fbpx
ಮನೋರಂಜನೆ

ಬಾಲಿವುಡ್ ಚಿತ್ರಗಳಿಗೆ ನಾಯಕನಾಗ್ತಿದ್ದಾರೆ ಸೂಪರ್ ಸ್ಟಾರ್ ಜೇಕೆ.

ಬಾಲಿವುಡ್ ಚಿತ್ರಗಳಿಗೆ ನಾಯಕನಾಗ್ತಿದ್ದಾರೆ ಸೂಪರ್ ಸ್ಟಾರ್ ಜೇಕೆ.

 

 

ಈ ಬಿಗ್‌ಬಾಸ್ ಎಂಬ ರಿಯಾಲಿಟಿ ಶೋ ಅಂದರೆ ಹಾಗೇನೆ. ಇದರ ಸದಸ್ಯರಾಗಿರುವವರು ಮನೆಯೊಳಗಿದ್ದರೂ ಸದ್ದು-ಸುದ್ದಿ, ಮನೆಯ ಹೊರಗೆ ಬಂದರೂ ಸೌಂಡು! ಒಟ್ಟಿನಲ್ಲಿ ಇವರೇ ಪ್ರಚಾರದಿಂದ ದೂರವುಳಿಯುವುದಿಲ್ಲವೋ ಅಥವಾ ಪ್ರಚಾರವೇ ಇವರಿಂದ ದೂರ ಹೋಗುವುದಿಲ್ಲವೋ ದೇವರೇ ಬಲ್ಲ. ಅದೇನೆ ಇರಲಿ, ಈಗಿನ ಸುದ್ದಿ ಎಂದರೆ ಕಳೆದ ವಾರವಷ್ಟೇ ಕನ್ನಡ ಬಿಗ್ ಬಾಸ್-೫ ಆವೃತ್ತಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದ ಕಿರುತೆರೆಯ ಸೂಪರ್ ಸ್ಟಾರ್ ಜೇಕೆಗೆ ಬಿಗ್ ಬಾಸ್ ನಂತರ ಬರುತ್ತಿರುವ ಆಫರ್ ಗಳ ಸುರಿಮಳೆ.

 

 

ಸದ್ಯ ತಮ್ಮ ಮೇ 01 ಮತ್ತು ವಾರೆಂಟ್ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಜೇಕೆ ಈ ಚಿತ್ರಗಳು ಮುಗಿದ ನಂತರ ದಯಾಳ್ ಪದ್ಮನಾಭನ್ ಅವರ ಎರಡು ಚಿತ್ರಗಳಾದ ಆ ಕರಾಳ ರಾತ್ರಿ ಮತ್ತು ಪುಟ 109 ಚಿತ್ರಗಳಲ್ಲಿ ಅಭಿನಯಿಸಲು ಸಹಿ ಮಾಡಿದ್ದಾರಂತೆ. ಇವುಗಳಿಗಿಂತ ಕುತೂಹಲಕಾರಿ ವಿಷಯವೇನೆಂದರೆ ಜೇಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ಬಾಲಿವುಡ್ ಚಿತ್ರವೊಂದಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಹಿಂದಿಯ ಸಿಯಾ ಕೆ ರಾಮ್ ಎಂಬ ಎಂಬ ಧಾರಾವಾಹಿಯಲ್ಲಿ ರಾವಣನ ಪಾತ್ರವನ್ನು ನಿರ್ವಹಿಸಿದ್ದ ಜೇಕೆ ಹಿಂದಿ ಚಿತ್ರಪ್ರೇಮಿಗಳ ಮನಸ್ಸನ್ನು ಗೆದ್ದಿದ್ದರು.

 

 

ಮಾರ್ಚ್ ಕೊನೆಯ ವೇಳೆಗೆ ಚಿತ್ರ ಆರಂಭವಾಗಲಿರುವ ಈ ಚಿತ್ರವನ್ನು 9 ವರ್ಷಗಳ ನಂತರ ರಮೇಶ್ ತಲ್ವರ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಜೇಕೆಗೆ ನಾಯಕಿಯಾಗಿ ಗೌಹರ್ ಖಾನ್ ಅನ್ನು ಸಂಪರ್ಕಿಸಲಾಗಿದೆಯಂತೆ. ಚಿತ್ರದ ಇತರ ಕಲಾವಿದರ ಆಯ್ಕೆ ನಡೆಯಬೇಕಿದ್ದು ಶೀಘ್ರದಲ್ಲೇ ಎಲ್ಲಾ ಮಾಹಿತಿ ಹೊರಬೀಳಲಿದೆಯಂತೆ. ಇದು ಒಂದು ಪಕ್ಕಾ ಕಮರ್ಷಿಯಲ್ ಮಾದರಿಯ ಬಾಲಿವುಡ್ ಸಿನಿಮಾ ಆಗಿದ್ದು ಸಿನಿಮಾಗೆ ಟೈಟಲ್ ಇನ್ನೂ ಫೈನಲ್ ಮಾಡಿಲ್ಲ.

 

ರಮೇಶ್ ತಲ್ವರ್ ಚಿತ್ರದ ಜೊತೆ ಮತ್ತೊಂದು ಹಿಂದಿ ಚಿತ್ರದ ಆಫರ್ ಕೂಡ ಜೇಕೆ ಬಳಿಗೆ ಬಂದಿದ್ದು ಅದನ್ನು ದಿನಕರ್ ಕಪೂರ್ ನಿರ್ದೇಶಿಸಲಿದ್ದಾರೆ. ಈ ಚಿತ್ರದಲ್ಲಿ ಜೇಕೆ ಕೃಷ್ಣ ಅಭಿಷೇಕ್ ಅವರ ಜೊತೆ ಪೆರೇಡ್ ಹಂಚಿಕೊಳ್ಳಲಿದ್ದಾರಂತೆ. ಇದು ಸೇರಿ ಮತ್ತೊಂದು ಹಿಂದಿ ಸಿನಿಮಾ ಮಾತುಕತೆ ಹಂತದಲ್ಲಿದೆ. ಆದರೆ ಆ ಸಿನಿಮಾಗಳಲ್ಲಿ ಭಾಗಿಯಾಗುವುದಕ್ಕೂ ಮುನ್ನ ಕನ್ನಡದ ‘ಮೇ 1’ ಮತ್ತು ‘ವಾರಂಟ್’ ಸಿನಿಮಾಗಳ ಚಿತ್ರೀಕರಣವನ್ನು ಪೂರ್ಣಗೊಳಿಸಬೇಕಿದೆ ಎಂದು ಹೇಳುತ್ತಾರೆ ಜಯರಾಮ್ ಕಾರ್ತಿಕ್.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top