fbpx
ಸಿನಿಮಾ

ಕ್ಯಾನ್ಸರ್ ಗೆ ತುತ್ತಾಗಿರುವ ಅಭಿಮಾನಿಯ ಕೊನೆ ಆಸೆ ದರ್ಶನ ಈಡೇರಿಸುತ್ತಾರಾ?

ಕ್ಯಾನ್ಸರ್ ಗೆ ತುತ್ತಾಗಿರುವ ಅಭಿಮಾನಿಯ ಕೊನೆ ಆಸೆ ದರ್ಶನ ಈಡೇರಿಸುತ್ತಾರಾ?

 

ಚಾಲೆಂಜಿಂಗ್ ಸ್ಟಾರ್ ದರ್ಶನ ಅವರ ಹುಟ್ಟುಹಬ್ಬದ ತಯಾರಿಯನ್ನು ಅಭಿಮಾನಿಗಳು ಭರ್ಜರಿಯಾಗಿ ನಡೆಸುತ್ತಿದ್ದಾರೆ. ಆದರೆ ದರ್ಶನ ಅಪ್ಪಟ ಅಭಿಮಾನಿಯೊಬ್ಬ ತನ್ನ ಜೀವನದ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದಾರೆ. ಇದೊಂದು ಮನಕಲಕುವ ಕಥೆ.

 

 

ಚಾಲೆಂಜಿಂಗ್ ಸ್ಟಾರ್ ದರ್ಶನ ಅಪ್ಪಟ ಅಭಿಮಾನಿಯಾಗಿರುವ ರೇವಂತ್ ಗೆ ಈ ಬಾರಿ ದರ್ಶನರ ಹುಟ್ಟು ಹಬ್ಬ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ ಏಕೆಂದರೆ ಅವರು ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ತಮ್ಮ ಕೊನೆಯ ಕ್ಷಗಳನ್ನು ಕಳೆಯುತ್ತಿದ್ದಾರೆ.

 

 

ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ದರ್ಶನ ಅಪ್ಪಟ ಅಭಿಮಾನಿ ರೇವಂತ್ ಪ್ರತಿ ವರ್ಷ ಬೆಂಗಳೂರಿಗೆ ಬಂದು ದರ್ಶನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಿದ್ದರು. ದುರಾದೃಷ್ಟ ಅವರ ಬೆನ್ನೇರಿತು 20 ರ ಚಿಕ್ಕ ವಯಸಿನಲ್ಲಿ ಮೂಳೆ ಕ್ಯಾನ್ಸರ್ ರೋಗಕ್ಕೆ ತುತ್ತಾದರು ಈಗ ಆಸ್ಪತ್ರೆಯಲ್ಲಿ ದಾಖಲಾಗಿ ಜೇವನದ ಕೊನೆ ಕ್ಷಣ ಕಳೆಯುತ್ತಿದ್ದಾರೆ. ವೈದ್ಯರು ತಮ್ಮ ಪ್ರಯತ್ನ ಮಾಡಿ ಇನ್ನು ಮುಂದೆ ಏನು ಮಾಡಲು ಸಾಧ್ಯವಿಲ್ಲ ಎಂಬುದನ್ನು ತಿಳಿದ್ದಾರೆ.ರೇವಂತ್ ಕೆಲವು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಚಿಕಿತ್ಸೆ ಪಡೆದು ವಾಪಸು ತೆರಳಿದ್ದರು. ಆದರೆ ಈ ಬಾರಿ ಕ್ಯಾನ್ಸರ್ ರೇವಂತ್ ಅವರನ್ನು ಬಿಡುವ ಹಾಗೆ ಕಾಣುತ್ತಿಲ್ಲ

 

 

ದರ್ಶನ ಅವರನ್ನು ನೋಡಬೇಕೆಂಬ ರೇವಂತ್ ಅವರ ಕೊನೆ ಆಸೆ ಇದೆ. ದರ್ಶನ ತಮ್ಮ ಅಭಿಮಾನಿಯ ಕೊನೆ ಆಸೆ ಈಡೇರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ರೇವಂತ್ ಅವರಿಗೆ ತಮ್ಮ, ಅಕ್ಕ ಹಾಗೂ‌ ಅಪ್ಪ ಅಮ್ಮ ಇದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top