fbpx
ದೇವರು

ಒಂದೇ ರಾತ್ರಿಯಲ್ಲಿ ಒಂದೇ ಕೈಯಲ್ಲಿ ಕಟ್ಟಿದ ಅದ್ಬುತ ಪವಾಡಗಳು ನಡೆಯುವ ಈ ಶಿವನ ದೇವಸ್ಥಾನದಲ್ಲಿ ಪೂಜೆನೆ ನಡೆಯೋಲ್ಲವಂತೆ ಯಾಕಂತೀರಾ ಮುಂದೆ ಓದಿ

ಒಂದೇ ರಾತ್ರಿಯಲ್ಲಿ ಒಂದೇ ಕೈಯಲ್ಲಿ ಕಟ್ಟಿದ ಅದ್ಬುತ ಪವಾಡಗಳು ನಡೆಯುವ ಈ ಶಿವನ ದೇವಸ್ಥಾನದಲ್ಲಿ ಪೂಜೆನೆ ನಡೆಯೋಲ್ಲವಂತೆ ಯಾಕಂತೀರಾ ಮುಂದೆ ಓದಿ

 

ನಂಬಲು ಅಸಾಧ್ಯವಾದರೂ ಸಹ ಇದೊಂದು ಅದ್ಭುತವಾದ ದೇವಸ್ಥಾನ.ಕನಸಲ್ಲೂ ನೆನೆಯದಷ್ಟು ವಿಶೇಷ ಹಿನ್ನೆಲೆಯುಳ್ಳ ಪವಿತ್ರ ಶಿವನ ದೇವಾಲಯವಿದು. ಪ್ರಪಂಚದ ಯಾವ ಶ್ರದ್ದಾ ಕೇಂದ್ರಕ್ಕೂ ಕಮ್ಮಿಯಿಲ್ಲದ ಶ್ರೇಷ್ಠ ಸ್ಥಳವಿದು.

ಉತ್ತರಾಖಂಡ್ ರಾಜ್ಯದ ಪೀತೋರ್ಗಡ್ ನಗರದಿಂದ ಧಾರಚುಲಾ ನಗರಕ್ಕೆ ಹೋಗುವ ದಾರಿಯಲ್ಲಿ ಸುಮಾರು ಎಪ್ಪತ್ತು ಕಿಲೋಮೀಟರ್ ಚಲಿಸಿದರೆ ಬಲ್ತಿರ್ ಗ್ರಾಮ ಸಿಗುವುದು. ಅಲ್ಲಿ ನೆಲೆಯಾಗಿದೆ ಈ ವಿಶೇಷ ದೇವಾಲಯ. ಅದೇ “ಏಕ್ ಹಾತ್ ದೇವಾಲಯ” ಒಂದೇ ಕೈಯಲ್ಲಿ ನಿರ್ಮಿಸಿದ್ದ ಕಾರಣ ಇದನ್ನು “ಏಕ್ ಹಾತ್ ದೇವಾಲಯ” ಎಂದು ಕರೆಯುತ್ತಾರೆ. ಶಿವಲಿಂಗ ಒಳಗೊಂಡಿದ್ದರೂ ಸಹ ಇಲ್ಲಿ ಪೂಜೆ, ಪ್ರಾರ್ಥನೆ, ಅರ್ಚನೆಗಳು ನಡೆಯುವುದಿಲ್ಲ.

 

 

ಅವಿಸ್ಮರಣೀಯ ಐತಿಹಾಸಿಕ ಹಿನ್ನೆಲೆ ಇರುವ ದೇವಾಲಯವಿದು. ಈ ಮಂದಿರ ನಾಗರ ಹಾಗು ಲ್ಯಾಟಿನ್ ಶಿಲ್ಪ ಶೈಲಿ ಇವೆರಡರ ಸಮ್ಮಿಶ್ರಣವಾಗಿದೆ.ಸಾಧಾರಣವಾಗಿ ಮುಖ್ಯ ದ್ವಾರದೊಂದಿಗೆ ಪಶ್ಚಿಮ ದಿಕ್ಕಿಗೆ ಮುಖವಿದ್ದು, ಒಂದೂವರೆ ಮೀಟರ್ ಎತ್ತರದ ಶಿವಲಿಂಗವಿದೆ. ದೂರ ದೂರದ ಊರಿಂದ ದೇವರ ದರ್ಶನ ಪಡೆಯಲು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಈ ಶಿವ ದೇವಾಲಯದಲ್ಲಿ ಶಿವನಿಗೆ ಪೂಜೆ ಯಾಕೆ ನಡೆಯುತ್ತಿಲ್ಲ ?

ಈ ಗ್ರಾಮದಲ್ಲಿ ಒಬ್ಬ ಶಿಲ್ಪಿಯು ವಾಸವಾಗಿದ್ದ, ಅವನು ದೊಡ್ಡ ದೊಡ್ಡ ಕಲ್ಲನ್ನು ಉಪಯೋಗಿಸಿ ಮೂರ್ತಿ ಕೆತ್ತುವುದೇ ಅವನ ದಿನನಿತ್ಯದ ಕೆಲಸವಾಗಿತ್ತು. ಒಂದು ದಿನ ಇದ್ದಕ್ಕಿದ್ದಂತೆ ಕೆಲಸದಲ್ಲಿ ನಿರತನಾಗಿದ್ದ ನಿರತನಾಗಿದ್ದಾಗ ಅಪಘಾತ ಸಂಭವಿಸಿ ಅವನ ಒಂದು ಕೈ ಮುರಿದುಹೋಗಿತ್ತು .

 

 

ಅವನನ್ನು ಊರಿನವರೆಲ್ಲರೂ ಒಂದು ಕೈ ಇರುವವನು, ಒಂದು ಕೈಯವ ಇವನಿಂದೇನು ಸಾಧ್ಯ? ಎಂದು ತಮಾಷೆ ಮಾಡಲು ಪ್ರಾರಂಭಿಸಿದರು. ದಿನ ಕಳೆದಂತೆ ಗ್ರಾಮಸ್ಥರು ಮಾಡುವ ಅಪಹಾಸ್ಯ ಹೆಚ್ಚಾಗಿತ್ತು .ಬೇಸರಗೊಂಡ ಶಿಲ್ಪಿ ಈ ಗ್ರಾಮದಲ್ಲಿ ಇನ್ನು ನಾನು ಉಳಿಯಲಾರೆ ಎಂದು ಶಪಥ ಮಾಡುತ್ತಾ ಗ್ರಾಮ ಬಿಟ್ಟು ಬಂದನು .

 

ಅದೇ ದಿನ ರಾತ್ರಿ ಆ ಗ್ರಾಮದ ಹತ್ತಿರದಲ್ಲಿರುವ ಗುಡ್ಡದ ಮೇಲಿನ ಏಕ ಶಿಲೆಯ ಮೇಲೆ ಶಿಲ್ಪಿ ಚಿಂತಾ ಚಿಂತಿತನಾಗಿ ಕುಳಿತಿದ್ದ. ಇದ್ದಕ್ಕಿದ್ದಂತೆ ಅದೇ ಶಿಲೆಯಲ್ಲಿ ದೇವಸ್ಥಾನ ಕೆತ್ತಿ ಅಪಹಾಸ್ಯ ಮಾಡಿದ ಗ್ರಾಮಸ್ಥರಿಗೆ ನನ್ನ ಸಾಮರ್ಥ್ಯ ತೋರಿಸಬೇಕು ಎಂದು ಅಂದುಕೊಂಡು ಕೆಲಸ ಪ್ರಾರಂಭಿಸಿದ. ಒಂದೇ ದಿನ ರಾತ್ರಿ ಕೆಲಸ ಮುಗಿಸಿದ ಆತ ಅದ್ಭುತವಾದ ಮಂದಿರವೊಂದನ್ನು ಕೂಪದಲ್ಲೇ ಕೆತ್ತಿ ಹಾಕಿ ಅಲ್ಲಿಂದ ಹೊರಟು ಹೋಗಿದ್ದ.
ಮರುದಿನ ಒಬ್ಬ ಗ್ರಾಮಸ್ಥನು ಬಂದು ನೋಡಿದಾಗ ಅಲ್ಲಿ ಇದ್ದಕ್ಕಿದ್ದಂತೆ ದೇವಸ್ಥಾನ ಪ್ರತ್ಯಕ್ಷ ವಾಗಿರುವುದನ್ನು ನೋಡಿದ.ಅವನು ಹೋಗಿ ಇತರ ಗ್ರಾಮಸ್ಥರಿಗೆ ಈ ಅಚ್ಚರಿಯ ವಿಷಯ ತಿಳಿಸಿದ ನಂತರ, ಆ ಗ್ರಾಮಸ್ಥರಿಗೆ ಈ ಶಿಲ್ಪಿಯ ಅದ್ಭುತ ಶಕ್ತಿ ಅರಿವಾಗಿ ಅವನನ್ನು ಹುಡುಕಲು ಪ್ರಾರಂಭಿಸಿದರು. ಆದರೆ ಕಾಲ ಮಿಂಚಿಹೋಗಿತ್ತು, ಶಿಲ್ಪಿ ಊರು ಬಿಟ್ಟು ಮರೆಯಾಗಿದ್ದ, ಗ್ರಾಮಸ್ಥರು ಹುಡುಕಿ ಹುಡುಗಿ ಹತಾಶರಾದರು.

 

 

ಗ್ರಾಮಸ್ಥರು ಸ್ಥಳೀಯ ಪುರೋಹಿತರನ್ನು ಪೂಜೆ ಮಾಡುವಂತೆ ಕೇಳಿಕೊಂಡಾಗ ಅವರು ಶಿವಲಿಂಗದ ರೂಪ ಕುರೂಪಿಯಾಗಿದೆ. ಆದ್ದರಿಂದ ಪೂಜೆ ಮಾಡಿದರೆ ಫಲ ಪ್ರಾಪ್ತಿಯಾಗುವ ಬದಲು ನಷ್ಟವೇ ಹೆಚ್ಚಾಗುತ್ತದೆ ಎಂದರು. ಆ ಒಂದೇ ಒಂದು ಕಾರಣದಿಂದ ಇಂದಿಗೂ ಇಲ್ಲಿ ಪೂಜೆ, ಅರ್ಚನೆ, ಪ್ರಾರ್ಥನೆಗಳು ನಡೆಯುವುದಿಲ್ಲ. ಪೂಜೆ ನಡೆಯದಿದ್ದರೂ ಸಹ ಅಲ್ಲಿರುವ ಶಿವನ ಕಾಣಿಕೆಗೆ ಏನು ಕಡಿಮೆಯಿಲ್ಲ,ಶಿವನ ಮಹಿಮೆ ಅಪಾರವಾದದ್ದು, ದಿನವೊಂದಕ್ಕೆ ಐದು ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ಶಿವನ ದರ್ಶನ ಮಾಡಿ, ಶಿವನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಭಕ್ತಿಯಿಂದ ಬೇಡಿದರೆ ಬೇಡಿದ್ದನ್ನು ಶಿವ ಅನುಗ್ರಹಿಸುತ್ತಾನೆ ಎಂಬ ನಂಬಿಕೆಯೂ ಇಲ್ಲಿನ ಭಕ್ತರಲ್ಲಿದೆ. ಭಗವಂತನ ಪ್ರಕೃತಿಯ ಹಾಗೂ ಮನುಷ್ಯರ ಅಪೂರ್ವ ಸಂಗಮ ದಾಖಲೆಗೆ ಈ ದೇವಾಲಯ ಸಾಕ್ಷಿಯಾಗಿದೆ.

 

 

ಅದೆಷ್ಟೂ ಆದ್ಭುತ ಹಿನ್ನೆಲೆಯಿರುವ ಈ ದೇವಸ್ಥಾನ ನಂಬಲು ಅಸಾಧ್ಯವಾದರೂ ಸಹ, ನಿಜ ಹಾಗೂ ಅಚ್ಚರಿಯ ಸಂಗತಿಯಾಗಿದೆ . ಹಿಂದೂಗಳ ಪ್ರತಿಷ್ಟೆ ಹಾಗೂ ಗೌರವಕ್ಕೆ ಅದರದ್ದೇ ಆದಂತಹ ಐತಿಹಾಸಿಕ ಹಿನ್ನೆಲೆ ಇರುತ್ತದೆ. ಇಂತಹ ವಿಶೇಷತೆಯನ್ನು ಒಳಗೊಂಡಿರುವ ದೇವಭೂಮಿ ನಮ್ಮ ಪವಿತ್ರ ಭಾರತಕ್ಕೆ ಸಹಸ್ರ ಸಹಸ್ರ ನಮನಗಳನ್ನು ಸಲ್ಲಿಸುವುದರ ಜೊತೆಗೆ ಅವಕಾಶ ಸಿಕ್ಕರೆ ಈ ವಿಶೇಷ ದೇವಾಲಯದಲ್ಲಿರುವ ಶಿವನ ದರ್ಶನ ಮಾಡಿ ಭಕ್ತಿಯನ್ನು ಸಂಪಾದಿಸೋಣ.ಶಿವನು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top