fbpx
ಹೆಚ್ಚಿನ

ತನ್ನ ಪ್ರಾಣ ಒತ್ತೆ ಇಟ್ಟು 925 ಕೋಟಿ ರೂ. ದರೋಡೆ ಯತ್ನ ವಿಫಲಗೊಳಿಸಿದ ಪೇದೆಗೆ ಅಭಿನಂದನೆಯ ಮಹಾಪೂರ

ತನ್ನ ಪ್ರಾಣ ಒತ್ತೆ ಇಟ್ಟು 925 ಕೋಟಿ ರೂ. ದರೋಡೆ ಯತ್ನ ವಿಫಲಗೊಳಿಸಿದ ಪೇದೆಗೆ ಅಭಿನಂದನೆಯ ಮಹಾಪೂರ

 

ಭದ್ರತಾ ಸಿಬ್ಬಂದಿಯೊಬ್ಬರು ಆಕ್ಸಿಸ್ ಬ್ಯಾಂಕ್ ನಲ್ಲಿ ನಡೆಯುತ್ತಿದ್ದ ದೊಡ್ಡ ಲೂಟಿಯನ್ನು ತಡೆದ ಘಟನೆ ರಾಜಸ್ಥಾನ ರಾಜ್ಯದ ಜೈಪುರ್‍ ನಗರದಲ್ಲಿ ನಡೆದಿದೆ. 27 ವಯಸ್ಸಿನ ಸೀತಾರಾಮ ಎಂಬ ಪೇದೆ ಈ ದರೋಡೆಯನ್ನು ತಡೆದಿದ್ದಾರೆ. ಆಕ್ಸಿಸ್ ಬ್ಯಾಂಕಿನಲ್ಲಿದ್ದ ಖಜಾನೆಯಲ್ಲಿರುವ ನೂರಾರು ಕೋಟಿ ರುಪಾಯಿ ಕದ್ದು ಪರಾರಿಯಾಗಲು ಹಪಹಪಿಸುತ್ತಿದ್ದ 12 ಮಂದಿ ಮುಸುಕುಧಾರಿ ಕಳ್ಳರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತಾವು ಬಂದಿದ್ದ ಕಾರಿನಲ್ಲಿ ವಾಪಸ್‌ ಹೋಗಿದ್ದಾರೆ. ಬ್ಯಾಂಕ್ ನಲ್ಲಿ 925 ಕೋಟಿ ರೂಪಾಯಿ ಇತ್ತು ಎಂದು ತಿಳಿದು ಬಂದಿದೆ.

 

ಮಂಗಳವಾರ ಮುಂಜಾನೆ ಸಮಯದಲ್ಲಿ ಬ್ಯಾಂಕ್‌ ಕಳ್ಳತನ ಮಾಡಲು ಆಗಮಿಸಿದ 12 ಮಂದಿ ಮುಸುಕುಧಾರಿಗಳು ಜೈಪುರದಲ್ಲಿರುವ ಆ್ಯಕ್ಸಿಸ್‌ ಬ್ಯಾಂಕ್‌ನ ಸೆಕ್ಯೂರಿಟಿ ಗಾರ್ಡ್ ನನ್ನು ಕಟ್ಟಿಹಾಕಿ, ಬ್ಯಾಂಕಿನ ಬೀಗದ ಕೈ ಕೊಡುವಂತೆ ಪೀಡಿಸಿದರು. ಆದರೆ, ಭದ್ರತಾ ಸಿಬ್ಬಂದಿ ಇದಕ್ಕೆ ಒಪ್ಪಲಿಲ್ಲ .

 

 

ಬ್ಯಾಂಕ್ ಒಳಗಡೆ ಇದ್ದ ಪೇದೆ, ದರೋಡೆಕೋರರು ಶಟರ್ ಮುರಿಟ್ಟಿದ್ದನ್ನು ಗಮನಿಸಿ ದರೋಡೆಕೋರರು ಒಳಗೆ ಬರದಂತೆ ಎದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು ಗುಂಡು ಹಾರಿಸಿದರು. ಕೂಡಲೇ ಪೇದೆ ಪೊಲೀಸರಿಗೆ ಮಾಹಿತಿ ರವಾನಿಸಿದರು ಇದರಿಂದ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಇದರಿಂದ ಗಾಬರಿಗೊಂಡ ದರೋಡೆಕೋರರು ಕೂಡಲೇ ಅಲ್ಲಿಂದ ಕಾಲ್ಕಿತ್ತರು. ಧರೋಡೆಕೋರರ ಹುಡುಕಾಟಕ್ಕಾಗಿ ಬಲೆ ಬಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

 

 

ಪೇದೆಯ ದಿಟ್ಟತನಕ್ಕೆ ಬ್ಯಾಂಕ್ ಅಧಿಕಾರಿಗಳು ಹಾಗು ಪೊಲೀಸ್ ಅಧಿಕಾರಿಗಳಿಂದ ಪ್ರಶಂಸನೆ ವ್ಯಕ್ತವಾಗಿದೆ. ಪೇದೆ ತೋರಿದ ದಿಟ್ಟತನದಿಂದ ಕೋಟ್ಯಂತರ ರೂಪಾಯಿ ಹಣ ಉಳಿದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top