fbpx
ಬಿಗ್ ಬಾಸ್

ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ ಜೂ.ನಿವೇದಿತಾಗಳ ಸೌಂಡು!

ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ ಜೂ.ನಿವೇದಿತಾಗಳ ಸೌಂಡು!

 

 

ಪ್ರತೀ ಸಲವೂ ಚಿತ್ರವಿಚಿತ್ರ ಜನರ ಜೊತೆ ಭಯಂಕರ ವಿಚಿತ್ರ ಎಲಿಮೆಂಟುಗಳನ್ನೂ ಮನೆತುಂಬಿಸಿಕೊಳ್ಳೋದು ಬಿಗ್‌ಬಾಸ್ ಮಹಿಮೆ. ಹಾಗೆಯೇ ಇತ್ತೀಚಿಗಷ್ಟೇ ಮುಗಿದ ಸೀಸನ್ 5 ಬಿಗ್ ಬಾಸ್ ನಲ್ಲಿ ಮೇಲ್ನೋಟಕ್ಕೆ ಹುಚ್ಚು ಕೆರಳಿಕೊಂಡಿರುವಂತೆ ಕಾಣಿಸೋ ಆಸಾಮಿಗಳ ಸಂಖ್ಯೆ ಕಡಿಮೆ ಇದ್ದರೂ ‘ಚಿತ್ರ ವಿಚಿತ್ರಗಳಿಗೇನೂ ಕೊರತೆಯಿಲ್ಲ.. ಅಂಥಹ ವಿಚಿತ್ರ ಕರೆಕ್ಟರ್ ಗಳಲ್ಲಿ ಮೊದಲಿಗರ‍್ಯಾರು ಅಂತೊಂದು ಪ್ರಶ್ನೆ ಇಟ್ಟರೆ ಖುದ್ದು ಪ್ರೇಕ್ಷಕರೇ ನಿಸ್ಸಂದೇಹವಾಗಿ ಮೈಸೂರು ಹುಡುಗಿ ನಿವೇದಿತಾ ಗೌಡ ಹೆಸರು ಹೇಳುತ್ತಿದ್ದರು.

ಪಕ್ಕಾ ಕನ್ನಡಿಗ ಕುಟುಂಬದಿಂದ ಬಂದಿದ್ದರೂ ಅದರಲ್ಲೂ ಮೈಸೂರಿನಲ್ಲೇ ಹುಟ್ಟಿ ಬೆಳೆದಿದ್ದರೂ “ಈ ಹುಡುಗಿ ಭಾಷೆಯಲ್ಲಿ ಮಾತ್ರ ಇಂಗ್ಲಿಶ್ ಕ್ರಾಸ್ ಬ್ರೀಡಿನಂತೆ ತಾನು ಮಾತಾಡಿದ್ದು ಕನ್ನಡವೋ ಇಂಗ್ಲಿಶೋ ಎಂಬ ಬಗ್ಗೆ ಖುದ್ದು ಆಕೆಗೇ ಸಂಶಯ ಕಾಡುವಂತೆ ವಿಚಿತ್ರವಾಗಿ ನುಲಿಯುತ್ತಾ ಮಾತಾಡೋ ಈಕೆ ಸೀಸನ್ 5 ಬಿಗ್‌ಬಾಸ್ ಶೋದ ಪ್ರಮುಖ ಆಕರ್ಶಣೆಯಾಗಿದ್ದಳು. ಆರಂಭದ ವಾರದಲ್ಲಿ ಬೀದಿಯಲ್ಲಿ ಅಡ್ಡಾಡುತ್ತಿದ್ದ ಹೆಣ್ಮಗುವೊಂದು ಮಿಠಾಯಿ ಅಂಗಡಿಗೆ ಬಂದಂತೆ ನಡೆದುಕೊಂಡಿದ್ದ ನಿವೇದಿತಾ ಗೌಡ ಚಾನೆಲ್’ನವರ ಕೃಪಾಕಟಾಕ್ಷದಿಂದ ಫೈನಲ್ ವರೆಗೂ ತಲುಪಿದ್ದರು.

 

 

ಇದೀಗ ಈ ಕಂಗ್ಲಿಶ್ ಸ್ಟಾರ್ ನಿವೇದಿತಾಳನ್ನು ಫಾಲೋ ಮಾಡುವ ಮಂದಿ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಿರುವ ನಿವೇದಿತಾಳನ್ನು ಅನುಕರಣೆ ಮಾಡಿರುವ ಪುಟ್ಟ ಮಕ್ಕಳ ವಿಡಿಯೋಗಳನ್ನೂ ವೈರಲ್ ಮಾಡಿ ಇವರು ನಿವೇದಿತಾಳ ಜೂನಿಯರ್, ಸೀನಿಯರ್ ಅಂತೆಲ್ಲಾ ಬಿಲ್ಡಪ್ ಕೊಡ್ತಿದ್ದಾರೆ. ಸರಿಗಮಪ ಕಾಣಿಸಿಕೊಂಡಿದ್ದ ಬಿಂಕದ ಸಿಂಗಾರಿ ‘ಆದ್ಯಾ’ ಸೇರಿದಂತೆ ಅನೇಕರು ನಿವೇದಿತಾಳ ಹವಾ ಭಾವ, ನುಲಿತಗಳನ್ನ ಅನುಕರಿಸಿ ಮಾಡಿರೋ ವಿಡಿಯೋಗಳಲ್ಲಿ ಕೆಲವು ಈ ಕೆಳಗಿವೆ ಒಮ್ಮೆ ನೋಡಿ ಹೊಟ್ಟೆ ತುಂಬಾ ನಕ್ಕುಬಿಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top