fbpx
ಕ್ರೈಂ ಸ್ಟೋರಿ

ಮುಸ್ಲಿಂ ಯುವತಿಯನ್ನು ಪ್ರೀತಿ ಮಾಡಿದ್ದಕ್ಕೆ ನಡು ರಸ್ತೆಯಲ್ಲಿ ಕತ್ತು ಸೀಳಿ ಬರ್ಬರ ಹತ್ಯೆ.

ಮುಸ್ಲಿಂ ಯುವತಿಯನ್ನು ಪ್ರೀತಿ ಮಾಡಿದ್ದಕ್ಕೆ ನಡು ರಸ್ತೆಯಲ್ಲಿ ಕತ್ತು ಸೀಳಿ ಬರ್ಬರ ಹತ್ಯೆ.

 

ದೇಶದ ರಾಜಧಾನಿ ದೆಹಲಿಯಲ್ಲಿ ಭೀಕರ ಕೊಲೆ ನಡೆದಿದೆ. ಮುಸ್ಲಿಂ ಯುವತಿಯನ್ನು ಪ್ರೀತಿ ಮಾಡಿದ ಕಾರಣಕ್ಕೆ ಯುವತಿಯ ಮನೆಯವರು ಯುವಕನನ್ನು ನಡು ರಸ್ತೆಯಲ್ಲಿ ಕತ್ತು ಸೀಳಿ ಬರ್ಬರವಾಗಿ ಕೊಲೆಯನ್ನು ಮಾಡಿರುವ ಘಟನೆ ನಡೆದಿದೆ.

 

 

23 ವರ್ಷ ವಯಸ್ಸಿನ ಅಂಕಿತ್ ಸಕ್ಸೇನಾ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮುಸ್ಲಿಂ ಯುವತಿಯಾದ ಸಲೀಮಾ ನನ್ನು ಆತ ಪ್ರೀತಿ ಮಾಡುತ್ತಿದ್ದ ಆ ಕಾರಣಕ್ಕೆ ಯುವತಿಯ ಮನೆಯವರು ಆತನನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಹೇಳಿಕೆ ನೀಡಿರುವ ಸಲೀಮಾ, ಆಕೆ ಅಂಕಿತ್ ನನ್ನು ಭೇಟಿಯಾಗಲು ಹೊರಟಿದ್ದಳು. ನಾವು ಮದುವೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದೆವು. ಆಗ ಆಕೆಯ ಮನೆಯವರು ಅಂಕಿತ್ ನನ್ನು ಕೊಲೆ ಮಾಡಿದ್ದಾರೆ, ಈ ಕೊಲೆಯಲ್ಲಿ ನನ್ನ ಕುಟುಂಬದವರು ಭಾಗಿಯಾಗಿದ್ದಾರೆ, ನನ್ನ ಮಾವನೇ ಈ ಎಲ್ಲ ಕೃತ್ಯಕ್ಕೆ ಕಾರಣ ಎಂಬುದಾಗಿ ಆಕೆ ತಿಳಿಸಿದ್ದಾಳೆ.

 

 

ಸದ್ಯ ಸಲೀಮಾ ದೆಹಲಿಯ ಹರಿನಗರದಲ್ಲಿರುವ ನಾರಿನಿಕೇತನ್ ನಲ್ಲಿ ವಾಸವಾಗಿದ್ದಾರೆ. ಮನೆಗೆ ಹೋಗುವೆಯ ಎಂದು ಆಕೆಯನ್ನು ಕೇಳಿದಾಗ ನಿರಾಕಾರ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಸಲೀಮಾ ತನ್ನ ಸಂಬಂಧಿಗಳ ಜೊತೆಗೂ ಮಾತನಾಡಿಲ್ಲ ಎಂದು ತಿಳಿದು ಬಂದಿದೆ.

 

 

ಈ ಕುರಿತು ಮಾಧ್ಯಮದೊಂದಿದೆ ಮಾತನಾಡಿದ ಅಂಕಿತ್ ತಂದೆ ಯಶ್ ಪಾಲ್ ಸಕ್ಸೇನಾ, ಯಾವ ಕೆರಳಿರುವ ಹೇಳಿಕೆ ನನಗೆ ಬೇಕಾಗಿಲ್ಲ. ನನ್ನ ಮಗನ ಸಾವಿನಿಂದ ನನಗೆ ಬೇಸರವಾಗಿದೆ. ನಾನು ಯಾವ ಧರ್ಮವನ್ನು ವಿರೋಧ ಮಾಡುವುದಿಲ್ಲ. ಈ ಘಟನೆಯನ್ನು ಕೋಮು ದ್ವೇಷ ಹರಡಲು ಬಳಸಿಕೊಳ್ಳಬೇಡಿ. ನನ್ನ ಮಗನ ಕೊಲೆಯನ್ನು ಧರ್ಮಕ್ಕೆ ತಳಕು ಹಾಕಬೇಡಿ ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top