆ. ಸಿನಿಮಾಗೆ ಬೇಕಾದ ಭಾವನೆಗಳನ್ನು ತುಂಬಿಸುವುದೂ ಸುಲಭ. ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಕೂಡಾ ಆಶಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಎಲ್ಲ ಥರದ ಪಾತ್ರಗಳಿಗೂ ಈಕೆ ಒಗ್ಗುವ ಮೂಲಕ ಇನ್ನೂ ಸಾಕಷ್ಟು ಅವಕಾಶಗಳನ್ನು ಪಡೆಯುವಂತಾಗಲಿ…

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top