fbpx
ಮನೋರಂಜನೆ

ಮೇಘನಾ ಫೇಸ್‌ಬುಕ್ ಅಕೌಂಟ್ ಬಂದ್…!

ಮೇಘನಾ ಫೇಸ್‌ಬುಕ್ ಅಕೌಂಟ್ ಬಂದ್…!

 

 

ಇವತ್ತು ಅದೆಷ್ಟೋ ಜನಕ್ಕೆ ಬ್ಯಾಂಕ್ ಅಕೌಂಟ್ ಇರುತ್ತೋ, ಇಲ್ಲವೋ.. ಗೊತ್ತಿಲ್ಲ. ಆದ್ರೆ ಫೆಸ್ ಬುಕ್ ಅಕೌಂಟ್ ಮಾತ್ರ ಇರಲೇಬೇಕು ಎನ್ನುವುದು ೪ಜಿ ಜಮಾನದ ವಾಡಿಕೆ. ಇನ್ನು ಸೆಲೆಬ್ರಿಟಿಗಳು, ಸಿನಿಮಾ ಸ್ಟಾರ್‍ಸ್‌ಗಳೆಂದರೆ ಅವರ ಕಥೆಯೇ ಬೇರೆ. ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟ್ಟರ್, ಇನ್ಸ್‌ಸ್ಟಾಗ್ರಾಮ್‌ನಲ್ಲಿ ಎಷ್ಟು ಜನ ನಮ್ಮ ಪೋಸ್ಟ್‌ಗಳನ್ನು ಗಮನಿಸುತ್ತಿದ್ದಾರೆ. ಎಷ್ಟು ಜನ ನಮಗೆ ಲೈಕ್, ಕಾಮೆಂಟ್ಸ್ ಮಾಡುತ್ತಾರೆ. ಎಷ್ಟು ಜನ ನಮ್ಮನ್ನು ಫಾಲೋ ಮಾಡುತ್ತಾರೆ ಎಂಬುದರ ಮೇಲೆಯೂ ಅವರ ಜನಪ್ರಿಯತೆ ಅಳೆಯಲ್ಪಡುತ್ತದೆ. ಇಂದು ಹಾಲಿವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್ ಮತ್ತು ನಮ್ಮ ಸ್ಯಾಂಡಲ್‌ವುಡ್‌ನಲ್ಲೂ ಬಹುತೇಕ ಸ್ಟಾರ್‍ಸ್‌ಗಳು ತಮ್ಮ ಫ್ಯಾನ್ಸ್‌ಗಳೊಂದಿಗೆ ಸಂಪರ್ಕ ಸಾಧಿಸಲು ಈ ಸೋಷಿಯಲ್ ಪ್ಲಾಟ್ ಫಾರಂಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ.

 

 

ಆದರೆ ಇಲ್ಲೊಬ್ಬ ಕನ್ನಡದ ನಟಿ ತಮ್ಮ ಫೇಸ್‌ಬುಕ್ ಅಕೌಂಟ್ ಕ್ಲೋಸ್ ಮಾಡುವ ಮೂಲಕ, ಫೇಸ್‌ಬುಕ್‌ಗೆ ಗುಡ್ ಬೈ ಹೇಳಿzರೆ. ಅಂದಹಾಗೆ, ಆ ನಟಿಮಣಿಯ ಹೆಸರು ಮೇಘನಾ ಗಾಂವ್ಕರ್. ನಮ್ಮ್ ಏರಿಯಾಲ್ ಒಂದಿನ, ಚಾರ್ ಮಿನಾರ್, ಸಿಂಪಲ್ಲಾಗ್ ಇನ್ನೊಂದ್ ಲವ್‌ಸ್ಟೋರಿ ಮೊದಲಾದ ಸಿನಿಮಾಗಳ ಮೂಲಕ ಸಿನಿಪ್ರಿಯರ ಮನಗೆದ್ದಿದ್ದ ಮೇಘನಾ, ಕಳೆದ ಮೂರ್‍ನಾಲ್ಕು ವರ್ಷಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಒಂದಾಗಿರುವ ಫೆಸ್‌ಬುಕ್‌ನಲ್ಲಿ ತುಂಬಾನೇ ಆಕ್ಟೀವ್ ಆಗಿದ್ದರು. ತಮ್ಮ ಪ್ರತಿದಿನದ ವಿಶೇಷತೆಗಳು, ತಾವು ಮಾಡುತ್ತಿರುವ ಕೆಲಸಗಳು, ಭೇಟಿ ನೀಡಿದ ಪ್ರತಿ ಸ್ಥಳ, ಅಲ್ಲಿಯ ವಿಶೇಷತೆಗಳು ಹೀಗೆ ಪ್ರತಿಯೊಂದನ್ನು ಕುರಿತು ತಮ್ಮ ಫೇಸ್‌ಬುಕ್ ಪೇಜಿನಲ್ಲಿ ಅಪ್ಡೇಟ್ ಮಾಡುತ್ತಿದ್ದರು.

 

 

ಹೀಗೆ ಫೆಸ್‌ಬುಕ್‌ನಲ್ಲಿ ಆಕ್ಟೀವ್ ಆಗಿದ್ದ ಮೇಘನಾ ಇದ್ದಕ್ಕಿದ್ದಂತೆ ಕ್ಲೋಸ್ ಮಾಡಲು ಕಾರಣ, ಫಸ್‌ಬುಕ್ ಅಡಿಕ್ಷನ್ ಅಂತೆ. ಫೆಸ್‌ಬುಕ್‌ನ ಅತಿಯಾದ ಅಡಿಕ್ಷನ್ ನಮ್ಮನ್ನ ಡಿಸ್ಟರ್ಬ್ ಮಾಡುತ್ತದೆ. ಕೆಲ ಹವ್ಯಾಸಗಳನ್ನು ಕಡಿಮೆ ಮಾಡಿಕೊಂಡರೆ ನಮಗೆ ಒಳ್ಳೆಯದು. ಹಾಗಾಗಿ ಫೆಸ್‌ಬುಕ್‌ನಿಂದ ಹೊರಬರುತ್ತಿರುವುದಾಗಿ ಮೇಘನಾ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಇನ್ನು ಮುಂದೆ ನಾನು ಫೇಸ್‌ಬುಕ್‌ನಲ್ಲಿರುವುದಿಲ್ಲ. ಒಂದು ವೇಳೆ ನನ್ನ ಹೆಸರಿನಲ್ಲಿ ಕೆಲ ಅಕೌಂಟ್ಸ್ ಕಾರ್ಯ ನಿರ್ವಹಿಸುತ್ತಿದ್ದರೂ ಕೂಡ ಅದು ನಾನಲ್ಲ ಎಂದು ಹೇಳಿಕೊಂಡಿzರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top