fbpx
ಬಿಗ್ ಬಾಸ್

ಯಾವ ಕಾರಣಕ್ಕೆ ‘ಮಾಸ್ಟರ್ ಡ್ಯಾನ್ಸರ್’ ಶೋಗೆ ಚಂದನ್ ಶೆಟ್ಟಿ ಜಡ್ಜ್ ಆಗಿರೋದು ಗೊತ್ತ?

ಯಾವ ಕಾರಣಕ್ಕೆ ‘ಮಾಸ್ಟರ್ ಡ್ಯಾನ್ಸರ್’ ಶೋಗೆ ಚಂದನ್ ಶೆಟ್ಟಿ ಜಡ್ಜ್ ಆಗಿರೋದು ಗೊತ್ತ?

 

ಸದ್ಯ ಬಿಗ್ ಬಾಸ್ ವಿಜೇತ ಶೆಟ್ಟಿ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ, ಒಂದು ಕಡೆ ಬಿಗ್ ಬಾಸ್ ಷೋ ಗೆದ್ದಿರುವ ಖುಷಿಯಲ್ಲಿದ್ದಾರೆ ಮತ್ತೊಂದು ತಮ್ಮ ಟಕೀಲ ಹಾಡು ಮಾಡಿರುವ ಸಾಧನೆ ಕಂಡು ಸಂತಸವಾಗಿದ್ದಾರೆ. ಒಂದು ಕಾಲದಲ್ಲಿ ಅವಕಾಶಗಳಿಗಾಗಿ ಆತೊರೆಯುತ್ತಿದ್ದ ಹುಡುಗನ ಕಾಲ ಬಳಿಗೆ ಇಂದು ಆಫರ್ ಗಳು ಬಂದು ಬೀಳುತ್ತಿವೆ. ಎಷ್ಟರ ಮಟ್ಟಿಗೆ ಎಂದರೆ ಎರಡು ಮೂರು ದಿನಗಳಲ್ಲೇ ಸುಮಾರು ಹತ್ತು ಕೋಟಿ ಆಫರ್ ಬರುವಷ್ಟು. ಚಂದನ್ ಶೆಟ್ಟಿಯವರು ಕಲರ್ಸ್ ಕನ್ನಡ ಚಾನೆಲ್ ನ ಮತ್ತೊಂದು ರಿಯಾಲಿಟಿ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ. ಕಲರ್ಸ್ ವಾಹಿನಿಯಲ್ಲಿ ಶುರು ಆಗಲಿರುವ ‘ಮಾಸ್ಟರ್ ಡ್ಯಾನ್ಸರ್’ ಕಾರ್ಯಕ್ರಮಕ್ಕೆ ಚಂದನ್ ಶೆಟ್ಟಿ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ.

 

 

ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ಆಯ್ಕೆ ವಿಚಾರವಾಗಿ ಪರ ವಿರೋಧ ಚರ್ಚೆ ನಡೆಯುತ್ತಿದೆ. ಕೆಲವರು ಕೆಲವ ಟಿ.ಆರ್.ಪಿ ಗೋಸ್ಕರ ಚಂದನ್ ಅವರನ್ನು ತೀರ್ಪುಗಾರರಾಗಿ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಹೀಗಿರುವಾಗಲೆ ‘ಮಾಸ್ಟರ್ ಡ್ಯಾನ್ಸರ್’ ಡಾನ್ಸ್ ಶೋ ನಲ್ಲಿ ಚಂದನ್ ಶೆಟ್ಟಿ ‘ಹೇಗೆ ಜಡ್ಜ್ ಮಾಡುವೆ?’ ಪ್ರಶೆಗೆ ಚಂದನ್ ಶೆಟ್ಟಿ ಉತ್ತರವನ್ನು ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

 

 

“ಮಾಸ್ಟರ್ ಡ್ಯಾನ್ಸರ್” ಷೋ ನಲ್ಲಿ ಡ್ಯಾನ್ಸ್ ಮಾಡಲು ಮ್ಯೂಸಿಕ್ ಬೇಕು. ನಾನು ಒಬ್ಬ ಸಂಗೀತ ನಿರ್ದೇಶಕ ಅಲ್ವಾ.? ಹೀಗಾಗಿ, ಈ ಕಾನ್ಸೆಪ್ಟ್ ಮೇಲೆ ನಾನು ಜಡ್ಜ್ ಮಾಡುತ್ತೇನೆ” ಎಂದು ಚಂದನ್ ಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದಾರೆ. “ಮಾಸ್ಟರ್ ಡ್ಯಾನ್ಸರ್” ಕಾರ್ಯಕ್ರಮ ಹೇಗೆ ಮೂಡಿ ಬರಲಿದೆ ಕಾದು ನೋಡಬೇಕಿದೆ. ಈ ಶೋ ರಾತ್ರೋ 8 ಘಂಟೆಗೆ ಪ್ರಸಾರವಾಗಲಿದೆ.

 

 

ಇದೆ ಮೊದಲ ಬಾರಿಗೆ ನಾನು ಡ್ಯಾನ್ಸ್ ಸ್ಪರ್ಧೆಯಲ್ಲಿ ಜಡ್ಜ್ ಆಗಿದ್ದೇನೆ. ನಾನು ಹಲವಾರು ಡಾನ್ಸ್ ಷೋ ನೋಡಿದ್ದೇನೆ. ಈ ಕೆಲಸ ತುಂಬಾ ಕಷ್ಟ. ನಾನು ಡ್ಯಾನ್ಸರ್ ಅಲ್ಲ ಆದರೆ ಹಲವಾರು ಜನರು ಮಾಡುವ ಡಾನ್ಸ್ ನೋಡಿದ್ದೇನೆ. ಎಷ್ಟು ಕ್ರಿಯೇಟಿವ್ ಕಾನ್ಸೆಪ್ಟ್ ಮಾಡಿ ಬರುತ್ತಾರೆ ಎಂಬ ಆದರದ ಮೇಲೆ ನಾನು ಜಡ್ಜ್ ಮಾಡುತ್ತೇನೆ ಎಂದು ಹೇಳಿದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top