fbpx
ಮನೋರಂಜನೆ

ಕಾಮಿಡಿ ಕಿಂಗ್ ಚಿಕ್ಕಣ್ಣ ಈಗ ನಿರ್ಮಾಪಕ!

ಕಾಮಿಡಿ ಕಿಂಗ್ ಚಿಕ್ಕಣ್ಣ ಈಗ ನಿರ್ಮಾಪಕ!

 

 

ತನ್ನ ಕಾಮಿಡಿಯಿಂದಲೇ ಕನ್ನಡ ಚಿತ್ರರಸಿಕರ ಮನಗೆದ್ದಿರುವ ಚಿಕ್ಕಣ್ಣ ಈಗ ಸ್ಯಾಂಡಲ್’ವುಡ್ ನ ಬಹುಬೇಡಿಕೆಯ ಹಾಸ್ಯನಟ ಎಂದರೆ ತಪ್ಪಾಗುವುದಿಲ್ಲ. ಚಿತ್ರರಂಗದ ಸ್ಟಾರ್ ಚಿತ್ರಗಳಲ್ಲಿ ನಟಿಸಿದ ನಂತರ ಚಿಕ್ಕಣ್ಣ ಅವರು ಹೀರೋ ಆಗ್ತಾರಂತೆ’ ಎಂಬ ಸುದ್ದಿಗಳು ಆಗಾಗ ಹರಿದಾಡಿದ್ದರೂ ಚಿಕ್ಕಣ್ಣ ಹೀರೋ ಆಗಿರುವ ಚಿತ್ರಗಳು ಯಾವುದೂ ಶುರುವಾಗಾಗಿರಲಿಲ್ಲ.. ಆದ್ರೆ ಈಗ ಚಿಕ್ಕಣ್ಣ ಹೊಸ ಸುದ್ದಿಯೊಂದನ್ನ ನೀಡಿದ್ದಾರೆ ಅದೇನಂದ್ರೆ ಈಗ ಅವರು ನಿರ್ಮಾಪಕರಾಗಿದ್ದಾರೆ.

 

 

ಶರಣ್ ನಾಯಕನಾಗಿ ನಟಿಸುತ್ತಿರುವ ರಾಂಬೋ 2 ಚಿತ್ರಕ್ಕೆ ಚಿಕ್ಕಣ್ಣ ಕೂಡ ನಿರ್ವಪಕರಲ್ಲೊಬ್ಬರಾಗಿದ್ದಾರೆ! ಕೇವಲ ತಂತ್ರಜ್ಞರೇ ಸೇರಿ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಚಿಕ್ಕಣ್ಣ ಕೂಡ ಬಂಡವಾಳ ಹೂಡಿದ್ದಾರಂತೆ. ಮೊದಲು ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಆಯ್ಕೆಯಾದ ಚಿಕ್ಕಣ್ಣ ನಂತರ ತಾವು ಕೂಡ ನಿರ್ಮಾಪಕರಲ್ಲೊಬ್ಬರಾಗಿದ್ದಾರೆ. ಚಿಕ್ಕಣ್ಣ ಜೊತೆ ನಟ ಶರಣ್, ಅಟ್ಲಾಂಟ ನಾಗೇಂದ್ರ, ತರುಣ್ ಕಿಶೋರ್ ಸುಧೀರ್, ಮೋಹನ್ ಬಿ. ಕೆರೆ, ಅರ್ಜುನ್ ಜನ್ಯ, ಸಂಕಲನಕಾರ ಕೆ.ಎಂ. ಪ್ರಕಾಶ್, ಛಾಯಾಗ್ರಾಹಕ ಸುಧಾಕರ್ ಹೀಗೆ ಅನೇಕ ತಂತ್ರಜ್ಞರು ಸೇರಿ ಸೇರಿ ನಿರ್ಮಾಣ ಮಾಡುತ್ತಿದ್ದಾರೆ.

ರಾಂಬೋ-2 ಚಿತ್ರ ರಿಲೀಸ್ ಗೆ ತಯಾರಾಗಿದ್ದು ಚಿತ್ರದ ಹಾಡೊಂದು ನೆನ್ನೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಚಿತ್ರವನ್ನು ಅನಿಲ್ ನಿರ್ದೇಶನ ಮಾಡುತ್ತಿದ್ದು ಇದು ಒಂದು ಕಾಮಿಡಿ ಕತೆಯನ್ನು ಆಧರಿಸಿರುವ ಜರ್ನಿ ಸಿನಿಮಾವಾಗಿದೆಯಂತೆ. ಆಶಿಕಾ ಮತ್ತು ಶರಣ್ ಇದೆ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top