fbpx
ಮನೋರಂಜನೆ

ಪಡ್ಡೆಗಳ ನಿದ್ದೆಗೆಡಿಸಿದ್ದ ಜೀನತ್ ಅಮಾನ್ ಪಾಡು ಯಾಕೆ ಹೀಗಾಯ್ತು?

 

 

ಒಂದು ಕಾಲಕ್ಕೆ ಜೀನಿ ಬೇಬಿ ಆಗಿ ಪಡ್ಡೆಗಳ ನಿದ್ದೆಗೆಡಿಸಿದ್ದ ಜೀನತ್ ಅಮಾನ್ ಇಂದು ೬೮ರ ಅಜ್ಜಿ. ಮರ ಮುಪ್ಪಾದರೇನು ಹುಳಿ ಮುಪ್ಪೇ ಎಂಬಂತೆ, ಈ ಅಜ್ಜಿಗೂ ಅವನ್ಯಾರೋ ಅಮರ್ ಖನ್ನಾ ಎಂಬ ಹೆಣ್ಣುಬಾಕ ಲೈಂಗಿಕ ಕಿರುಕುಳ ನೀಡಿದನಂತೆ. ಉದ್ಯಮಿಯಾಗಿರುವ ಈತನಿಗೆ ಮದುವೆಯಾಗಲು ಅದೇನು ಕಷ್ಟವಿತ್ತೋ ಗೊತ್ತಿಲ್ಲ. ಎಲ್ಲಾ ಬಿಟ್ಟು ಈ ಜೀನತ್ ಗೆ ಕಾಡಿದನಂತೆ. ಹಾಗೆಂದು ಈ ಸ್ವತಃ ಜೀನತ್ ಹೇಳಿಕೊಂಡು ಗೋಳಾಡಿದ್ದಾಳೆ.

 

 

1-2 ದಿನವಾಗಿದ್ದರೆ ಹಾಳಾಗಿ ಹೋಗಲಿ ಎನ್ನಬಹುದಿತ್ತು. ಆದರೆ ಹಲವು ತಿಂಗಳಿಂದಲೂ ಓಲ್ಡ್ ’ಮಾಡೆಲ್’ ಅಜ್ಜಿಗೆ ಡೌ ಹೊಡೆಯುತ್ತಿದ್ದನಂತೆ. ಅಸಭ್ಯವಾಗಿ ವರ್ತಿಸುತ್ತಿದ್ದನಂತೆ. ಜೀನಿ ಅಜ್ಜಿ ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ಸೆಕ್ಷನ್ ೩೦೪ ಮತ್ತು ೫೦೯ರ ಅಡಿ ಪ್ರಕರಣ ದಾಖಲಿಸಿದ್ದಾಳೆ. ಈ ಅಜ್ಜಿ ದೂರು ದಾಖಲಿಸುತ್ತಿದ್ದಂತೆ, ಆರೋಪಿ ಖನ್ನ ಹೇಳದೆ, ಕೇಳದೆ ಪರಾರಿಯಾಗಿದ್ದಾನೆಂಬ ಸುದ್ದಿ ಹೊರ ಬಂದಿದೆ.

 

 

ಈ ವಿಚಾರದಲ್ಲಿ ಅಂತೆಕಂತೆಗಳ ಮೇಲಾಟ ನಡೆದಿದೆ. ಇಬ್ಬರೂ ಕೂಡಿ ಚಿತ್ರವೊಂದನ್ನು ಮಾಡಲು ಹೊರಟಿದ್ದರಂತೆ. ಆದರೆ ಹಣೆಬರಹ-ಹಣಸಂಗ್ರಹ ನೆಟ್ಟಗಾಗಗಲಿಲ್ಲವಂತೆ. ಹೀಗಾಗಿ ಇಬ್ಬರೂ ದೂರ ದೂರವಾದರಂತೆ. ಖನ್ನ ಈಕೆಯನ್ನು ಬಾಯಿಗೆ ಬಂದಂತೆ ನಿಂದಿಸಿದನೇ ಹೊರತು ದೈಹಿಕವಾಗಿ ಈಕೆಯನ್ನು ಪೀಡಿಸಲಿಲ್ಲವಂತೆ. ಇದ್ದ ರೊಕ್ಕ ಎಲ್ಲಾ ಕಳೆದುಕೊಂಡು ಬಡವಾಗಿರುವ ಈ ಅಜ್ಜಿ ಬ್ಲಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾಳೆಂದು ಹೇಳಲಾಗುತ್ತಿದೆ!

 

 

ಇದೆಲ್ಲಾ ಸತ್ಯವಾ? ಅನ್ನೋದು ಪ್ರಶ್ನೆ ಸಹಜ. ಆದರೆ ನಿಖರ ಉತ್ತರ ಸತ್ಯಂ, ಶಿವಂ, ಸುಂದರಂ ಆಣೆಗೂ ಗೊತ್ತಿಲ್ಲ!

ಆದರೆ ಒಂದಂತೂ ನಿಜ. ಆರಂಭದ ದಿನಗಳಲ್ಲಿ ಮುಂದಿನ ಬದುಕನ್ನು ಯೋಚಿಸದ ಸಿನಿಮಾ ನಟಿಯರು, ನೃತ್ಯಗಾರ್ತಿಯರು ವಯಸ್ಸಾಗುತ್ತಿದ್ದಂತೇ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕು ನೋಡಿ. ಆ ಕಾಲದಲ್ಲಿ ಕುಣಿದು ಕುಪ್ಪಳಿಸಿದ ಅನೇಕ ಡ್ಯಾನ್ಸರುಗಳ ಪಾಡು ಹೀಗೇ ನರಕವಾಗಿದೆ. ಅನೇಕರು ಸತ್ತೇ ಹೋಗಿದ್ದಾರೆ. ಹಿಂದಿ ಚಿತ್ರರಂಗದ ಇತಿಹಾಸದ ಪಳೆಯುಳಿಕೆಯಂತಿರುವ ಜೀನತ್ ಅಮಾನ್ ಕೂಡಾ ಅದಕ್ಕೆ ಹೊರತಾಗಿಲ್ಲ.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top