fbpx
ಸಿನಿಮಾ

ಗಡ್ಡಪ್ಪ ದುನಿಯಾ ವಿಜಯಗೆ ಏನಂದ್ರು.. ‘ಜಾನಿ ಜಾನಿ ಎಸ್ ಪಪ್ಪಾ’ ಬಗ್ಗೆ ಗಡ್ಡಪ್ಪ ನುಡಿದ ಭವಿಷ್ಯವೇನು ಗೊತ್ತ.

ಗಡಪ್ಪ ದುನಿಯಾ ವಿಜಯಗೆ ಏನಂದ್ರು.. ‘ಜಾನಿ ಜಾನಿ ಎಸ್ ಪಪ್ಪಾ’ ಬಗ್ಗೆ ಗಡಪ್ಪ ನುಡಿದ ಭವಿಷ್ಯವೇನು ಗೊತ್ತ.

ದುನಿಯಾ ವಿಜಯ್ ಮತ್ತು ಬೆಡಗಿ ರಚಿತಾ ರಾಮ್ ಒಟ್ಟಿಗೆ ನಟನೆ ಮಾಡುತ್ತಿರುವ ‘ಜಾನಿ ಜಾನಿ ಎಸ್ ಪಪ್ಪಾ’ ಚಿತ್ರದ ಎರಡು ಟೀಸರ್ ಬಿಡುಗಡೆ ಆಗಿದೆ, ಯೂಟ್ಯೂಬ್ ನಲ್ಲಿ ಎರಡು ಟೀಸರ್ ಗಳು ಸಖತ್ ಸದ್ದು ಮಾಡುತ್ತಿವೆ. ದುನಿಯಾ ವಿಜಯ್ ಜನುಮ ದಿನದಂದು ಮೊದಲನೇ ಟೀಸರ್ ಬಿಡುಗಡೆ ಆಗಿತ್ತು. ಈಗ ಎರಡನೇ ಟೀಸರ್ ಬಿಡುಗಡೆ ಆಗಿದೆ.

 

 

ಎರಡನೇ ಟೀಸರ್ ನಲ್ಲಿ ಒಂದು ವಿಶೇಷತೆ ಇದೆ. ಟೀಸರ್ ನಲ್ಲಿ ತಿಥಿ ಚಿತ್ರದ ಗಡಪ್ಪ ಎಂಟ್ರಿ ಕೊಟ್ಟಿದ್ದಾರೆ. ನಿರ್ದೇಶಕ ಪ್ರೀತಂ ಗುಬ್ಬಿ ಹಾಗು ಗಡ್ಡಪ್ಪನ ಮಧ್ಯೆ ನಡೆಯುವ ಸ್ವಾರಸ್ಯಕರವಾದ ಸಂಭಾಷಣೆಯೇ ಈ ಟೀಸರ್. ಚಿತ್ರದ ಕುರಿತು ಮಾತನಾಡಿದ ಗಡಪ್ಪ ಯಾವುದು ಸಿನಿಮಾ ಎನ್ನುತ್ತಾರೆ. ಗುಬ್ಬಿ ಅವರು “ಜಾನಿ ಜಾನಿ ಎಸ ಪಪ್ಪಾ” ಎನ್ನುತ್ತಾರೆ. ಯಾರು ಹೀರೋ ಎಂದಾಗ ನಿರ್ದೇಶಕ ಪ್ರೀತಂ ಗುಬ್ಬಿ ದುನಿಯಾ ವಿಜಯ ಎನ್ನುತ್ತಾರೆ. ಅದಕ್ಕೆ ಪ್ರತಿಯಾಗಿ ಗಡಪ್ಪ ಓ ಆ ಕರಿಯನ ಎನ್ನುತ್ತಾರೆ. ಯಾರಲ ಹೊಸ ಪದ್ಮಾವತಿ ಎಂದು ಗಡಪ್ಪ ಕೇಳಿದಾಗ ಗುಬ್ಬಿ ಅವರು ರಚಿತಾ ರಾಮ, ನಮ ಕತ್ರಿಗುಪ್ಪೆ ಹುಡುಗಿ ಎಂದು ಉತ್ತರಿಸುತ್ತಾರೆ.

 

 

ಬಹು ನಿರೀಕ್ಷಿತ ಚಿತ್ರವಾಗಿರುವ “ಜಾನಿ ಜಾನಿ ಎಸ್ ಪಪ್ಪಾ” ಬಿಡುಗಡೆ ದಿನಾಂಕವನ್ನು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. 2018 ರಲ್ಲಿ ದುನಿಯಾ ವಿಜಯ ಅಭಿಮಾನಿಗಳಲ್ಲೂ ಹೇಗೆ ಮೋದಿ ಮಾಡಲಿದ್ದಾರೆ ಎಂದು ಕಾಡು ನೋಡಬೇಕಾಗಿದೆ. ನಿರ್ದೇಶಕ ಪ್ರೀತಂ ಗುಬ್ಬಿ ನಿರಂತರವಾಗಿ ಕೆಲಸ ಮಾಡುತ್ತ ಚಿತ್ರ ಚೆನ್ನಾಗಿ ಮೂಡಿ ಬರಲು ಸಕಲ ಪ್ರಯತ್ನ ಮಾಡುತ್ತಿದ್ದಾರೆ.

 

 

ಈಗ ಪ್ರೀತಂ ಗುಬ್ಬಿ ಅವರು ನಿರ್ದೇಶನ ಮಾಡುತ್ತಿರುವ ‘ಜಾನಿ ಜಾನಿ ಎಸ್ ಪಪ್ಪಾ’ ಚಿತ್ರದಲ್ಲಿ ದುನಿಯಾ ವಿಜಯ ಅವರ ಜೊತೆ ನಟನೆ ಮಾಡುತ್ತಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ನಿರ್ದೇಶಕ ಪ್ರೀತಂ ಗುಬ್ಬಿ ಪ್ರಥಮ ಬಾರಿಗೆ ರಚಿತಾ ರಾಮ ವಾಯ್ಸ್ ಡಬ್ಬಿಂಗ್ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಚಿತ್ರದ ಟೀಸರ್ ನೋಡಿ:

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top