fbpx
ಮನೋರಂಜನೆ

ಚಂದನ್’ಗೆ ಬಂತು ದರ್ಶನ್ ಚಿತ್ರಕ್ಕೆ ಮ್ಯೂಸಿಕ್ ಮಾಡೋ ಅವಕಾಶ?

ಚಂದನ್’ಗೆ ಬಂತು ದರ್ಶನ್ ಚಿತ್ರಕ್ಕೆ ಮ್ಯೂಸಿಕ್ ಮಾಡೋ ಅವಕಾಶ?

 

 

ಸದ್ಯ ಬಿಗ್ ಬಾಸ್ ವಿಜೇತ ಶೆಟ್ಟಿ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ, ಒಂದು ಕಡೆ ಬಿಗ್ ಬಾಸ್ ಷೋ ಗೆದ್ದಿರುವ ಖುಷಿಯಲ್ಲಿದ್ದಾರೆ ಮತ್ತೊಂದು ತಮ್ಮ ಟಕೀಲ ಹಾಡು ಮಾಡಿರುವ ಸಾಧನೆ ಕಂಡು ಸಂತಸವಾಗಿದ್ದಾರೆ. ಒಂದು ಕಾಲದಲ್ಲಿ ಅವಕಾಶಗಳಿಗಾಗಿ ಆತೊರೆಯುತ್ತಿದ್ದ ಹುಡುಗನ ಕಾಲ ಬಳಿಗೆ ಇಂದು ಆಫರ್ ಗಳು ಬಂದು ಬೀಳುತ್ತಿವೆ. ಈಗ ಚಂದನ್ ಶೆಟ್ಟಿಯವರು ಕಲರ್ಸ್ ಕನ್ನಡ ಚಾನೆಲ್ ನ ಮತ್ತೊಂದು ರಿಯಾಲಿಟಿ ಷೋ ಆದ ‘ಮಾಸ್ಟರ್ ಡ್ಯಾನ್ಸರ್’ ಕಾರ್ಯಕ್ರಮಕ್ಕೆ ಚಂದನ್ ಶೆಟ್ಟಿ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ.

 

 

ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ರ್ಯಾಪರ್ ಚಂದನ್ ಶೆಟ್ಟಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 52ನೇ ಚಿತ್ರಕ್ಕೆ ಸಂಗೀತ ನಿರ್ದೇಶಕನಾಗಿ ಆಯ್ಕೆಯಾಗಿದ್ದರಂತೆ. ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಈ ಚಿತ್ರವನ್ನು ಚೌಕ ಖ್ಯಾತಿಯ ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದರಂತೆ.,

ಒಟ್ನಲ್ಲಿ ಹರಿದಾಡುತ್ತಿರುವ ಗಾಳಿ ಸುದ್ದಿ ಒಂದು ವೇಳೆ ನಿಜವಾದರೆ ದರ್ಶನ್ ಅಭಿಮಾನಿಗಳು ಚಂದನ್ ಕಡೆಯಿಂದ ವೆರೈಟಿ ವೆರೈಟಿ ಹಾಡುಗಳನ್ನು ನಿರೀಕ್ಷೆ ಮಾಡಬಹುದು ಹಾಗಾಗಿ ಇದು ಗಾಳಿ ಸುದ್ದಿಯಾಗಿರದೆ ನಿಜವಾದರೆ ಅಭಿಮಾನಿಗಳಿಗೆ ಹಬ್ಬ. ಆದರೆ ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ ಎಂಬುದು ಯಾರಿಗೂ ಗೊತ್ತಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top