fbpx
ಸಮಾಚಾರ

“ಮುಸ್ಲಿಮರು ದೇಶವನ್ನು ಬಿಟ್ಟು ಹೋಗಬೇಕು”- ಬಿಜೆಪಿ ಸಂಸದ ವಿನಯ್ ಕಟಿಯಾರ್ ಹೇಳಿಕೆ!

“ಮುಸ್ಲಿಮರು ದೇಶವನ್ನು ಬಿಟ್ಟು ಹೋಗಬೇಕು”- ಬಿಜೆಪಿ ಸಂಸದ ವಿನಯ್ ಕಟಿಯಾರ್ ಹೇಳಿಕೆ!

 

 

‘ಮುಸ್ಲಿಮರಿಗೆ ಈ ದೇಶದಲ್ಲಿ ಜಾಗವಿಲ್ಲ; ಅವರು ಪಾಕಿಸ್ತಾನಕ್ಕೋ, ಬಾಂಗ್ಲಾದೇಶಕ್ಕೋ ಹೋಗಲಿ’ ಎಂದು ಬಿಜೆಪಿ ಸಂಸದ ವಿನಯ್‌ ಕಟಿಯಾರ್‌ ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ವಿಶ್ವ ಹಿಂದೂಪರಿಷತ್‌ನ ಯುವ ಘಟಕ ಬಜರಂಗದ ಸಂಸ್ಥಾಪಕರಾಗಿರುವ ಕಟಿಯಾರ್ ಸ್ವತಂತ್ರ ಬಂದಾಗ ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸಲಾಗಿದೆ ಹಾಗಾಗಿ ಮುಸ್ಲಿಮರು ತಮ್ಮ ದೇಶಗಳಿಗೆ ಹೋಗಬೇಕು ಎಂದು ತಮ್ಮ ಇತ್ತೀಚಿನ ಭಾಷಣದಲ್ಲಿ ಹೇಳಿದ್ದಾರೆ.

 

 

“ಮುಸ್ಲಿಮರು ಈ ದೇಶದಲ್ಲಿ ವಾಸಿಸಲು ಅವಕಾಶ ನೀಡಬಾರದು. ತಮ್ಮ ಜನಸಂಖ್ಯೆ ಆಧರಿಸಿ ಪ್ರತ್ಯೇಕ ದೇಶವನ್ನು ನೀಡಲಾಗಿದೆ ಇಷ್ಟಾದ ಮೇಲೂ ಅವರು ಭಾರತದಲ್ಲೇಕೆ ವಾಸಿಸಬೇಕು? ಅವರ ಧರ್ಮದವರಿಗೆ ಪ್ರತ್ಯೇಕ ದೇಶವನ್ನೇ ನೀಡಲಾಗಿದೆ. ಅವರು ಪಾಕಿಸ್ತಾನಕ್ಕೋ, ಅಥವಾ ಬಾಂಗ್ಲಾದೇಶಕ್ಕೋ ಹೋಗಬೇಕು. ಇವರಿಗೆ ಈ ದೇಶದಲ್ಲೇನು ಕೆಲಸ? ನಮ್ಮ ದೇಶದಲ್ಲಿ ಯಾವ ಕೆಲಸವನ್ನು ಅವರು ಮಾಡುತ್ತಿದ್ದಾರೋ, ಅದೇ ಕೆಲಸವನ್ನು ಅವರು ಅಲ್ಲಿಯೇ ಮಾಡಲಿ.” ಎಂದು ಕಟಿಯಾರ್‌ ಕಿಡಿ ಕಾರಿದ್ದಾರೆ.

ಆಲ್ ಇಂಡಿಯಾ ಮಜ್ಲಿಸ್ ಇತ್ತೆಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಅಸಾದುದ್ದೀನ್ ಒವೈಸಿ ನೆನ್ನೆ ಲೋಕಸಭೆಯಲ್ಲಿ “ಸ್ವತಂತ್ರ ಸಿಕ್ಕಿದ 70 ವರ್ಷಗಳ ನಂತರವೂ ಭಾರತದ ಮುಸ್ಲಿಮರನ್ನು ‘ಪಾಕಿಸ್ತಾನಿ’ ಎಂದು ಯಾಕೆ ಕರೆಯಲಾಗುತ್ತಿದೆ..? ಭಾರತೀಯ ಮುಸ್ಲಿಮರನ್ನು ‘ಪಾಕಿಸ್ತಾನಿ’ ಎಂದು ಕರೆಯುವವರನ್ನು ಮೂರು ವರ್ಷ ಜೈಲಿಗೆ ಕಳುಹಿಸುವಂತಹ ಕಠಿಣ ಕಾನೂನು ರೂಪಿಸಬೇಕು” ಎಂದು ಆಗ್ರಹಿಸಿದ್ದರು

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top