fbpx
ಸಿನಿಮಾ

ರಮ್ಯ ಫೇಕ್ ಐ.ಡಿ ಪಾಠ , ಟ್ವಿಟ್ಟರ್ ನಲ್ಲಿ ರಮ್ಯ ವಿರುದ್ಧ ಅಬ್ಬರಿಸಿದ ಜಗ್ಗೇಶ್

 

ಕಾಂಗ್ರೆಸ್​​​ನ ಸಾಮಾಜಿಕ ಜಾಲತಾಣದ ಹಾಗೂ ಸಂವಹನ ಘಟಕದ ಮುಖ್ಯಸ್ಥೆ ರಮ್ಯಾ ಫೇಸ್‌ಬುಕ್‌, ಟ್ವಿಟರ್‌ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ‘ಫೇಕ್‌’ ಅಕೌಂಟ್‌ ಬಗ್ಗೆ ತಮ್ಮ ಕಾರ್ಯಕರ್ತರಿಗೆ ಉಪದೇಶ ನೀಡಿರುವ ವಿಡಿಯೊ ಹೊರಬಿದ್ದಿದ್ದು ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್‌ ಆಗಿದೆ. ಈ ಮೂಲಕ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಫೇಕು’ ಎಂದು ನಿಂದಿಸಿದ್ದ ರಮ್ಯಾ ಈಗ ತಾವೇ ಫೇಕ್‌ ವಿವಾದದಲ್ಲಿ ಸಿಕ್ಕಿ ಬಿದ್ದಿ ಪೇಚಿಗೆ ಸಿಲುಕಿದ್ದಾರೆ.

ಕಳೆದ ವಾರ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಾಗಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ರಮ್ಯಾ ಪಾಠ ಮಾಡಿದ್ದಾರೆ. ಆ ವೇಳೆ ಕಾರ್ಯಕರ್ತರೊಬ್ಬರು ಫೇಸ್‍ಬುಕ್ ಫೇಕ್ ಅಕೌಂಟ್ ಬಗ್ಗೆ ಕೇಳಿದ ಪ್ರಶ್ನೆಗೆ ರಮ್ಯಾ, “ಒಬ್ಬರಿಗೆ ಮೂರು ನಾಲ್ಕು ಅಕೌಂಟ್ ಗಳಿದ್ದರೆ ತಪ್ಪೇನಿಲ್ಲ. ಆದರೆ ಫೇಕ್ ಅಕೌಂಟ್ ಅಂದ್ರೆ ರೋಬಾಟ್ಸ್. ಅದು ಮಷೀನ್, ಮನುಷ್ಯ ಅಲ್ಲ. ಆದ್ರೆ ಒಬ್ಬರಿಗೆ ಅನೇಕ ಅಕೌಂಟ್ ಇಟ್ಕೋಬೋದು ಅದ್ರಲ್ಲಿ ಏನೂ ತಪ್ಪಿಲ್ಲ ಎಂದು ಉತ್ತರಿಸಿದ್ದರು.”

 

 

ರಮ್ಯಾ ಅವರ ಫೇಕ್ ಅಕೌಂಟ್ ಉಪದೇಶವನ್ನ ಅವರ ಬಾಯಲ್ಲೇ ಕೇಳಿ.

 

 

ಇನ್ನು ಈ ವಿಡಿಯೋ ವೈರಲ್ ಆಗಿದ್ದೆ ತಡ ನವರಸ ನಾಯಕ ಜಗ್ಗೇಶ್ ರಮ್ಯ ವಿರುದ್ಧ ಹರಿಹಾಯ್ದಿದ್ದಾರೆ .

ನವರಸ ನಾಯಕ ಜಗ್ಗೇಶ್, ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಮಧ್ಯೆಯ ಟ್ವಿಟ್ಟರ್ ವಾರ್ ಮುಂದುವರೆದಿದ್ದು

ಟ್ವಿಟ್ ೧

 

ಇದು ಫೇಕ್‍ಗಳನ್ನು ತಯಾರಿಸಿ ವೈರಲ್ ಮಾಡಿ ಬದಕೋ ಫೇಕ್‍ಗಳು. ಇನ್ಮುಂದೆ ನಿಮ್ ಆಟ ಬಂದ್. ಮಹಾಜನತೆಗೆ ಅರಿವಾಯಿತು ಫೇಕ್ ನಾಟಕ ಕಂಪನಿ ಎಂದು ಟಾಂಗ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಕೆಲವರಿಗೆ ಮರ್ಮಕಲೆಯ ಹೆಣ್ಣಿನ ಮುಖವಾಡದ ಮಗಳು ಬೇಕಂತೆ. ಏನ್ ಕರ್ಮ ರೀ ಈ ದೇಶ ಎಂದು ನಟ ಬೇಸರ ವ್ಯಕ್ತಪಡಿಸಿದ್ದಾರೆ.

ಟ್ವಿಟ್ ೨

 

 

Fake account ತುಕಾಲಿಗಳಿಗೆ ಏನ್ರಿ ಗೊತ್ತು ನನ್ನ ದೇವರ ಸಂಬಂಧ..! ಮಾಯಾಂಗನೆ ಮಾರ್ಗದರ್ಶನ ಇದು!
ಅಂಬರೀಶರನ್ನ stage ಇಂದ ಯುವರಾಜನಿಗೆ signal ಕೊಟ್ಟು ತಳ್ಳಿಸಿದ ಮಹನೀಯಳು!ಅಂಬರೀಶ್ ಭಕ್ತರು ಯಾಕ್ ಇನ್ನು ಸುಮ್ಮನಿದ್ದಾರೆ ಗೊತ್ತಿಲ್ಲಾ!!

 

ಟ್ವಿಟ್ ೩

 

ಕೆಲವರಿಗೆ ಮರ್ಮಕಲೆಯ ಹೆಣ್ಣಿನ ಮುಖವಾಡದ ಮಗಳು ಬೇಕಂತೆ! Catch officer! ಎನ್ ಕರ್ಮ ರೀ ಈ ದೇಶ.. ಅದಕ್ಕೆ ಇವತ್ತು ಅನೇಕ ಕುಟುಂಬಗಳು fake ವರದಕ್ಷಿಣೆ caseಯಿಂದ ಅಮಾಯಕ ಗಂಡ ತಂದೆತಾಯಿ ಜೈಲುಭಾಗ್ಯ ಪಡೆಯುತ್ತಿದ್ದಾರೆ!

 

ಟ್ವಿಟ್ ೪

 

ಇದು fakeಗಳನ್ನ ತಯಾರಿಸಿ viral ಮಾಡಿ ಬದುಕೋ fakeಗಳು!
ಇನ್ಮುಂದೆ ನಿಮ್ ಆಟ ಬಂದ್!
ಮಹಾಜನತೆಗೆ ಅರಿವಾಯಿತು fake ನಾಟಕ ಕಂಪನಿ!

 

ಟ್ವಿಟ್ ೫

ನೋಡಿ ಕನ್ನಡಿಗರ ಕಣ್ಮಣಿ #ಮಂಡ್ಯದಗಂಡ ನ್ನ ಮಾಯಾಂಗನೆ ಮರ್ಮಕಲೆಯಿಂದ ಹೇಗೆ ತಳ್ಳಿಸುತ್ತಾಳೆ! ಸ್ವಾಭಿಮಾನಿ ಕನ್ನಡಿಗರಾದರೆ ಕೊಡಿ ಉತ್ತರ!
ಇಂತವರಿಗೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top