fbpx
ಮನೋರಂಜನೆ

ಸಮೀರಾಚಾರ್ಯ ಪತ್ನಿ ಶ್ರಾವಣಿ ಮೇಲಿನ ಹಾಡನ್ನು ಅವರ ಮುಂದೆಯೇ ಹಾಡಿ ರಂಜಿಸಿದ ಚಂದನ್ ಶೆಟ್ಟಿ!

ಸಮೀರಾಚಾರ್ಯ ಪತ್ನಿ ಶ್ರಾವಣಿ ಮೇಲಿನ ಹಾಡನ್ನು ಅವರ ಮುಂದೆಯೇ ಹಾಡಿ ರಂಜಿಸಿದ ಚಂದನ್ ಶೆಟ್ಟಿ! ವಿಡಿಯೋ ನೋಡಿ.

 

 

ಈ ಬಿಗ್‌ಬಾಸ್ ಎಂಬ ರಿಯಾಲಿಟಿ ಶೋ ಅಂದರೆ ಹಾಗೇನೆ. ಇದರ ಸದಸ್ಯರಾಗಿರುವವರು ಮನೆಯೊಳಗಿದ್ದರೂ ಸದ್ದು-ಸುದ್ದಿ, ಮನೆಯ ಹೊರಗೆ ಬಂದರೂ ಸೌಂಡು! ಒಟ್ಟಿನಲ್ಲಿ ಇವರೇ ಪ್ರಚಾರದಿಂದ ದೂರವುಳಿಯುವುದಿಲ್ಲವೋ ಅಥವಾ ಪ್ರಚಾರವೇ ಇವರಿಂದ ದೂರ ಹೋಗುವುದಿಲ್ಲವೋ ದೇವರೇ ಬಲ್ಲ. ಅದೇನೆ ಇರಲಿ, ಈಗಿನ ಸುದ್ದಿ ಎಂದರೆ ಕಳೆದ ವಾರವಷ್ಟೇ ಕನ್ನಡ ಬಿಗ್ ಬಾಸ್-೫ ಆವೃತ್ತಿಯಲ್ಲಿ ಕನ್ನಡದ ರ‍್ಯಾಪರ್ ಖ್ಯಾತಿಯ ಚಂದನ್ ಶೆಟ್ಟಿ ಗೆಲುವಿನ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು.

 

 

ತಮ್ಮ ಟ್ಯಾಲೆಂಟ್ ಇಂದ ಮನೆ ಮಂದಿ ಮೇಲೆ ಒಂದೊಂದು ಹಾಡನ್ನು ಮಾಡಿ ಕೈಗೆ ಸಿಕ್ಕ ವಸ್ತುಗಳನ್ನೇ ಸಂಗೀತ ಸಂಯೋಜನೆ ಉಪಕರಣಗಳನ್ನಾಗಿ ಉಪಯೋಗಿಸಿಕೊಂಡು ಹಾಡಿನ ಮೂಲಕ ರಂಜಿಸುತ್ತಿದ್ದರು. ಬಿಗ್ ಬಾಸ್ ಮನೆಯೊಳಕ್ಕೆ ಪ್ರತಿ ಸ್ಪರ್ಧಿಗಳ ಕುಟುಂಬದವರನ್ನು ಕರೆಸಿದ್ದಾಗ ಬಂದಿದ್ದ ಸಮೀರಾಚಾರ್ಯ ಪತ್ನಿ ಶ್ರಾವಣಿ, ಚಂದನ್ ಅವರ ಜೊತೆ ಮಾತನಾಡುವಾಗ ”ನನ್ನ ಮೇಲೆ ಒಂದು ಹಾಡು ಮಾಡಿ” ಎಂದು ಕೇಳಿಕೊಂಡಿದ್ದರು.. ಆಗ ಚಂದನ್ ಕೂಡ ‘ಆಯಿತು” ಎಂದು ಸಮ್ಮತಿಸಿದರು. ಅದರಂತೆ ಶ್ರಾವಣಿಯವರ ಮೇಲೆ ಹಾಡನ್ನು ಹಾಡಿ ಶ್ರಾವಣಿ ಅವರ ಆಸೆಯನ್ನು ಈಡೇರಿಸಿದ್ದರು.

 

ಈಗ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ತನ್ನ ಗೆಳೆಯ ದಿವಾಕರ್ ಜೊತೆ ಸಮೀರ್ ಮನೆಗೆ ಭೇಟಿ ನೀಡಿರುವ ಶೆಟ್ರು ಸಮೀರ್ ಆಚಾರ್ಯ ದಂಪತಿಗಳ ಮುಂದೆ ಶ್ರಾವಣಿಯವರ ಮೇಲಿನ ಹಾಡನ್ನು ಹಾಡಿ ಇಬ್ಬರನ್ನು ರಂಜಿಸಿದ್ದಾರೆ. ಸಮೀರ್ ಆಚಾರ್ಯ ಈ ವಿಡಿಯೋವನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡಿದ್ದು ವಿಡಿಯೋ ಸಕತ್ ವೈರಲ್ ಆಗಿದೆ.

ವಿಡಿಯೋವನ್ನು ಇಲ್ಲಿ ನೋಡಿ!👇👇👇👇

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top