fbpx
ದೇವರು

ಮತ್ಸ್ಯ ಪುರಾಣದ ಪ್ರಕಾರ ಈ ದರಿದ್ರ ಅಭ್ಯಾಸಗಳನ್ನು ಬಿಡದೆ ಇದ್ದರೆ ಇಂತವರ ಮನೇಲಿ ದರಿದ್ರ ಲಕ್ಷ್ಮಿ ತಾಂಡವ ಆಡುತ್ತಾಳೆ

ಮತ್ಸ್ಯ ಪುರಾಣದ ಪ್ರಕಾರ ಈ ದರಿದ್ರ ಅಭ್ಯಾಸಗಳನ್ನು ಬಿಡದೆ ಇದ್ದರೆ ಇಂತವರ ಮನೇಲಿ ದರಿದ್ರ ಲಕ್ಷ್ಮಿ ತಾಂಡವ ಆಡುತ್ತಾಳೆ

 

ಯಶಸ್ಸು ಸಂಪತ್ತು ಗಳಿಕೆ, ಸಮೃದ್ಧಿ ಸಂಪತ್ತಿನ ಅಧಿದೇವತೆ ಲಕ್ಷ್ಮೀಯ ಪ್ರತಿನಿಧಿಗಳು.ಲೌಕಿಕದ ಆಸೆಗಳನ್ನು, ಶ್ರೀಮಂತಿಕೆಯ ಇಚ್ಚೆಗಳನ್ನು ಈಡೇರಿಸಿಕೊಳ್ಳಲು ಲಕ್ಷ್ಮೀ ಕಟಾಕ್ಷ ಮುಖ್ಯವಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮೀಯ ಸಾನಿಧ್ಯ ದೊರೆತರೆ ಜೀವನದಲ್ಲಿ ಯಶಸ್ಸು ಸಿಗುವುದು ಖಂಡಿತ ಎಂಬ ನಂಬಿಕೆ ಇದೆ.

 

 

ಆದರೆ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.ಒಮ್ಮೆ ಒಲಿಸಿಕೊಂಡರೆ ನಂತರ ಅದನ್ನು ಕಾಪಾಡಿಕೊಳ್ಳುವುದು ಮತ್ತೊಂದು ಕಷ್ಟಕರವಾದ ವಿಷಯ.
ಲಕ್ಷ್ಮೀ ದೇವಿಯ ಆಶೀರ್ವಾದ ನಮ್ಮ ಮೇಲೆ ನಿರಂತರವಾಗಿರಬೇಕು ಎಂದರೆ ಕೆಲವು ನಕಾರಾತ್ಮಕ ಅಂಶಗಳಿಂದ ದೂರ ಉಳಿಯಬೇಕಾಗುತ್ತದೆ ಅಥವಾ ಅಂತಹ ಗುಣಗಳನ್ನು ಬಿಡಬೇಕಾಗುತ್ತದೆ.
ಅನೈರ್ಮಲ್ಯ ಹಾಗೂ ಅವ್ಯವಸ್ಥೆ.

 

 

ಶುಚಿತ್ವ ಮತ್ತು ಸ್ವಚ್ಛತೆ ಇಲ್ಲದ ಕಡೆ ಸಂಪತ್ತು ಇರುವುದಿಲ್ಲ ಎಂಬ ನಂಬಿಕೆ ಇದೆ.ಎಲ್ಲಿ ಸ್ವಚ್ಚತೆ ಇರುವುದಿಲ್ಲವೋ ಅಲ್ಲಿ ಲಕ್ಷ್ಮೀ ದೇವಿಯ ಸಾನಿಧ್ಯ ಇರುವುದಿಲ್ಲ ಎನ್ನುತ್ತಾರೆ.ಆದ್ದರಿಂದ ಸಂಪತ್ತು ವೃದ್ಧಿಯಾಗುವುದಕ್ಕೆ ಸ್ವಚ್ಚತೆಯೂ ಸಹ ಪ್ರಭಾವ ಬೀರಲಿದೆ.ಓಂದು ವೇಳೆ ಅಂತಹ ಸ್ಥಳದಲ್ಲಿ ಲಕ್ಷ್ಮೀ ಇದ್ದರೆ ಅದು ಲಕ್ಷ್ಮೀಯೇ ಅಲ್ಲ ಬದಲಾಗಿ ಅದು ಅಲಕ್ಷ್ಮೀ.
ಸೋಮಾರಿತನ.

 

ಯಾವುದೇ ಪ್ರಯತ್ನ ನೆಡೆಸದೇ ಏಕಾಏಕಿ ಸಂಪತ್ತು ಗಳಿಸಲು ಸಾಧ್ಯವಿಲ್ಲ.ಕಷ್ಟ ಪಡದೇ ಲಕ್ಷ್ಮೀಯನ್ನು ಒಲಿಸಿಕೊಳ್ಳಬಹುದು ಎಂದುಕೊಂಡಿದ್ದರೆ ಅದು ತಪ್ಪು. ಸಾಧ್ಯವಿಲ್ಲ.ಲಕ್ಷ್ಮೀಯ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕಾದರೆ ಅನಾರೋಗ್ಯದ ಸಂದರ್ಭ ಅಥವಾ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಬೆಳಗ್ಗೆ ವಿಳಂಬವಾಗಿ ಏಳುವುದು, ಸಂಜೆ ವೇಳೆ ಮಲಗುವುದು ಸೇರಿದಂತೆ ಸೋಮಾರಿತನ ಬಿಡಬೇಕು ಎನ್ನುತ್ತದೆ ನಮ್ಮ ಧರ್ಮ ಗ್ರಂಥ ಮತ್ತು ಇವು ಹಿಂದಿನಿಂದಲೂ ನೆಡೆದು ಬಂದಿರುವ ನಂಬಿಕೆಗಳು ಸಹ .

 

 

ವಿಶ್ವಾಸ ಇಡುವುದು.

ನಿಮ್ಮನ್ನು ನೀವು ನಂಬದೆ, ದೇವರನ್ನು ನಂಬಿ ಪ್ರಯೋಜನವಿಲ್ಲ ಎಂದಿದ್ದಾರೆ ಶ್ರೇಷ್ಠ ದಾರ್ಶನಿಕ ಸ್ವಾಮಿ ವಿವೇಕಾನಂದರು. ಅದರಂತೆಯೇ ಸಂಪತ್ತು, ಸಮೃದ್ಧಿಯನ್ನು ಗಳಿಸಲು ನಮ್ಮ ಮೇಲೆ ನಮಗೆ ನಂಬಿಕೆ, ವಿಶ್ವಾಸ ಇರಬೇಕು.ಹಾಗಾದಲ್ಲಿ ಮಾತ್ರ ಲಕ್ಷ್ಮೀ ದೇವಿಯೂ ಒಲಿಯುತ್ತಾಳೆ, ಸದಾ ಕ್ರಿಯಾ ಶೀಲರಾಗಿರಬೇಕು.

ಅತೀ ಆಸೆ.

ಅತಿಯಾದರೆ “ಅಮೃತವೂ ಕೂಡ ವಿಷ” ಎಂಬ ಗಾದೆ ಮಾತಿದೆ. ಅದರಂತೆ,ಶ್ರೀಮಂತಿಕೆಯ ಆಸೆಗಳಿದ್ದಷ್ಟು ಮತ್ತಷ್ಟು ಗಳಿಸಬೇಕೆಂಬ ಅತಿ ಆಸೆಯೂ ಲಕ್ಷ್ಮೀಯ ಸಾನಿಧ್ಯ ಇಲ್ಲದಂತೆ ಮಾಡುತ್ತದೆ.ಆದ್ದರಿಂದ ಅತಿ ಆಸೆ,ಸ್ವಾರ್ಥ, ಕೋಪ, ಇವುಗಳನ್ನು ತ್ಯಜಿಸುವುದರ ಮೂಲಕ ಲಕ್ಷ್ಮೀಯು ಆಶೀರ್ವಾದಕ್ಕೆ ಪಾತ್ರರಾಗಬಹುದಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top